ವಿನಯ್ ಕುಲಕರ್ಣಿ ಕೋರ್ಟ್ ವಿಚಾರಣೆಗೆ ಕೊಲೆಯಾದ ಯೋಗೀಶ್ ಗೌಡ ಸಹೋದರಿಯರು ಹಾಜರ್!

ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐಯಿಂದ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿ ವಿಚಾರಣೆ ಇಂದು ಧಾರವಾಡದ 3ನೇ ಹೆಚ್ಚುವರಿ ಸೆಕ್ಷನ್ ಕೋರ್ಟ್ನಲ್ಲಿ ನಡೆಯಲಿದ್ದು, ಕೊಲೆಯಾದ ಯೋಗೇಶ್ ಗೌಡ ಅವರ ಸಹೋದರಿಯರಾದ ಅಕ್ಕಮಹಾದೇವಿ ಮತ್ತು ವಿಜಯ್ ಲಕ್ಷ್ಮಿ ಕೋರ್ಟ್ ಗೆ ಆಗಮಿಸಿದ್ದಾರೆ.

ರಾಜಕೀಯ ಬಣ್ಣ ಪಡೆದುಕೊಂಡ ಯೋಗೀಶ್ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ. ಯೋಗೀಶ್ ಗೌಡ ಪತ್ನಿ ಪತಿ ಕೊಲೆಗೆ ನ್ಯಾಯಕ್ಕಾಗಿ ಹೋರಾಡುತ್ತಲೇ ಏಕಾಏಕಿ ಕಾಂಗ್ರೆಸ್ ಪಕ್ಷ ಸೇರಿಕೊಂಡರು. ಇದು ಭಾರೀ ಆಶ್ಚರ್ಯಕ್ಕೆ ಕಾರಣವಾಗಿತ್ತು. ಇನ್ನೂ ಯೋಗೀಸ್ ಸಹೋದರ ಹಾಗೂ ಸಹೋದರಿಯರು ಯೋಗೀಶ್ ಕೊಲೆಗೆ ವಿನಯ್ ಕುಲಕರ್ಣಿನಿನೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಸಾಲದಕ್ಕೆ ವಿನಯ್ ಕುಲಕರ್ಣಿ ಬಂಧನದ ಬಳಿಕ ಯೋಗೀಶ್ ಗೌಡ ತಾಯಿ ಸಹೋದರಿಯರು ಹರ್ಷ ವ್ಯಕ್ತಪಡಿಸಿದ್ರು. ಈ ನಡುವೆ ವಿನಯ್ ಕುಲಕರ್ಣಿ ತನಿಖೆ ಜೋರಾಗಿ ನಡೆದಿದೆ.

ಕಾಂಗ್ರೆಸ್ ನಾಯಕರು ಮತ್ತು ವಿನಯ್ ಕುಲಕರ್ಣಿ ಇದು ರಾಜಕೀಯ ದುರುದ್ದೇಶ ಎಂದರೆ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮಿಗಳು ಫೇಸ್ ಬುಕ್ ಪೋಸ್ಟ್ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದರ ನಡುವೆ ಇಂದು ವಿನಯ್ ಕುಲಕರ್ಣಿ ವಿಚಾರಣೆ ನಡೆಯಲಿದ್ದು, ಕೊಲೆಯಾದ ಯೋಗೇಶ್ ಗೌಡ ಸಹೋದರಿರಯ ಆಗಮಿಸಿರುವುದು ಭಾರೀ ಕುತೂಹಲ ಮೂಡಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights