ಮದ್ಯ ಮಾಫಿಯಾದ ಮೇಲೆ ದಾಳಿ : ಕಾನ್‌ಸ್ಟೆಬಲ್ ಹತ್ಯೆ – ಆರೋಪಿ ಮೇಲೆ ಎನ್‌ಕೌಂಟರ್!
ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಮದ್ಯ ಮಾಫಿಯಾದ ಮೇಲೆ ದಾಳಿ ಮಾಡಿದ ವೇಳೆ ಕಾನ್‌ಸ್ಟೆಬಲ್‌ನನ್ನು ಹತ್ಯೆಗೈದ ಪ್ರಮುಖ ಆರೋಪಿ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದಾನೆ.
ಬುಧುವಾರ ಮದ್ಯ ಮಾಫಿಯಾ ಕಿಂಗ್‌ಪಿನ್‌ಗೆ ವಾರಂಟ್ ನೀಡಲು ಪೊಲೀಸ್ ತಂಡ ಕಾಸ್‌ಗಂಜ್‌ನ ಹಳ್ಳಿಯೊಂದಕ್ಕೆ ಹೋದಾಗ ಕಾನ್‌ಸ್ಟೆಬಲ್‌ನನ್ನು ಥಳಿಸಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ, ಕಾಸ್ಗಂಜ್ ಎಸ್‌ಪಿ ಮನೋಜ್ ಸೋಂಕರ್, ಎನ್‌ಕೌಂಟರ್‌ನಲ್ಲಿ ಆರೋಪಿಗೆ ಗುಂಡು ಹಾರಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಈತನ ಪತ್ತೆ ಕಾರ್ಯ ಮುಮದುವರೆದಿದೆ.
ಕಾಸ್ಗಂಜ್ನಲ್ಲಿ ಏನಾಯಿತು?
ಮಂಗಳವಾರ ಸಂಜೆ ಕಾಸ್‌ಗಂಜ್ ಪ್ರದೇಶದ ಅಕ್ರಮ ಮದ್ಯ ಕಾರ್ಖಾನೆಯ ಮೇಲೆ ದಾಳಿ ನಡೆಸಲು ಹೋದಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ನನ್ನು ಹತ್ಯೆ ಮಾಡಲಾಗಿದ್ದು, ಒಬ್ಬ ಎಸ್‌ಐ ಗಾಯಗೊಂಡಿದ್ದರು.
Chief Minister has directed for treatment of the inspector who has been injured and announced an ex-gratia of Rs 50 lakhs and govt job for a family member of the constable who lost his life: Chief Minister's Office
Both the inspector & constable were held hostage in Kasganj.
— ANI UP (@ANINewsUP) February 9, 2021
ಮೃತ ಕಾನ್‌ಸ್ಟೆಬಲ್‌ನನ್ನು ದೇವೇಂದ್ರ , ಎಸ್‌ಐ ಅವರನ್ನು ಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ.ಮದ್ಯ ಮಾಫಿಯಾದ ಆರೋಪಿಗಳು ಪೊಲೀಸರನ್ನು ಸೆರೆಹಿಡಿದು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರನ್ನು ಕೋಲುಗಳು ಮತ್ತು ಇತರ ಶಸ್ತ್ರಾಸ್ತ್ರಗಳಿಂದ ಹೊಡೆದು ಥಳಿಸಲಾಗಿದೆ.
ಯುಪಿ ಸಿಎಂ ಆದಿತ್ಯನಾಥ್ :-
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಆದಿತ್ಯನಾಥ್ ಮೃತ ಕಾನ್‌ಸ್ಟೆಬಲ್ ದೇವೇಂದ್ರ ರಕ್ತಸಂಬಂಧಿಗಳಿಗೆ 50 ಲಕ್ಷ ರೂ. ಮತ್ತು ಕುಟುಂಬದ ಸದಸ್ಯರಿಗೆ ಉದ್ಯೋಗ ಘೋಷಿಸಿದ್ದಾರೆ. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ.

