ಎನ್ಕೌಂಟರ್‌ನಲ್ಲಿ ಉತ್ತರ ಪ್ರದೇಶ ಟಾಪ್‌; ಯೋಗಿ ಆಡಳಿತದ 4 ವರ್ಷದಲ್ಲಿ 125 ಎನ್ಕೌಂಟರ್

ಕಳೆದ ನಾಲ್ಕು ವರ್ಷಗಳ ಹಿಂದೆ ಲಖನೌದಲ್ಲಿ ಅಧಿಕಾರಕ್ಕೇರಿದ ಯೋಗಿ ಸರಕಾರ ಅಪರಾಧಿಗಳ ಎನ್ಕೌಂಟರ್ ವಿಷಯದಲ್ಲಿ ಉಳಿದೆಲ್ಲ ರಾಜ್ಯಗಳನ್ನೂ ಮೀರಿಸಿ ಮುಂದುವರಿದಿದೆ.

ಖುದ್ದು ಸರಕಾರವೇ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಯೋಗಿಯ ನಾಡಿನಲ್ಲಿ ಈವರೆಗೆ ಸುಮಾರು 125 ಅಪರಾಧಿಗಳನ್ನು ಎನ್ಕೌಂಟರಿನಲ್ಲಿ ಸಾಯಿಸಲಾಗಿದೆ.

ಅಂದರೆ ಯೋಗಿ ಆದಿತ್ಯನಾಥರ ಆಡಳಿತದಲ್ಲಿ ಪ್ರತಿ 13 ದಿನಕ್ಕೊಬ್ಬ ಅಪರಾಧಿ ಎನ್ಕೌಂಟರಿನಲ್ಲಿ ನಿಸ್ತೇಜನಾಗುತ್ತಿದ್ದಾನೆ.

ಇದೇ ಅವಧಿಯಲ್ಲಿ ಪೊಲೀಸರು ಎನ್ಕೌಂಟರಿನಲ್ಲಿ 2.5 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಂಕಿ ಅಂಶಗಳು ಹೇಳಿವೆ.

ಈ ಮಧ್ಯೆ ಬಿಹಾರದಲ್ಲಿ ಚುಣಾವಣಾ ಪ್ರಚಾರ ಕಣಕ್ಕೆ ಧುಮುಕಿರುವ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ಹಾಗೂ ಆರ್‌ಜೆಡಿ ಮೇಲೆ ಪ್ರಬಲ ಟೀಕಾಸ್ತ್ರ ಬಳಸಿದ್ದಾರೆ.

ಮೂರು ಹಂತಗಳಲ್ಲಿ ನಡೆಯಲಿರುವ ಬಿಹಾರ ಚುಣಾವಣೆಯಲ್ಲಿ ಬಿಜೆಪಿ ಹಾಗೂ ನಿತೀಶ್ ಕುಮಾರ್ ಅವರ ಜೆಡಿಯು ಪರ 18ಕ್ಕೂ ಹೆಚ್ಚಿನ ಕಡೆಗಳಲ್ಲಿ ಆದಿತ್ಯನಾಥ್ ರ್‍ಯಾಲಿ ನಡೆಸುವ ಕಾರ್‍ಯಕ್ರಮವಿದೆ.


ಇದನ್ನೂ ಓದಿ: ತನ್ನ ತವರಿನಲ್ಲೇ ಸಿಎಂ ಕಾರ್ಯಕ್ರಮಕ್ಕೆ ಭಾಗವಹಿಸದ ಈಶ್ವರಪ್ಪ: ಬಿಎಸ್‌ವೈ ಮೇಲಿನ ಮುನಿಸೇ ಕಾರಣವಾ?

Spread the love

Leave a Reply

Your email address will not be published. Required fields are marked *