ಫ್ಯಾಕ್ಟ್‌ಚೆಕ್ : ಟೈಮ್ ಮ್ಯಾಗಜೀನ್‌ನಲ್ಲಿ ರಾಹುಲ್ ಗಾಂಧಿ ಚಿತ್ರವನ್ನು ಈ ರೀತಿ ಪ್ರಕಟಿಸಿಲ್ಲ! ಇದು ಎಡಿಟ್ ಮಾಡಿದ ಚಿತ್ರ

ರಾಹುಲ್ ಗಾಂಧಿ ಮಗುವಿಗೆ ಹಾಲುಣಿಸುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ, ಹಾಲು ಕುಡಿಯುತ್ತಿರುವ ಮಗುವಿನ ಬಟ್ಟೆಯ ಮೇಲೆ ಪಾಕ್ ಎಂದು ಬರೆದಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. ಈ ಚಿತ್ರ ಅಂತರಾಷ್ಟ್ರೀಯ ನಿಯತಕಾಲಿಕೆ TIME (ಟೈಮ್) ನ ಮುಖಪುಟದಲ್ಲಿ ಪ್ರಕಟವಾಗಿದೆ ಎಂದು ಹಂಚಿಕೊಳ್ಳಲಾಗಿದೆ.

ಈ ಮುಖಪುಟ ಚಿತ್ರದಲ್ಲಿ ‘ಕಾಂಗ್ರೆಸ್‌ನಿಂದ ಭಯೋತ್ಪಾದಕ ದೇಣಿಗೆ’ ಎಂದು ಬರೆದ ಸೂಟ್‌ಕೇಸ್ ಅನ್ನು ರಾಹುಲ್ ಗಾಂಧಿ ಹಿಡಿದಿರುವುದನ್ನು ಕಾಣಬಹುದು. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ರಾಹುಲ್ ಗಾಂಧಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಅನ್ನು ವ್ಯಂಗ್ಯ ಮಾಡುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಹಾಗಿದ್ದರೆ ಟೈಮ್ ಮಾಸಪತ್ರಿಕೆಯಲ್ಲಿ ಇಂತಹ ಚಿತ್ರವನ್ನು ಪ್ರಕಟಿಸಲಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಬ್ಲಾಗ್ ಸ್ಪಾಟ್ ವೆಬ್‌ಸೈಟ್‌ನಲ್ಲಿ ಮೇ 31, 2012 ರಂದು ಪ್ರಕಟವಾದ ಚಿತ್ರವೊಂದು ಲಭ್ಯವಾಗಿದೆ.

ಮೇ 14, 2012 ರ ಲಾಸ್ ಏಂಜಲೀಸ್ ಟೈಮ್ಸ್ ಲೇಖನದಲ್ಲಿ, ಯುನೈಟೆಡ್ ಸ್ಟೇಟ್ಸ್ ರಿಪಬ್ಲಿಕನ್ ಪಾರ್ಟಿಯು, ಚುನಾವಣಾ ಹಣಕ್ಕಾಗಿ ನಿಗಮಗಳನ್ನು ಆಕರ್ಷಿಸುತ್ತದೆ. ಇದು ‘ರಿಪಬ್ಲಿಕನ್ ಪಾರ್ಟಿ ಸಕಲ್ಸ್ ಆಫ್ ದಿ ಬ್ರೆಸ್ಟ್ ಆಫ್ ಬಿಗ್ ಬ್ಯುಸಿನೆಸ್’ ಎಂಬ ಶೀರ್ಷಿಕೆಯನ್ನು ಹಂದಿತ್ತು ಎಂದು ಬೂಮ್ ವರದಿ ಮಾಡಿದೆ.

ವಾಸ್ತವವಾಗಿ ಚಿತ್ರದಲ್ಲಿ ಸೂಟ್‌ಕೇಸ್‌ನಲ್ಲಿ ಅದೇ ಬರಹಗಳನ್ನು ಕಾಣಬಹುದು, ಆದರೆ ಚಿತ್ರದಲ್ಲಿ  ಮಹಿಳೆ ಮಗುವಿಗೆ ಹಾಲುಣಿಸುತ್ತಿರುವುದನ್ನು ಕಾಣಬಹುದು. ಹಿಂಭಾಗದಲ್ಲಿರುವ  GOP ಎಂದರೆ ‘ಗ್ರ್ಯಾಂಡ್ ಓಲ್ಡ್ ಪಾರ್ಟಿ’ ಅಥವಾ ರಿಪಬ್ಲಿಕನ್. ಈ ಲೇಖನದಲ್ಲಿ ಬಳಸಲಾದ ವ್ಯಂಗ್ಯ ಚಿತ್ರವು ರಿಪಬ್ಲಿಕನ್ ಪಾರ್ಟಿ ಆಫ್ ಅಮೆರಿಕದ ನಿಧಿಗಾಗಿ ದೇಶದ ದೊಡ್ಡ ಸಂಸ್ಥೆಗಳ ಮೇಲೆ ಅವಲಂಬಿತವಾಗಿದೆ ಎಂದು ತೋರಿಸುತ್ತದೆ.

TIME ಕವರ್‌ ಪೇಜ್‌ನಲ್ಲಿ ರಾಹುಲ್ ಗಾಂಧಿಯವರ ಚಿತ್ರವನ್ನು ಪ್ರಕಟಿಸಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರವಾಗಲಿ ಯಾವುದೇ ವಿಶ್ವಾಸಾರ್ಹ ಸುದ್ದಿ ಮೂಲಗಲಾಗಲಿ ಲಭ್ಯವಾಗಿಲ್ಲ. ಅಲ್ಲದೆ ಕೆಲವು ವರ್ಷಗಳ ಹಿಂದೆ ಇದೇ ಚಿತ್ರಕ್ಕೆ ಪ್ರಧಾನಿ ಮೋದಿಯವರ ಚಿತ್ರವನ್ನು ಬಳಸಿ ವ್ಯಂಗ್ಯ ಮಾಡಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಟೈಮ್ ಮಾಸಪತ್ರಿಕೆಯಲ್ಲಿ 2012ರಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರವನ್ನು, ಎಡಿಟ್ ಮಾಡಿ ರಾಹುಲ್ ಗಾಂಧಿ ಚಿತ್ರವನ್ನು ಸೇರಿಸಲಾಗಿದೆ. ಹಿಂದೆ ಪ್ರಧಾನಿ ಮೋದಿ ಅವರ ಚಿತ್ರವನ್ನು ಹಂಚಿಕೊಳ್ಳಲಾಗಿತ್ತು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್ ಚಕರ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಿಂದೂ ದೇವಾಲಯದ ವಿಗ್ರಹಗಳನ್ನು ವಿರೂಪಗೊಳಿಸಿದ್ದು ಮುಸ್ಲಿಮರಲ್ಲ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights