ಬಿಹಾರ ಎನ್‌ಡಿಎಯಲ್ಲಿ ಬಿರುಕು? ಶಾಸಕಾಂಗ ಸಭೆ ಬಹಿಷ್ಕರಿಸಿದ ವಿಐಪಿ ಮುಖ್ಯಸ್ಥ ಮುಖೇಶ್ ಸಾಹ್ನಿ!

ಬಿಹಾರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದಲ್ಲಿ ಅಸಮಾಧಾನದ ಕಾವು ಹೊಗೆಯಾಡುತ್ತಿದೆ ಎಂದು ಹೇಳಲಾಗಿತ್ತು. ಇದೀಗ, ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಎನ್‌ಡಿಎ ಶಾಸಕಾಂಗ ಸಭೆಯನ್ನು ವಿಕಾಸ್ಶೀಲ್ ಇನ್ಸಾನ್ ಪಕ್ಷದ (ವಿಐಪಿ) ಮುಖ್ಯಸ್ಥ ಮುಖೇಶ್ ಸಾಹ್ನಿ ಬಹಿಷ್ಕರಿಸಿದ್ದಾರೆ. ಇದು ಮೈತ್ರಿ ಪಕ್ಷಗಳಲ್ಲಿರುವ ಬಿರುಕನ್ನು ಸ್ಪಷ್ಟವಾಗಿ ತೋರಿಸಿದೆ.

ಇನ್ನು ನಾಲ್ಕು ದಿನಗಳಲ್ಲಿ ಬಿಹಾರ ವಿಧಾನಸಭಾ ಅಧಿವೇಶ ಆರಂಭವಾಗಲಿದ್ದು, ಸದನದಲ್ಲಿ ವಿರೋಧ ಪಕ್ಷಗಳನ್ನು ಫೇಸ್‌ ಮಾಡುವುದರ ಬಗ್ಗೆ ಚರ್ಚಸಲು ಸೋಮವಾರ ಶಾಸಕಾಂಗ ಸಭೆ ಕರೆಯಲಾಗಿತ್ತು. ಆದರೆ, ಈ ಸಭೆಗೆ ಮುಖೇಶ್ ಸಾಹ್ನಿ ಮತ್ತು ಅವರ ಶಾಸಕರು ಭಾಗವಹಿಸಲಿಲ್ಲ.

ಜುಲೈ 25 ರಂದು ‘ಶಹಾದತ್-ದಿವಾಸ್’ ಎಂದು ಆಚರಿಸಲಾಗಿದ್ದು, ಅಂದು ದಿವಂಗತ ಸಮಾಜವಾದಿ ಸಂಸದೆ ಫೂಲನ್ ದೇವಿ ಅವರ ಪ್ರತಿಮೆಗಳನ್ನು ಅನಾವರಣಗೊಳಿಸಲು ಮುಕೇಶ್ ಸಾಹ್ನಿ ಅವರಿಗೆ ಅನುಮತಿ ನೀಡಲಿಲ್ಲ. ಇದಾದ ಒಂದು ದಿನದ ಬಳಿಕ ಅವರು ಸಭೆಯನ್ನು ಬಹಿಷ್ಕರಿಸಿದ್ದಾರೆ.

Read Also: CPI-M ನಾಯಕ ಯೆಚೂರಿ ಮಗನ ಸಾವನ್ನು ವಿಕೃತವಾಗಿ ಸಂಭ್ರಮಿಸಿದ ಬಿಹಾರ BJP ಉಪಾಧ್ಯಕ್ಷ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ!

ಸಾಹ್ನಿ ಇದನ್ನು ನಿರಾಕರಿಸಿದ್ದಾರೆ. ಆದರೂ, ಅವರು ಬನಾರಸ್‌ನಲ್ಲಿ ಪೂಲನ್‌ ದೇವಿ ಪ್ರತಿಮೆ ಅನಾವಣಗೊಳಿಸಲು ಅನುಮತಿ ನಿರಾಕರಿಸಿದ್ದಕ್ಕಾಗಿ ಯೋಗಿ ಸರ್ಕಾರವನ್ನು ದೂಷಿಸಿದ್ದಾರೆ. “ನಮ್ಮ ಪಕ್ಷದ ಮಾತುಗಳನ್ನು ಅವರು ಕೇಳದ ಕಾರಣ ಎನ್‌ಡಿಎ ಸಭೆಯನ್ನು ಬಹಿಷ್ಕರಿಸಿದ್ದೇವೆ. ಪ್ರತಿ ಸಭೆಯಲ್ಲೂ ಬಿಜೆಪಿ ಮತ್ತು ಜೆಡಿಯು ಮಾತ್ರ ಮಾತನಾಡುತ್ತಾರೆ. ನಮಗೆ ಅವಕಾಶವಿಲ್ಲ. ಅವರ ಮಾತುಗಳನ್ನು ಕೇಳಿಸಿಕೊಳ್ಳಲು ನಾವೇಕೆ ಸಭೆಯಲ್ಲಿ ಹಾಜರಾಗಬೇಕು” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅದಾಗ್ಯೂ, ಎನ್‌ಡಿಎ ತೊರೆಯುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

“ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರ ಮುಂದುವರಿಯುತ್ತದೆ. ಆದರೆ ಯಾವುದೇ ಮಿತ್ರಪಕ್ಷಗಳಿಗೆ ಯಾವುದೇ ವಿಷಯದ ಬಗ್ಗೆ ಚರ್ಚಿಸಲು ಅವಕಾಶ ನೀಡುವ ವೇದಿಕೆ ಇರಬೇಕು” ಎಂದು ವಿಐಪಿ ಮುಖ್ಯಸ್ಥರು ಹೇಳಿದ್ದಾರೆ.

“ಎನ್‌ಡಿಎ ಸರ್ಕಾರ ತನ್ನ ಪೂರ್ಣ ಅಧಿಕಾರಾವಧಿಯನ್ನು ಮುಗಿಸುತ್ತದೆ. ಬಿಜೆಪಿಯೊಂದಿಗಿನ ನಮ್ಮ ಮೈತ್ರಿ ಬಿಹಾರಕ್ಕೆ ಮಾತ್ರ ಸೀಮಿತವಾಗಿದೆ. ಯುಪಿ ಸೇರಿದಂತೆ ಇತರ ರಾಜ್ಯಗಳಲ್ಲಿ ಏಕಾಂಗಿಯಾಗಿ ಅಥವಾ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ನಾವು ಮುಕ್ತರಾಗಿದ್ದೇವೆ. ಯುಪಿ ವಿಧಾನಸಭಾ ಚುನಾವಣೆಯಲ್ಲಿ 165 ಸ್ಥಾನಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಬಿಹಾರದ ಎನ್‌ಡಿಎ ಅನೇಕ ವಿಷಯಗಳ ಬಗ್ಗೆ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಸಿಲುಕುತ್ತಿದೆ ಎಂದು ಮೂಲಗಳು ತಿಳಿಸಿವೆ. ಹೊಸ ಮಾಲಿನ್ಯ ನಿಯಂತ್ರಣ ನೀತಿ ಮತ್ತು ಜೆಡಿ-ಯು ಅನ್ನು ಬೆಂಬಲಿಸುವ ಎಚ್‌ಎಎಮ್‌ನೊಂದಿಗಿನ ಜಾತಿ ಆಧಾರಿತ ಜನಗಣತಿ ಸಮಸ್ಯೆಗಳ ಬಗ್ಗೆ ಬಿಜೆಪಿ ಮತ್ತು ಜೆಡಿಯು ಭಿನ್ನಾಭಿಪ್ರಾಯವನ್ನು ಹೊಂದಿವೆ.

Read Also: ಬಿಹಾರದಲ್ಲಿ ಚಿರಾಗ್‌ಗೆ ತೇಜಸ್ವಿ ಗಾಳ: ಪಾಸ್ವಾನ್‌ ಮುಂದೆ RSS – ಅಂಬೇಡ್ಕರ್‌ ಆಯ್ಕೆ!

ಯುಪಿ ಬಿಜೆಪಿ ವಿರುದ್ಧದ ತಮ್ಮ ಕೋಪವನ್ನು ವ್ಯಕ್ತಪಡಿಸಿದ ಮುಖೇಶ್ ಸಾಹ್ನಿ, ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಯೋಗಿ ಸರ್ಕಾರದ ರಾಜ್ಯದಲ್ಲಿಯೂ ಇದು ಕಂಡುಬರುವುದಿಲ್ಲ. “ನಾವು ಫೂಲನ್ ದೇವಿ ಅವರ ಪ್ರತಿಮೆಗಳನ್ನು ಅನಾವರಣಗೊಳಿಸಲು ಯುಪಿಗೆ ಹೋದಾಗ, ನಮ್ಮನ್ನು ತಡೆಯಲಾಯಿತು. ಯೋಗಿ ಆದಿತ್ಯನಾಥ್ ಅವರು ಬಿಜೆಪಿಯ ನಾಯಕರು ಮತ್ತು ಅವರು ಈ ರೀತಿ ವರ್ತಿಸುತ್ತಾರೆಂದು ನಾವು ನಿರೀಕ್ಷಿಸುವುದಿಲ್ಲ” ಎಂದು ಹೇಳಿದರು.

ಏತನ್ಮಧ್ಯೆ, ಮುಖೇಶ್ ಸಹ್ನಿ ಅವರಿಗೆ ಕಾಂಗ್ರೆಸ್ ಶಾಸಕ ಪ್ರತಿಮಾ ಕುಮಾರಿ ಅವರು ಎನ್‌ಡಿಎ ತೊರೆದು ಮಹಾಘಟ್‌ಬಂಧನ್‌ ಸೇರುವಂತೆ ಪ್ರಸ್ತಾಪ ಇಟ್ಟಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದರು ಕೂಡ ಮುಕೇಶ್ ಸಾಹ್ನಿಯನ್ನು ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಜೊತೆಗೂಡಿ ಹೋರಾಡಲು ಆಹ್ವಾನಿಸಿದ್ದಾರೆ.

Read Also: ಬಿಹಾರದಲ್ಲಿ ಬಿಜೆಪಿ ವಿರುದ್ದ ಹೊಸ ಮೈತ್ರಿ; ಚಿರಾಗ್‌ ಪಾಸ್ವಾನ್‌ – ಆರ್‌ಜೆಡಿ ನಾಯಕರ ಭೇಟಿ!

Spread the love

Leave a Reply

Your email address will not be published. Required fields are marked *