ಮೋದಿಗೆ ಕನ್ನಡಿಗರು ಇಷ್ಟವಿಲ್ಲವಾ ಅಥವಾ ಯಡಿಯೂರಪ್ಪ ಇಷ್ಟವಿಲ್ಲವಾ? ಪ್ರಿಯಾಂಕ್ ಖರ್ಗೆ
ಪ್ರಧಾನಿ ಮೋದಿಯವರಿಗೆ ಕನ್ನಡಿಗರು ಇಷ್ಟ ಇಲ್ಲವಾ ಅಥವಾ ನಮ್ಮ ಸಿಎಂ ಯಡಿಯೂರಪ್ಪನವರು ಇಷ್ಟ ಇಲ್ಲವಾ? ಎಂದು ಮೋದಿಯವರನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕಳೆದ ವಾರದಿಂದ ದೇಶದ ವಿವಿಧ ರಾಜ್ಯಗಳಲ್ಲಿ ಭಾರಿ ಪ್ರಾಮಾಣದ ಮಳೆಯಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಅತ್ಯಧಿಕ ಮಳೆಯಾಗುತ್ತಿದೆ.
ಭಾರಿ ಮಳೆ ಹಿನ್ನೆಲೆಯಲ್ಲಿ ನೆರೆಪೀಡಿತ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಪರಿಹಾರದ ಭರವಸೆ ನೀಡಿದ್ದೇವೆ ಎಂದು ಪ್ರಧಾನಿ ಮೋದಿ ಟ್ವಿಟ್ ಮಾಡಿದ್ದಾರೆ. ಆದರೆ ತಮ್ಮ ಟ್ವೀಟ್ನಲ್ಲಿ ಕರ್ನಾಟಕದ ಪ್ರವಾಹದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಹಾಗಾಗಿ ಮೋದಿಯವರು ನಿರ್ಲಕ್ಷ್ಯ ಧೋರಣೆಯ ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು, ಭಾರೀ ಮಳೆ ಹಾಗೂ ಪ್ರವಾಹದಿಂದ ಕರ್ನಾಟಕ ರಾಜ್ಯ ಸಂಕಷ್ಟದಲ್ಲಿದೆ. ಆದರೂ, ನೀವು ಪ್ರತಿ ಬಾರಿ ತಾರತಮ್ಯ ನೀತಿ ಅನುಸರಿಸುತ್ತೀರಿ. ನಿಮಗೆ ಕನ್ನಡಿಗರು ಇಷ್ಟ ಇಲ್ಲವಾ ಅಥವಾ ನಮ್ಮ ಸಿಎಂ ಯಡಿಯೂರಪ್ಪನವರು ಇಷ್ಟ ಇಲ್ಲವಾ? ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
PM @narendramodi ji, you reached out & offered help to @TelanganaCMO KCR Garu & @ysjagan Garu. But no help for Sri @BSYBJP avaru?
Karnataka too is ravaged by rains & is suffering.
You don’t like Kannadigas or you don’t like our @BSYBJP
why this unfair treatment each time? https://t.co/W2J1pR7Z8v— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 16, 2020
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಸಹಾಯ ಮಾಡುವ ನಿಮಗೆ ಕನ್ನಡಿಗರು ಹಾಗೂ ಯಡಿಯೂರಪ್ಪನವರು ಕಾಣಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಫಲಕೊಡುತ್ತಾ ಮೋದಿ ಇಮೇಜ್? ಬಿಜೆಪಿ ರೂಪಿಸಿದೆ ಮಾಸ್ಟರ್ಪ್ಲಾನ್!

