ಸಾದಿಲ್ವಾರು ಹಣ ಪಾವತಿಸದ ಸರಕಾರ : ಶಾಲೆಗಳ ಬಿಸಿಯೂಟ ಯೋಜನೆಗಾಗಿ ಶಿಕ್ಷಕರ ಜೇಬಿಗೆ ಬಿತ್ತು ಕತ್ತರಿ

ಈರುಳ್ಳಿ ಶಿಕ್ಷಕರಿಗು ತರಿಸಿದೆ ಕಣ್ಣೀರು. ತರಕಾರಿ ದರ ಹೆಚ್ಚಳದಿಂದ ಶಿಕ್ಷಕರ ಜಬು ಖಾಲಿ ಖಾಲಿಯಾಗಿದೆ. ಸರಕಾರದ ಯೋಜನೆ ಜಾರಿಗೆ ತರಲು ಕೂಡ ಈರುಳ್ಳಿ ದರದ ಬಿಸಿ ಶಾಲೆಗಳಿಗೆ ತಟ್ಟಿದೆ. ಸರಕಾರಿ ಶಾಲೆಯಲ್ಲಿ ಉಳಾಗಡ್ಡಿ ಹುಡುಕಿದ್ರು ಸಿಗುತ್ತಿಲ್ಲ. ಅದೆ ರೀತಿ ಸರಕಾರವು ಕೂಡ 9 ತಿಂಗಳಿನಿಂದ ಸಾದಿಲ್ವಾರು ಖರೀದಿಗೆ 2.ಕೋಟಿ 84 ಲಕ್ಷ ರೂ ಹಣ ಪಾವತಿ ಮಾಡದ ಕಾರಣ,  ಶಿಕ್ಷಕರ ಜಬಿಗೆ ಕತ್ತರಿ ಬಿಳುವ ಜೊತೆ ತರಕಾರಿ ಬಳಕೆ ಕಡಿಮೆಯಾಗಿದೆ.

ಹೌದು 2003-04 ಸಾಲಿನಲ್ಲಿ ಅಂದಿನ ಸಿಎಂ ಎಸ್ ಎಂ ಕೃಷ್ಣ ಅವರು , ರಾಜ್ಯದ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಕಾಳಜಿ ವಹಿಸಿ ಅಕ್ಷರ ದಾಸೋಹದ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದಿದ್ರು. ಶಾಲೆ ಮಕ್ಕಳ ಪೌಷ್ಠಿಕಾಂಶ ಹೆಚ್ಚಳ ,ಆರೋಗ್ಯ ವೃದ್ಧಿ, ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿಸುವ ದೃಷ್ಟಿಯಿಂದ ಯೋಜನೆ ಜಾರಿಗೆ ತಂದಿದ್ದಾರೆ. ಈ ಯೋಜನೆಯಿಂದ ಅದೆಷ್ಟೋ ಬಡ ಮಕ್ಕಳು ಲಾಭ ಪಡೆದು ವಿದ್ಯಾಭ್ಯಾಸ ಮಾಡುವಂತಾಗಿದೆ. ಬಡ ಮಕ್ಕಳು ಹಸಿವುನಿಂದ ಬಳಲಾರದೆ ಅಕ್ಷರಭ್ಯಾಸ ಕೂಡ ಪಡೆಯಲು ಅನುಕೂಲವಾಗಿದೆ. ಆದ್ರೆ, ಯಾದಗಿರಿ ಜಿಲ್ಲೆಯಲ್ಲಿ ಅಕ್ಷರ ದಾಸೋಹ ಯೋಜನೆ ಹಳ್ಳ ಹೀಡಿದಿದೆ..!,ಅಕ್ಷರ ದಾಸೋಹ ಯೋಜನೆಯಡಿ ಹಣ ಪಾವತಿ ಮಾಡದಕ್ಕೆ ಶಾಲೆಯಲ್ಲಿ ತರಕಾರಿ ಕೂಡ ಬಳಕೆ ಕಡಿಮೆಯಾಗಿದೆ. ಅದೆ ರೀತಿ ಮಾರುಕಟ್ಟೆಯಲ್ಲಿ ಈಗ ಈರುಳ್ಳಿ ದರ 100 ರೂ ಗಡಿ ದಾಟಿದ ಹಿನ್ನಲೆ ಸರಕಾರಿ ಶಾಲೆಯಲ್ಲಿ ಈರುಳ್ಳಿ ಬಳಕೆ ಮಾಡುತ್ತಿಲ್ಲ. ತರಕಾರಿ ಬೆಲೆ ಗಗನ್ನಕ್ಕೇರುತ್ತಿದ್ದು, ಶೀಕ್ಷಕರ ಜಬಿಗೆ ಕೂಡ ಕತ್ತರಿ ಬಿದ್ದಿದೆ.ಸರಕಾರ ಹಣ ಪಾವತಿ ಮಾಡದಕ್ಕೆ ವ್ಯಯಕ್ತಿಕವಾಗಿ ತಮ್ಮ ಜಬಿನಿಂದ ಹಣ ಖರ್ಚು ಮಾಡಿ ತರಕಾರಿ ತರುತ್ತಿದ್ದಾರೆ.

ಸರಕಾರ ಪ್ರತಿ ತಿಂಗಳು ಸಾದಿಲ್ವಾರು ಖರೀದಿ ಮಾಡಲು ಕಳೆದ 9 ತಿಂಗಳಿನಿಂದ ಯಾದಗಿರಿ ಜಿಲ್ಲೆಯ ಸರಕಾರಿ ,ಶಾಲೆಗಳಿಗೆ ಹಣ ಪಾವತಿ ಮಾಡಿಲ್ಲ. ಶಾಲೆಯ ಮುಖ್ಯ ಶಿಕ್ಷಕ ಹಾಗೂ ಮುಖ್ಯ ಅಡುಗೆ ಸಹಾಯಕಿ ಅವರ ಜಂಟಿ ಖಾತೆಗೆ ಸರಕಾರ ಹಣ ಪಾವತಿ ಮಾಡಬೇಕು. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಆಯಾ ತಾಲೂಕಾ ಪಂಚಾಯತ್ ಅಧಿಕಾರಿಗಳು ಅಕ್ಷರ ದಾಸೋಹ ಯೋಜನೆಯಡಿ , ಹಣ ಪಾವತಿ ಮಾಡಬೇಕು ಆದ್ರೆ, ತಾಲೂಕಾ ಪಂಚಾಯತ್ ಅಧಿಕಾರಿಗಳು ಹಣ ಪಾವತಿ ಮಾಡಿಲ್ಲ. ಯಾದಗಿರಿ, ಶಹಾಪುರ,ಸುರಪುರ ಸೇರಿ ಒಟ್ಟು 2 ಕೋಟಿ 84 ಲಕ್ಷ ರೂ ಪಾವತಿ ಮಾಡುವದು ಬಾಕಿ ಇದೆ.

ಅಡುಗೆ ಮಾಡಲು, ಸಾಂಬಾರ್ ಪದಾರ್ಥ,ತರಕಾರಿ,ಉಪ್ಪು, ಹಾಗೂ ಅಗತ್ಯ ವಸ್ತುಗಳ ಖರೀದಿಗಾಗಿ 9 ತಿಂಗಳನಿಂದ ಶಿಕ್ಷಕರ ಖಾತೆಗೆ ಹಣ ಪಾವತಿ ಮಾಡಿಲ್ಲ. ಸರಕಾರ ಹಣ ಪಾವತಿ ಮಾಡದಿದ್ದರು, ಶಿಕ್ಷಕರು ಕೆಲ ತರಕಾರಿ ಅಂಗಡಿಗಳಲ್ಲಿ ಉದ್ರಿ ಪಡೆದು ತರುವ ಜೊತೆ ಸಾಲ ಮಾಡಿ ತರಕಾರಿ ತರುತ್ತಿದ್ದಾರೆ. ಆದ್ರೆ, ಕಡಿಮೆ ಪ್ರಮಾಣದಲ್ಲಿ ತರಕಾರಿ ಖರೀದಿ ಮಾಡಿ ತರುತ್ತಿದ್ದಾರೆ. ತರಕಾರಿ ಬೆಲೆ ಕೂಡ ಹೆಚ್ಚಳವಾಗಿದೆ. ಅದರಲ್ಲಿ ಈರುಳ್ಳಿ ದರ 100 ರೂ ಕೆಜಿಯಂತೆ ಮಾರಾಟ ಮಾಡುತ್ತಿರುವ ಹಿನ್ನಲೆ ಶಾಲೆಗಳಲ್ಲಿ ಈರುಳ್ಳಿ ಬಳಕೆ ಮಾಡುತ್ತಿಲ್ಲ. ಈರುಳ್ಳಿ ಖಾಲಿ ಖಾಲಿಯಾಗಿವೆ.

ಸರಕಾರ 1 ರಿಂದ 5 ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟಕ್ಕೆ ಪ್ರತಿ ದಿನ 1 ರೂ 56 ಪೈಸೆ ಪಾವತಿ ಮಾಡುತ್ತದೆ, 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 2 ರೂ 33 ಪೈಸೆ ನಿಗದಿ ಮಾಡಿದೆ.ಈ ದರ ಎಪ್ರೀಲ್ ನಲ್ಲಿ ಜಾರಿಗೆ ತರಲಾಗಿದೆ. ತರಕಾರಿ ಬೆಲೆ ಹೆಚ್ಚಳದಿಂದ ಇನ್ನಷ್ಟು ಮಕ್ಕಳ ಬಿಸಿಯೂಟದ ದರ ಹೆಚ್ಚಳ ಮಾಡಿದ್ರೆ, ಬಿಸಿಯೂಟದಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬಳಕೆ ಮಾಡುವ ಜೊತೆ ಊಟದಲ್ಲಿ ಗುಣಮಟ್ಟ ಕಾಯ್ದು ಕೊಳ್ಳ ಬಹುದಾಗಿದೆ.

ಈ ಬಗ್ಗೆ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ದೊಡ್ಡಪ್ಪ ಹೊಸಮನಿ ಅವರು ಮಾತನಾಡಿ, ಕೆಲ ತಾಂತ್ರಿಕ ಹಾಗೂ ವಿವಿಧ ಕಾರಣದಿಂದ ಸಾದಿಲ್ವಾರು ಹಣ ಶಾಲೆಗಳಿಗೆ ಪಾವತಿ ಮಾಡಿಲ್ಲ ,ಮಕ್ಕಳಿಗೆ ಬಿಸಿಯೂಟದ ಯಾವುದೇ ಸಮಸ್ಯೆಯಾಗದಂತೆ ಮಾಡಲಾಗುತ್ತಿದೆ. ಶೀಘ್ರ ಹಣ ಪಾವತಿ ಮಾಡಲಾಗುತ್ತದೆ ಎಂದರು.

ಯಾದಗಿರಿ ಜಿಲ್ಲೆಯಲ್ಲಿ 1046 ಸರಕಾರಿ ಶಾಲೆಗಳಿದ್ದು, ಅನುದಾನಿತ ಶಾಲೆ 54 ,ಒಟ್ಟು 1100 ಶಾಲೆಗಳಲ್ಲಿ ಬಿಸಿಯೂಟ ಜಾರಿ ಇದೆ. ಅಕ್ಷರ ದಾಸೋಹದ ಬಿಸಿಯೂಟದ ಸೌಲಭ್ಯ 173378 ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ರಿಯಾಲಿಟಿ ಚೆಕ್ ಮಾಡಿದಾಗ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬಳಕೆ ಮಾಡದೆ ಇರುವದು ಬೆಳಕಿಗೆ ಬಂದಿದೆ. ಕೂಡಲೇ ಸರಕಾರ 9 ತಿಂಗಳ ಬಾಕಿ ಇರುವ ಸಾದಿಲ್ವಾರು ಹಣ ಪಾವತಿ ಮಾಡಿ, ಶಾಲೆಯಲ್ಲಿ ಹೆಚ್ಚಿನ ತರಕಾರಿ ಬಳಕೆ ಮಾಡಿ ಶಾಲೆ ವಿದ್ಯಾರ್ಥಿಗಳ ಕಾಳಜಿ ತೊರಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights