ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದೇ ತರುತ್ತೇವೆ: ಕೆ ಸುಧಾಕರ್

ಮುಸ್ಲೀಮರ ವಿರುದ್ಧ ದ್ವೇಷವನ್ನು ಹರಡುತ್ತಿರುವ ಮಾಧ್ಯಮಗಳು ಮುಸ್ಲೀಂ ಹೆಸರು ಕೇಳಿ ಬರುವ ಎಲ್ಲಾ ಪ್ರಕರಣಗಳಿಗೂ ಜಿಹಾದ್‌ ಎಂಬ ಪದ ಸೇರಿಸಿಕೊಂಡು ಸುದ್ದಿ ಹರಡುತ್ತಲೇ ಇವೆ. ಎಲ್ಲಾ ವಿಷಯದಲ್ಲೂ ಜಿಹಾದ್‌ ಎಂಬುದನ್ನು ಮಾಧ್ಯಮಗಳು ಕಾಮನ್‌ ಎಂಬಂತೆ ಬಳಸಿಕೊಂಡು ವೀಕ್ಷಕರ ಮನದಲ್ಲಿ ಇಸ್ಲಾಮಾಫೋಬಿಯಾವನ್ನು ಬಿತ್ತಲು ಮುಂದಾಗಿವೆ.

ಈ ನಡುವೆ, ಹಲವು ವರ್ಷಗಳಿಂದ ಮತ್ತೆ ಮತ್ತೆ ಚರ್ಚೆಗೆ ಬರುತ್ತಿರುವ ಲವ್‌ ಜಿಹಾದ್‌ ಎಂಬುದರ ಕುರಿತಾದ ಚರ್ಚೆ ಆರಂಭವಾಗಿದ್ದು, ವಿವಾಹ ನಂತರದ ಮಂತಾತರ ನಿಷೇಧ ಕಾನೂನನ್ನು ಜಾರಿಗೆ ತಂದೇ ತರುತ್ತೇವೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್​ ತಿಳಿಸಿದ್ದಾರೆ.

ಮತಾಂತರ ನಿಷೇಧ ಕಾನೂನು ಜಾರಿಗೊಳಿಸುವ ಬಗ್ಗೆ ಈಗಾಗಲೇ ಎಲ್ಲಾ ಹಂತದಲ್ಲಿ ಚರ್ಚೆಯಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಕಾನೂನನ್ನು ಜಾರಿಗೊಳಿಸುತ್ತೇವೆ. ಕಾಯ್ದೆ ಜಾರಿಗೆ ತರಲು ಯು.ಟಿ ಖಾದರ್ ಬಳಿ ಸಲಹೆ ಪಡೆದುಕೊಳ್ಳವ, ಅವರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದು ಅವರು ಹೇಳಿದ್ದಾರೆ.

ವಿದ್ಯುತ್‌ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಸರ್ಕಾರ ಎಂದಾಕ್ಷಣ ಅಕ್ಷಯ ಪಾತ್ರೆ ಅಲ್ಲ, ಸರ್ಕಾರಕ್ಕೂ ಆರ್ಥಿಕ ಇತಿಮಿತಿ ಇದೆ. ಹಾಗಾಗಿ ವಿದ್ಯುತ್ ದರ ಹೆಚ್ಚಳಕ್ಕೆ ಜನ ಸಹಕರಿಸಬೇಕು ಎಂದು ಹೇಳಿದ್ದಾರೆ.

ಒಂದೇ ವರ್ಷದಲ್ಲಿ ಎರಡು ಬಾರಿ ಅತಿವೃಷ್ಠಿಯಾಗಿ ಸಾವಿರಾರು ಕೋಟಿ ರಾಜ್ಯದಲ್ಲಿ ನಷ್ಟವಾಗಿದೆ. ಸರ್ಕಾರ 8 ತಿಂಗಳಿಂದ 6 ಕೋಟಿ ಜನರಿಗೆ ವಿವಿಧ ಬಗೆಯಲ್ಲಿ ಕೋವಿಡ್ ನಿರ್ವಹಣೆ ಮಾಡಿದೆ. ಆರ್ಥಿಕ ಚಟುವಟಿಕೆ ಕಡಿಮೆಯಾಗಿದ್ದು, ಹಣ ಕ್ರೋಢೀಕರಣಕ್ಕೆ ಕಷ್ಟಸಾಧ್ಯವಾಗಿದೆ, ಹಾಗಾಗಿ ಮೆಸ್ಕಾಂ ಬೆಲೆ ಜಾಸ್ತಿಯನ್ನು ಸರ್ಕಾರ ಸಂತೋಷದಿಂದ ಮಾಡಿಲ್ಲ, ಅನಿವಾರ್ಯದಿಂದ ಮಾಡಿದೆ ಎಂದಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್ ಸೇರಿಕೊಳ್ಳುವುದಾಗಿ ಟ್ವೀಟ್ ಮಾಡಿದ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights