ಭಾರತ v/s ಲಂಕಾ: ಟಿ-20 ಮ್ಯಾಚ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ; ಧೋನಿಯನ್ನು ನೆನಪಿಸಿದ ಇಶಾನ್ ಕಿಶನ್!

ಶ್ರೀಲಂಕಾ ವಿರುದ್ದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ, ತನ್ನ ಗೆಲುವಿನ ಓಟವನ್ನು ಟಿ-20 ಸರಣಿಯಲ್ಲೂ ಮುಂದುವರೆಸಿದೆ. ಭಾನುವಾರ ನಡೆದ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ 38 ರನ್‌ಗಳ ಅಂತರದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 164 ರನ್‌ಗಳನ್ನು ಕಲೆ ಹಾಕಿತ್ತು. 164 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ 18.3 ಓವರ್‌ಗಳಲ್ಲಿ 126 ರನ್‌ ಗಳಿಸಿ, ಆಲ್‌ಔಟ್‌ ಆಯಿತು. ಇದರಿಂದಾಗಿ ಟೀಂ ಇಂಡಿಯಾ ಮೊದಲ ಮ್ಯಾಚ್‌ನಲ್ಲಿಯೇ ಗೆಲುವಿನ ನಗೆ ಬೀರಿದೆ.

ಆಟದಲ್ಲಿ ವಿಕೆಟ್‌ ಕೀಪರ್‌ ಆಗಿ ನಿಂತಿದ್ದ ಇಶಾನ್ ಕಿಶನ್ ಚುರುಕಿನ ಆಟ ಪ್ರದರ್ಶಿಸಿದ್ದು, ಕ್ರಿಕೆಟ್‌ ಅಭಿಮಾನಿಗಳು ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನೇ ನೋಡಿದಂತೆ ಭಾಸಗೊಂಡಿದ್ದಾರೆ.

18ನೇ ಓವರ್‌ನಲ್ಲಿ ವರುಣ್ ಚಕ್ರವರ್ತಿ ಮಾಡಿದ ಬೌಲಿಂಗ್ಅನ್ನು ಲಂಕಾ ನಾಯಕ ದಸುನ್ ಶನಕಾ ಕೊಂಚ ಮುಂದೆಬಂದು ಪುಶ್ ಮಾಡಲು ಪ್ರಯತ್ನಿಸಿದರು. ಅದರೆ, ಅವರ ಬ್ಯಾಟ್‌ಗೆ ಸಿಗಲ ಚೆಂಡು ಕೀಪರ್‌ ಆಗಿ ನಿಂತಿದ್ದ ಕೀಪರ್ ಕಿಶನ್ ಕೈ ಸೇರಿತು. ಕ್ಷಣಾರ್ಧದಲ್ಲೇ ಚೆಂಡನ್ನು ವಿಕೆಟ್‌ಗೆ ಎಸಿದು ಸ್ಟಂಪ್​ ಔಟ್​ ಮಾಡಿದರು. ಇದು ಧೋನಿ ಅವರ ಚಾಕಚಕ್ಯತೆಯನ್ನು ಮತ್ತೊಮ್ಮೆ ನೋಡಿದಂತಿತ್ತು.

ಇದನ್ನೂ ಓದಿ: ಭಾರತ v/s ಶ್ರೀಲಂಕಾ: ಒನ್‌-ಡೇ ಮ್ಯಾಚ್‌ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ!

Spread the love

Leave a Reply

Your email address will not be published. Required fields are marked *