ಗಣೇಶ ಹಬ್ಬ ಮಾಡೋಕೆ ಮುಂದಾದ ಜನರಿಗೆ ಬಿಗ್ ಶಾಕ್ : ಹೂವು, ಹಣ್ಣು ಎಲ್ಲವೂ ದುಬಾರಿ!

ಗೌರಿ–ಗಣೇಶ ಹಬ್ಬದ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದೆ. ಆದರೆ ಈ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿಯೂ ತಟ್ಟಿದ್ದು, ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿಕೆಯಾಗಿದೆ.

ಸಿಲಿಕಾನ್ ಸಿಟಿಯ ಜನರು ಇಂದು ಹೂ- ಹಣ್ಣುಗಳ ಖರೀದಿಗೆ ಮಾರುಕಟ್ಟೆಗಳಲ್ಲಿ ಮುಗಿಬಿದ್ದಿದ್ದಾರೆ. ಸುಂದರ ಹಾಗೂ ವೈವಿಧ್ಯಮಯ ಹೂಗಳಿಗೆ ಮಾರು ಹೋಗಿರುವ ಗ್ರಾಹಕರು ದುಬಾರಿ ಬೆಲೆ ನೀಡಿ ಹೂ-ಹಣ್ಣು ಪೂಜಾ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

ಈ ಹಿಂದೆ ವರಮಹಾಲಕ್ಷ್ಮಿ ಹಬ್ಬದ ಹಿಂದಿನ ದಿನ ದಿಢೀರನೆ ಹಬ್ಬದ ಸಾಮಗ್ರಿಗಳ ಬೆಲೆಯೇರಿಕೆಯಾಗಿತ್ತು. ಆದರೆ ಕಳೆದ ಬಾರಿಗಿಂತ ಈ ಬಾರಿ ಹೂವು ಹಣ್ಣಿನ ಬೆಲೆ ಹೆಚ್ಚಾಗಿದೆ ಎಂಬ ಮಾತುಗಳು ಗ್ರಾಹಕರಿಂದ ಕೇಳಿ ಬಂದಿದೆ. ಗೌರಿ ಗಣೇಶ ಸಂಭ್ರಮದಲ್ಲಿದ್ದ ನಾಡಿನ ಜನತೆ ವಸ್ತುಗಳ ಬೆಲೆಯ ಬಿಸಿ ಮುಟ್ಟಿದ್ದು, ಮುಖ್ಯವಾಗಿ ದೇವರ ಪುಷ್ಪ ಸಮರ್ಪಣೆ, ಅಲಂಕಾರಕ್ಕಾಗಿ ಹೂವು ಅತ್ಯವಶ್ಯಕವಾಗಿದೆ. ಹೀಗಾಗಿ ಗ್ರಾಹಕರು ಕೊಂಚ ದುಬಾರಿ ಬೆಲೆ ನೀಡಿ ಖರೀದಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ಇನ್ನು ಹಣ್ಣುಗಳ ದರ ಕೂಡ ಏರಿಕೆಯಾಗಿದ್ದು, ಬಾಳೆಹಣ್ಣು, ದಾಳಿಂಬೆ ಮತ್ತು ಸೇಬು ದರಗಳು ದಿಢೀರ್ ಏರಿಕೆಯಾಗಿದೆ.

ಪ್ರಸ್ತುತ ಬೆಂಗಳೂರಿನ ಹೂ ಮಾರುಕಟ್ಟೆಯಲ್ಲಿ ಒಂದು ಕೆಜಿ ಬಿಡಿ ಹೂವನ್ನು 500 ರಿಂದ 600 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಕನಕಾಂಬರ 2 ಸಾವಿರ,  ಮಲ್ಲಿಗೆ ಮೊಗ್ಗಿನ ದರ ಸಾವಿರದ ಗಡಿ ದಾಟಿದೆ.

ಬೆಂಗಳೂರು ಹೂ ದರ:

ಮಲ್ಲಿಗೆ ಮೊಗ್ಗು (1 ಕೆ.ಜಿ)- 1000 ರೂ.

ಕನಕಾಂಬರ (1 ಕೆ.ಜಿ)- 2000 ರೂ.

ಸೇವಂತಿಗೆ ಮಾರಿಗೆ 80-100 ರೂ.

ಗುಲಾಬಿ( (1 ಕೆಜಿ)- 300 ರೂ.

ಒಂದು ಮಲ್ಲಿಗೆ ಹಾರ- 400 ರಿಂದ 600 ರೂ.

ಒಂದು ಮೊಳ ಹೂವು- 150 ರೂ.

ಸುಗಂಧದ ಹಾರ 150-200 ರೂ.

ಗರ್ಕೆಗೆ 20-30 ರೂ.

ಹಣ್ಣಿನ ದರ:

ಸೇಬು (1 ಕೆಜಿ)- 150-200 ರೂ.

ದಾಳಿಂಬೆ (1 ಕೆಜಿ)- 140-180 ರೂ.

ಮೂಸಂಬಿ (1 ಕೆಜಿ) 70 ರಿಂದ 100 ರೂ.

ಕಿತ್ತಲೆ (1 ಕೆಜಿ)-130 ರೂ.

ಬಾಳೆಹಣ್ಣು (1 ಕೆಜಿ)-100 ರೂ.

ದ್ರಾಕ್ಷಿ (1 ಕೆಜಿ)-150 ರೂ.

ಸೀತಾಫಲ (1 ಕೆಜಿ)- 140 ರೂ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights