ರಾಜಸ್ಥಾನಿ ಜಾನಪದ ಸಂಗೀತಕ್ಕೆ ನೃತ್ಯ ಮಾಡಿದ ಡಾ. ಕಫೀಲ್ ಖಾನ್ : ವಿಡಿಯೋ ಹಂಚಿಕೊಂಡ ಪತ್ನಿ!
ಉತ್ತರ ಪ್ರದೇಶದ ಬಹರಾಯಿಚ್‌ನಲ್ಲಿ ರೋಗಿಗಳಿಗೆ ಬಲವಂತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಆರೋಪದಡಿ ಡಾ. ಕಫೀಲ್ ಖಾನ್ ಅವರನ್ನು ಅಮಾನತ್ತುಗೊಳಿಸಿದ್ದ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ತಡೆ ಹಿಡಿದಿದೆ. ಆದೇಶಕ್ಕೆ ತಡೆ ನೀಡಿದ ಏಕಸದಸ್ಯ ಪೀಠದ ನ್ಯಾ. ಸರಳ್ ಶ್ರೀವಾಸ್ತವ ಅವರು ಡಾ. ಖಾನ್ ಅವರ ವಿರುದ್ಧದ ವಿಚಾರಣೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ.
ಈ ಆದೇಶದ ಬಳಿಕ ಕಫೀಲ್ ಖಾನ್ ಸ್ಥಳೀಯ ನೃತ್ಯಗಾರನೊಂದಿಗೆ ರಾಜಸ್ಥಾನಿ ಜಾನಪದ ಸಂಗೀತಕ್ಕೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಅವರ ಪತ್ನಿ ಡಾ ಶಬಿಸ್ತಾ ಖಾನ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
https://twitter.com/ShabistaDr/status/1438023140659982339?ref_src=twsrc%5Etfw%7Ctwcamp%5Etweetembed%7Ctwterm%5E1438023140659982339%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fdr-kafeel-khan-dance-allahabad-high-court-up-govt-suspension-order-1853073-2021-09-15
ಉತ್ತರ ಪ್ರದೇಶ ಪೊಲೀಸರು 2018ರಲ್ಲಿ ಖಾನ್ ಅವರನ್ನು ಬಹರಾಯಿಚ್ ಜಿಲ್ಲಾ ಆಸ್ಪತ್ರೆ ಆಡಳಿತ/ ಉಸ್ತುವಾರಿ ಅನುಮತಿ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಸಾರ್ವಜನಿಕ ಉಪಟಳಕ್ಕೆ ಕಾರಣವಾದ ಆರೋಪದಡಿ ಬಂಧಿಸಿದ್ದರು. ಇದೇ ವೇಳೆ ಅವರ ಸಹಾಯಕರಾದ ಸೂರಜ್ ಪಾಂಡೆ ಮತ್ತು ಮಹಿಪಾಲ್ ಸಿಂಗ್ ಅವರನ್ನೂ ಸಹ ವಶಕ್ಕೆ ಪಡೆಯಲಾಗಿತ್ತು. ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿತ್ತು. ತಮ್ಮ ವಿರುದ್ಧ ಇಲಾಖಾ ವಿಚಾರಣೆಯನ್ನು ಆರಂಭಿಸಿ ಎರಡು ವರ್ಷಗಳೇ ಕಳೆದರೂ ಅದನ್ನು ಇನ್ನೂ ಪೂರ್ಣಗೊಳಿಸಲಾಗಿಲ್ಲ ಎಂದು ಆಕ್ಷೇಪಿಸಿ ಖಾನ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್ ಈ ಹಿಂದೆ ನೀಡಿರುವ ತೀರ್ಪಿನ ಅನ್ವಯ ಸುದೀರ್ಘ ವಿಳಂಬಿತ ಅವಧಿಯವರೆಗೆ ಅಮಾನತು ಆದೇಶ ಉಳಿಯುವುದಿಲ್ಲ ಎಂದು ವಾದಿಸಲಾಗಿತ್ತು.
ಮತ್ತೊಂದೆಡೆ, ಸರ್ಕಾರಿ ವಕೀಲ, ಎಕೆ ಗೋಯೆಲ್ ಅವರು, ಖಾನ್ ವಿರುದ್ಧದ ತನಿಖಾ ವರದಿಯನ್ನು ಆಗಸ್ಟ್ 27, 2021 ರಂದು ಸಲ್ಲಿಸಿದ್ದು ಮತ್ತು ಅದರ ಪ್ರತಿಯನ್ನು ಅರ್ಜಿದಾರರಿಗೆ ಆಗಸ್ಟ್ 28, 2021 ರಂದು ಕಳುಹಿಸಲಾಗಿದೆ ಎಂದು ಅರ್ಜಿದಾರರು ವಿಚಾರಣಾ ವರದಿಯ ವಿರುದ್ಧ ಆಕ್ಷೇಪಣೆ ಸಲ್ಲಿಸುವಂತೆ ಕೇಳಿದರು. ಎಲ್ಲಾ ಪ್ರತಿವಾದಿಗಳಿಗೆ ಪ್ರತಿ ಅಫಿಡವಿಟ್ ಸಲ್ಲಿಸಲು ನಾಲ್ಕು ವಾರಗಳ ಸಮಯವನ್ನು ನ್ಯಾಯಾಲಯವು ನೀಡಿದೆ.