ಅಂತ್ಯಕ್ರಿಯೆ ನಡೆಸಲು ಹಣವಿಲ್ಲದೆ ಅಜ್ಜನ ಶವ ಫ್ರಿಜ್‌ನಲ್ಲಿಟ್ಟ ಮೊಮ್ಮಗ..!

ಅಂತ್ಯಕ್ರಿಯೆ ನಡೆಸಲು ಹಣವಿಲ್ಲದೆ ಅಜ್ಜನ ಶವವನ್ನು ಮೊಮ್ಮಗ ಫ್ರಿಜ್‌ನಲ್ಲಿಟ್ಟ ದಾರುಣ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ಅಂತ್ಯಕ್ರಿಯೆ ನಡೆಸಲು ಹಣವಿಲ್ಲದ ಕಾರಣ ತನ್ನ 93 ವರ್ಷದ ಅಜ್ಜನ ಶವವನ್ನು ಫ್ರಿಡ್ಜ್ ಒಳಗೆ ಇಟ್ಟಿರುವುದು ಬೆಳಕಿಗೆ ಬಂದಿದೆ. ನೆರೆಹೊರೆಯವರು ದುರ್ವಾಸನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ತೆಲಂಗಾಣ ವಾರಂಗಲ್‌ನ ಪರ್ಕಳದಲ್ಲಿರುವ ಮನೆಯಲ್ಲಿ ಪೊಲೀಸ್ ತಂಡ ಫ್ರಿಜ್ ಒಳಗೆ ಕೊಳೆತ ದೇಹವನ್ನು ಕಂಡು ಶಾಕ್ ಆಗಿದ್ದಾರೆ.

ನಿವೃತ್ತ ವ್ಯಕ್ತಿ ಮತ್ತು ಮೊಮ್ಮಗ ನಿಖಿಲ್ (23) ವಾರಂಗಲ್‌ನ ಪರ್ಕಳದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಜ್ಜಗೆ ಬರುತ್ತಿದ್ದ ಪಿಂಚಣಿಯಿಂದ ಇಬ್ಬರು ಬದುಕು ಸಾಗಿಸುತ್ತಿದ್ದರು. ಆದರೆ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದ ಅಜ್ಜ ಕಳೆದೆರೆಡು ದಿನಗಳ ಹಿಂದೆ ಪ್ರಾಣ ಬಿಟ್ಟಿದ್ದಾರೆ. ಅಜ್ಜನ ಸಾವಿನ ಸುದ್ದಿ ತಿಳಿದರೆ ಬರುವ ಪಿಂಚಣಿ ಕೈತಪ್ಪುವ ಭಯದಲ್ಲಿ ಮೊಮ್ಮ ನಿಖಿಲ್ ಅಜ್ಜನ ದೇಹವನ್ನು ಬೆಡ್‌ಶೀಟ್‌ನಿಂದ ಸುತ್ತಿ ಫ್ರಿಜ್‌ನಲ್ಲಿ ಇರಿಸಿದ್ದಾನೆ. ನಿಖಿಲ್ ಬಳಿ ಹಣವಿಲ್ಲದ ಕಾರಣ ಅಂತಿಮ ವಿಧಿವಿಧಾನಗಳನ್ನು ಮಾಡಲಿಲ್ಲ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ.  ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಾಗಿದೆ.

ಕೊರೊನಾ ಅನ್ನೋ ಮಹಾಮಾರಿ ಜನರನ್ನು ಯಾವ ಹಂತಕ್ಕೆ ನಿಲ್ಲಿಸಿದೆ ಅನ್ನೋದಕ್ಕೆ ಇದೊಂದು ನಿದರ್ಶನವಷ್ಟೇ. ಇಂತಹ ಹಲವಾರು ವಿಚಿತ್ರವಾದ ಘಟನೆಗಳು ದೇಶದಲ್ಲಿ ನಡೆಯುತ್ತಲೇ ಇವೆ. ಸರ್ಕಾರ ಬಡ ಜನರ ಆರ್ಥಿಕ  ಸಹಾಯಕ್ಕೆ ನಿಲ್ಲುವ ಬದಲು ಲಾಕ್ ಡೌನ್ ಹೇರುತ್ತಲೇ ಇರುವುದು ಜನರ ದುಡುವೆಗೆ ಜೀವನಕ್ಕೆ ಭಾರೀ ದೊಡ್ಡಪೆಟ್ಟನೇ ಕೊಟ್ಟಿದೆ. ಸರ್ಕಾರದ ನಿರ್ಲಕ್ಷ್ಯಕ್ಕೆ ಜನ ಅತಂತ್ರರಾಗಿ ಜೀವನ ಕಳೆದುಕೊಳ್ಳುವಂತ ಹೀನಾಯ ಸ್ಥಿತಿ ದೇಶದಲ್ಲಿ ಸೃಷ್ಟಿಸಿರುವ ಸರ್ಕಾರಗಳು ಜನರ ಜೀವನದ ಬಗ್ಗೆ ಯೋಚಿಸಬೇಕಿದೆ. ಅವರ ಆರ್ಥಿಕ ಸಂಕಷ್ಟಕ್ಕೆ ನೆರವಾಗಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights