ಭಾರೀ ಮಳೆ ನೀರಿನಿಂದ ಮನೆಯಿಂದ ಹೊರಬರಲು ಒದ್ದಾಡಿದ ವೃದ್ಧ!
ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಜನ ಮನೆಯಿಂದ ಹೊರಬರುಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ರಾಜ್ಯ ರಾಜ್ಯಧಾನಿಯಲ್ಲಿ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ತುಂಬಿದ್ದು ಮನೆ ಬಿಟ್ಟು ಹೊರಬರಲು ವೃದ್ಧ ಒದ್ದಾಡಿದ್ದಾನೆ.
ಮಳೆ ನೀರು ನುಗ್ಗಿದ್ದರಿಂದ, ಓರ್ವ ವೃದ್ಧ ಆಸ್ಪತ್ರೆಗೆ ಹೋಗಲು ಪರದಾಡಿದ ಘಟನೆ ನಗರದ ಹಲಸೂರಿನ ಗುಪ್ತ ಲೇಔಟ್ನಲ್ಲಿ ನಡೆದಿದೆ.ಮನೆಯ ಸುತ್ತ ಮುತ್ತ ರಸ್ತೆಯಲ್ಲಿ ಎಲ್ಲಿ ನೋಡಿದರೂ ಸಂಪೂರ್ಣ ಮಳೆ ನೀರು. ರಸ್ತೆಯಲ್ಲಿ ಸಂಪೂರ್ಣವಾಗಿ ಮಳೆ ನೀರು ನಿಂತಿರುವ ಹಿನ್ನೆಲೆಯಲ್ಲಿ ವೃದ್ಥನ ಪರದಾಟ ಹೇಳ ತೀರದ್ದಾಗಿತ್ತು.
ಆರೋಗ್ಯ ಏರುಪೇರು ಆಗಿದ್ದ ಹಿನ್ನೆಲೆ ಅವರು ಆಸ್ಪತ್ರೆಗೆ ಹೊರಟಿದ್ದರು. ಮಳೆಯ ನೀರು ಮೊಣಕಾಲು ತನಕ ಇರುವ ಕಾರಣದಿಂದ ವಯೋ ವೃದ್ಧನಿಗೆ ನಡೆಯಲು ತೊಂದರೆಯಾಗಿದೆ. ಆ ಮನೆಯ ಮುಂದೆ ಮಳೆಯ ನೀರು ನಿಂತಿರುವ ಕಾರಣ ತೊಂದರೆಯಾಗಿದೆ.
ಕೊನೆಗೆ ಕುಟುಂಬದ ಸದಸ್ಯರ ಸಹಾಯದಿಂದ ವೃದ್ಧನನ್ನು ಕಾರ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಿಬಿಎಂಪಿಯ ನಿರ್ಲಕ್ಷ್ಯದಿಂದ ಮಳೆಗಾಲದಲ್ಲಿ ಜನರು ಆತಂಕದಲ್ಲೇ ದಿನದೂಡುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ.