ಶ್ರೀರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವನು; ನಾವೇ ಅವನ ನಿಜವಾದ ಭಕ್ತರು: ಅಖಿಲೇಶ್ ಯಾದವ್
ಶ್ರೀರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವನು. ನಾವೇ ಅವನ ನಿಜವಾದ ಭಕ್ತರು ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೋಮವಾರ ಹೇಳಿದ್ದಾರೆ.
ಅಯೋಧ್ಯೆಗೆ ಆಗಮಿಸಿದ ಅಖಿಲೇಶ್, “ರಾಮನು ಸಮಾಜವಾದಿ ಪಕ್ಷಕ್ಕೆ ಸೇರಿದವನು, ನಾವು ರಾಮನ ಭಕ್ತರು. ಹಾಗೆಯೇ ಕೃಷ್ಣನ ಭಕ್ತರು” ಎಂದು ಹೇಳಿದ್ದಾರೆ.
ಅಯೋಧ್ಯೆಯ ಸುತ್ತಲಿನ ರಿಂಗ್ ರಸ್ತೆಯಾದ “ಪರಿಕ್ರಮ ಮಾರ್ಗ್”ದ ಉದ್ದಕ್ಕೂ “ಪಾರಿಜಾತದ ಮರಗಳ” ತೋಟವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ನಿರ್ಮಿಸಿದ್ದೇವೆ. ನಾನು ಸರಯೂ ನದಿಯ ದಡದಲ್ಲಿ ದೀಪಗಳನ್ನು ಮತ್ತು ಭಗವಾನ್ ರಾಮನ ಆರಾಧನೆಗಾಗಿ ‘ಭಜನ್ ಸ್ಥಾಳ್’ ನಲ್ಲಿ ಧ್ವನಿ ವ್ಯವಸ್ಥೆಯನ್ನು ಮಾಡಿದ್ದೆ” ಎಂದು ಅವರು ಹೇಳಿದ್ದಾರೆ.
ಇನ್ನು ಮುಂದೆ ದೊಡ್ಡ ಪಕ್ಷಗಳೊಂದಿಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ. 2022 ರಲ್ಲಿ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು 403 ಸ್ಥಾನಗಳಲ್ಲಿ ಕನಿಷ್ಠ 351 ಸ್ಥಾನಗಳನ್ನು ಗೆಲ್ಲುತ್ತದೆ. ರಾಜ್ಯದಲ್ಲಿ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸವನ್ನು ನನಗಿದೆ. ಸಣ್ಣ ಪಕ್ಷಗಳೊಂದಿಗೆ ಮಾತ್ರ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.
ಕೇಂದ್ರದ ನೂತನ ಕೃಷಿ ಕಾನೂನುಗಳು ರೈತರ ಪಾಲಿಗೆ ಡೆತ್ ವಾರಂಟ್ ಇದ್ದಂತೆ. ಕೇಂದ್ರವು ಮೂರು ಕಾನೂನುಗಳನ್ನು ಜಾರಿಗೆ ತಂದಿರುವುದು ಕೇವಲ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾತ್ರ ಪ್ರಯೋಜನವನ್ನು ಒದಗಿಸಲಿದೆ ಎಂದು ಹೇಳಿದ್ದಾರೆ.