ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಸ್ತಾಪ; ಸದನದಲ್ಲಿ ಬಿಜೆಪಿ-ಕಾಂಗ್ರೆಸ್‌ ಶಾಸಕರ ನಡುವೆ ವಾಗ್ಸಮರ!

ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಮತ್ತು ಸೆಮೆಂಟ್‌ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿಚಾರವು ವಿಧಾನಸಭಾ ಅಧಿವೇಶನದಲ್ಲಿ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ವಾಗ್ಸಮರವನ್ನು ಉಂಟುಮಾಡಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸುತ್ತಾ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ವಿಚಾರದಲ್ಲಿ ಯುಪಿಎ ಸರ್ಕಾರದಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಹೆಚ್ಚಳ ಮಾಡಿರುವ ಅಬಕಾರಿ ಸೆಸ್ ವಿಚಾರವನ್ನು ಪ್ರಸ್ತಾಪಿಸಿದ್ದು, ಬಿಜೆಪಿಗರು ಬೆಲೆ ಏರಿಕೆಗೆ ಮನಮೋಹನ್‌ ಸಿಂಗ್ ಸರ್ಕಾರ ಕಾರಣ ಎಂದು ಹೇಳುತ್ತಾರೆ. ಅವರು ಎಲ್ಲದಕ್ಕೂ ಯುಪಿಎ ಸರ್ಕಾರವನ್ನೇ ದೂರುತ್ತಾರೆ ಎಂದು ಹೇಳಿದರು.

ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ ಅವರು, ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೀರಿ. ಅದಕ್ಕೂ ಇಲ್ಲಿಗೂ ಸಂಬಂಧವಿಲ್ಲ. ನೀವು ಪಾರ್ಲಿಮೆಂಟ್‍ಗೆ ಹೋಗಿದ್ದಿರೇನೋ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ನೀತಿ, ಧೋರಣೆ, ತೀರ್ಮಾನಗಳನ್ನು ಶಾಸನಸಭೆಯಲ್ಲಿ ಚಿರ್ಚಿಸಬಹುದೇ? ನಾವು ಹೇಗೆ ಇದಕ್ಕೆ ಉತ್ತರಿಸಲು ಸಾಧ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಇದು ಆಡಳಿತಾರೂಢ ಬಿಜೆಪಿ ಶಾಸಕರು ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಶಾಸಕರ ನಡುವೆ ಏರಿದ ದನಿಯಲ್ಲಿ ವಾಗ್ವಾದ ನಡೆಯಿತು. ಪರಸ್ಪರ ಮಾತನಾಡಲು ಹಲವು ಸದಸ್ಯರು ಎದ್ದುನಿಂತಿದ್ದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

ನಾವು ಕೇಂದ್ರ ಸರ್ಕಾರದ ಮೇಲೆ ಆರೋಪಿಸುತ್ತಿಲ್ಲ. ಬೆಲೆ ಏರಿಕೆ ಸಂಬಂಧಿಸಿದ ವಾಸ್ತಾವಾಂಶಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಸಿಮೆಂಟ್ ಬೆಲೆ ಏರಿಕೆಯಾಗಿದೆ. ಆ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸದಿದ್ದರೆ ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ಆಗ ವಿರೋಧ ಪಕ್ಷದ ನಾಯಕನಾಗಿ ನಾನು ಜನರಿಗೆ ಏನೆಂದು ಉತ್ತರಿಸಬೇಕು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಬಾಕಿ ಉಳಿದಿದೆ ಗಣಿ ಗುತ್ತಿಗೆದಾರರು ನೀಡಬೇಕಿದ್ದ 2,855 ಕೋಟಿ ರೂ ರಾಜಧನ; ವಸೂಲಿಗೆ ಸರ್ಕಾರಕ್ಕೆ ಹಿಂದೇಟು!

Spread the love

Leave a Reply

Your email address will not be published. Required fields are marked *