ರಷ್ಯಾದಲ್ಲಿ ಬಸ್ ಸ್ಫೋಟ : ಓರ್ವ ಮಹಿಳೆ ಮೃತ, 17 ಮಂದಿಗೆ ಗಾಯ..!

ರಷ್ಯಾದ ಬಸ್ ನಲ್ಲಿ ಸ್ಫೋಟ ಸಂಭವಿಸಿ ಓರ್ವ ಮೃತಪಟ್ಟಿದ್ದು 17 ಮಂದಿ ಗಾಯಗೊಂಡಿದ್ದಾರೆ.

ಪಶ್ಚಿಮ ರಷ್ಯಾದ ಬಸ್ ನಲ್ಲಿ ಗುರುವಾರ ರಾತ್ರಿ ಸ್ಫೋಟ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟಿದ್ದು, ಕನಿಷ್ಠ 17 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ಮುಂಜಾನೆ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ದುರಂತ ಸಂಭವಿಸಿದಾಗ ಬಸ್ ನಲ್ಲಿ 35 ಪ್ರಯಾಣಿಕರು ಇದ್ದರು ಎನ್ನಲಾಗುತ್ತಿದೆ.

“ಇದು ಭಯೋತ್ಪಾದಕ ದಾಳಿ ಎಂದು ಸೂಚಿಸಲು ಯಾವುದೇ ಪುರಾವೆಗಳು ಇಲ್ಲ” ಎಂದು ಸ್ಫೋಟ ಸಂಭವಿಸಿದ ಬಳಿಕ ವೊರೊನೆಜ್ ಉಪ ಗವರ್ನರ್ ಸೆರ್ಗೆಯ್ ಸೊಕೊಲೊವ್ ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಬಸ್ ಶಾಪಿಂಗ್ ಸೆಂಟರ್ ಬಳಿಯ ನಿಲ್ದಾಣದಲ್ಲಿದ್ದಾಗ ಸ್ಫೋಟ ಸಂಭವಿಸಿದೆ. ದಾರಿಹೋಕರು ತೆಗೆದ ವೀಡಿಯೋ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಸ್ಫೋಟದ ತೀವ್ರತಿಗೆ ಬಸ್ ನ ಮೇಲ್ಛಾವಣಿ ಹಾರಿ ಹೋಗಿದೆ. ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights