ಭಾರತ v/s ಶ್ರೀಲಂಕಾ: ಒನ್‌-ಡೇ ಮ್ಯಾಚ್‌ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ!

ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್‌ ತಂಡಗಳ ನಡುವೆ ಏಕದಿನ ಪಂದ್ಯಗಳು ನಡೆಯುತ್ತಿವೆ. ಭಾರತ ತಂಡವು 2ನೇ ಒನ್‌-ಡೇ ಪಂದ್ಯದಲ್ಲಿಯೂ ಗೆಲುವು ಸಾಧಿಸಿದ್ದು, ಲಂಕಾ ವಿರುದ್ದದ ಏಕದಿನ ಟೂರ್ನಿಯನ್ನು ಗೆದ್ದುಕೊಂಡಿದೆ.

ಶ್ರೀಲಂಕಾ ವಿರುದ್ದ 3 ಏಕದಿನ ಪಂದ್ಯಗಳಲ್ಲಿ 2 ಪಂದ್ಯವನ್ನು ಭಾರತ ತಂಡ ಗೆದಿದೆ. ಅಲ್ಲದೆ, ಈ ಮೂಲಕ ಭಾರತ ತಂಡವು ಶ್ರೀಲಂಕಾ ವಿರುದ್ದ ಒಟ್ಟು 93 ಏಕದಿನ ಪಂದ್ಯಗಳಮ್ಮು ಗೆದ್ದಿದ್ದು,  ಗೆಲುವನ್ನು ತನ್ನ ಮುಡಿಗೇರಿಸಿಕೊಂಡಿದೆ. ಇದು ಭಾರತ ತಂಡದ ವಿಶ್ವ ದಾಖಲೆಯಾಗಿದೆ.

ಈ ಮೂಲಕ ಭಾರತ ತಂಡವು ತನ್ನ ವಿರುದ್ಧ ಜಯ ಸಾಧಿಸಿ ಅಗ್ರ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳನ್ನು ಹಿಂದಿಕ್ಕಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಲಂಕಾ ಮಾತ್ರವಲ್ಲದೇ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧವೂ ಭಾರತ 55 ಏಕದಿನ ಪಂದ್ಯ ಗೆದ್ದಿದೆ.

ಅಲ್ಲದೆ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳೂ ಕೂಡ ಎರಡನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡವು 92 ಏಕದಿನ ಪಂದ್ಯಗಳನ್ನು ಗೆದ್ದಿದೆ. ಮಾತ್ರವಲ್ಲದೆ, ಪಾಕಿಸ್ತಾನ ಕೂಡ ಶ್ರೀಲಂಕಾ ವಿರುದ್ಧ ಒಟ್ಟು 92 ಪಂದ್ಯಗಳನ್ನು ಗೆದ್ದಿದೆ.

2007 ರಿಂದ ಸತತವಾಗಿ ಲಂಕಾ ವಿರುದ್ಧ ಸರಣಿ ಜಯ ಸಾಧಿಸುತ್ತಾ ಬಂದಿರುವ ಭಾರತ ಈ ಸರಣಿಯನ್ನೂ ವಶಪಡಿಸಿಕೊಂಡರೆ ಸತತವಾಗಿ ಶ್ರೀಲಂಕಾ ವಿರುದ್ಧ 9ನೇ ಸರಣಿ ಗೆದ್ದಂತಾಗುತ್ತದೆ. ಇದಲ್ಲದೆ ಮತ್ತೊಂದು ವಿಶ್ವ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ಟೀಮ್ ಇಂಡಿಯಾವಿದೆ.

ಇದನ್ನೂ ಓದಿ: ಭಾರತ V/S ಶ್ರೀಲಂಕಾ: ಎಲ್ಲರಿಗೂ ಅವಕಾಶ ನೀಡಬೇಕೆಂಬ ನಿಯಮವಿಲ್ಲ: ಶಿಖರ್ ಧವನ್

Spread the love

Leave a Reply

Your email address will not be published. Required fields are marked *