ಅಫ್ಘಾನ್ ಅರಮನೆಯಲ್ಲಿ ಗುಂಡಿನ ಸದ್ದು : ಅಧಿಕಾರಕ್ಕಾಗಿ ಮುಲ್ಲಾ ಬರಾದರ್ ಹತ್ಯೆ?
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಅಫ್ಘಾನ್ ಅರಮನೆಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಮಾತ್ರವಲ್ಲದೇ ಈ ದಾಳಿಯಲ್ಲಿ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರದಾರ್ ಸಾವನ್ನಪ್ಪಿದ್ದಾರೆನ್ನುವ ಸುದ್ದಿ ಹರಿದಾಡುತ್ತಿದೆ.
ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಿ ಒಂದು ವಾರದ ಬಳಿಕ ಇಂತಹದೊಂದು ಸುದ್ದಿ ಮಾದ್ಯಮಗಳಲ್ಲಿ ಹರಿದಾಡುತ್ತಿದೆ. ಕಾಬೂಲ್‌ನ ಅಧ್ಯಕ್ಷೀಯ ಅರಮನೆಯಲ್ಲಿ ನಾಯಕರ ನಡುವೆ ವಾಗ್ವಾದವಾಗಿದ್ದು ಗುಂಡಿನ ದಾಳಿ ಮಾಡಲಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅಫ್ಘನ್ ನ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರದಾರ್ ಹಲವು ದಿನಗಳ ಕಾಲ ಕಣ್ಮರೆಯಾಗಿದ್ದಾರೆ. ಆದರೆ ತಾಲಿಬಾನ್ ಇಂತಹ ವರದಿಗಳನ್ನು ನಿರಾಕರಿಸಿದೆ.
ಪಟ್ಟಕ್ಕಾಗಿ ತಾಲಿಬಾನ್‌ನ ಎರಡು ಬಲಿಷ್ಠ ಬಣಗಳ ನಡುವೆ ವಾಗ್ವಾದ
ಆಗಸ್ಟ್ 15 -2021 ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ತನ್ನದೇ ಆದ ಸರ್ಕಾರ ರಚಿಸಿಕೊಂಡಿದೆ. ಕಳೆದ ಒಂದು ವಾರದ ಹಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ಥತ್ವಕ್ಕೆ ಬಂದಿದೆ.
ಆದರೆ ಅಫ್ಘಾನ್ ಅರಮನೆಯಲ್ಲಿ ಅಧಿಕಾರ ವಹಿಸಿಕೊಂಡ ಮುಲ್ಲಾ ಬರಾದರ್ ಬೆಂಬಲಿತ ಕತಾರ್ ಬಣ ಹಾಗೂ ಪಾಕ್ ಬೆಂಬಲಿತ ಹಕ್ಕಾನಿ ಬಣ ಯಾರಿಗೆ ಪ್ರಧಾನಿ ಪಟ್ಟ? ಯಾರಿಗಿಲ್ಲ? ಎನ್ನುವ ಬಗ್ಗೆ ರೈಫಲ್ ಹಿಡಿಕೊಂಡು ನಿರ್ದಾರಕ್ಕಿಳಿದಿತ್ತು. ಶುಕ್ರವಾರ ರಾತ್ರಿ ಅರಮನೆಯಲ್ಲಿ ಗುಂಡಿನ ಸದ್ದು ಕೂಡ ಕೇಳಿ ಬಂದಿದೆ. ಈ ದಾಳಿಯಲ್ಲಿ ಬರಾದರ್ ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಉಗ್ರ ಚಟುವಟಿಗಳಿಂದಾಗಿ 2010ರಲ್ಲಿ ಮುಲ್ಲಾ ಬರಾದರ್ ನನ್ನು ಪಾಕಿಸ್ತಾನ ಅರೆಸ್ಟ್ ಮಾಡಿತ್ತು. ಈ ವೇಳೆ ಪೊಲೀಸರು ಬರಾದರ್ ಗೆ ಚಿತ್ರ ಹಿಂಸೆ ನೀಡಿದ್ದರು. 2018 ಬಿಡುಗಡೆ ಯಾದ ಬರಾದರ್ ಕತಾರ್ ಗ್ಯಾಂಗ್ ತೆಕ್ಕೆಗೆ ಬಿದ್ದಿದ್ದ. ಕತಾರ್ ಉಗ್ರರ ಗ್ಯಾಂಗ್ ಬರಾದರ್ ಗೆ ಸಂಪೂರ್ಣ ಬೆಂಬಲ ನೀಡಿ ಆಫ್ಘಾನ್ ನಲ್ಲಿ ಪ್ರಧಾನಿ ಪಟ್ಟಕ್ಕೇರಲು ಬೆಂಬಲ ನೀಡಿತ್ತು. ಆದರೆ ಪಾಕಿಸ್ತಾನ ಸಾಕಿದ ಹಕ್ಕಾನಿ ಬಣ ಇದಕ್ಕೆ ಮುದ್ದಾಮ್ ಒಪ್ಪಿರಲಿಲ್ಲ. ಹೇಳಿಕೇಳಿ ಹುಕ್ಕಾನಿ ಉಗ್ರರು ಪಾಕಿಸ್ತಾನ್ ಸಾಕಿದ ಹಾವುಗಳೆಂದು ಕರೆಯಲಾಗುತ್ತೆ. ಪಾಕ್ ಬೆಂಬಲಿತ ಹಕ್ಕಾನಿ ಬಲಿಷ್ಠ ಶಸ್ತ್ರಸ್ತ್ರಗಳನ್ನು ಹೊಂದಿದೆ. ಕತಾರ್ ನನ್ನು ಸದೆಬಡಿಯುಷ್ಟು ಶಕ್ತಿ ಇದೆ. ಹೀಗಾಗಿ ಈ ಎರಡು ಬಣಗಳ ನಡುವೆ ಅಧಿಕಾರಕ್ಕಾಗಿ ಜಗಳವಾಗಿದೆ ಎನ್ನಲಾಗುತ್ತಿದೆ. ಈ ವೇಳೆ ಬರಾದರ್ ನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮುಲ್ಲಾ ಬರಾದರ್ ಮರ್ಡರ್?
ಹಕ್ಕಾನಿ ಮತ್ತು ಕತಾರ್ ಗ್ಯಾಂಗ್ ನಡುವೆ ಶೂಟೌಟ್ ಬಳಿಕ ಬರಾದರ್ ನಾಪತ್ತೆಯಾಗಿದ್ದಾರೆ. ಸಭೆಗಳಿಗೂ ಅವರು ಹಾಜರ್ ಆಗ್ತಾಯಿಲ್ಲ. ಹೀಗಾಗಿ ಮುಲ್ಲಾ ಬರಾದರ್ ಹತ್ಯೆ ನಡೆದುಹೋಗಿದೆ ಎಂದು ಬಲವಾಗಿ ಹೇಳಲಾಗುತ್ತಿದೆ. ಆದರೆ ತಾಲಿಬಾನ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಬರಾದರ್ ಸತ್ತಿಲ್ಲ ಅವರು ಜೀವಂತವಾಗಿದ್ದಾರೆನ್ನುತ್ತಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಬರಾದರ್ ಆಡಿಯೋ ಕೂಡ ಬಿಡುಗಡೆ ಮಾಡಿದ್ದು ಆಡಿಯೋದಲ್ಲಿ, “ನನ್ನ ಸಾವಿನ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಕಳೆದ ಕೆಲವು ದಿನಗಳಿಂದ ನಾನು ಪ್ರವಾಸದಲ್ಲಿದ್ದೆ. ಈ ಸಮಯದಲ್ಲಿ ನನ್ನ ಸಹೋದರರು ಮತ್ತು ಸ್ನೇಹಿತರೆಲ್ಲರೂ ಎಲ್ಲೇ ಇದ್ದರೂ ಚೆನ್ನಾಗಿದ್ದೇವೆ. ಮಾಧ್ಯಮಗಳು ಯಾವಾಗಲೂ ನಕಲಿ ಪ್ರಚಾರವನ್ನು ಪ್ರಕಟಿಸುತ್ತವೆ. ಆದ್ದರಿಂದ, ಆ ಎಲ್ಲಾ ಸುಳ್ಳುಗಳನ್ನು ಧೈರ್ಯದಿಂದ ತಿರಸ್ಕರಿಸಿ. ಯಾವುದೇ ಸಮಸ್ಯೆ ಇಲ್ಲ ಮತ್ತು ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ನಿಮಗೆ 100 ಪ್ರತಿಶತ ದೃಢಪಡಿಸುತ್ತೇನೆ” ಎಂದು ಕ್ಲಿಪ್‌ನಲ್ಲಿ ಬರಾದರ್ ದ್ದೆಂದು ಹೇಳುವ ಆಡಿಯೋದಲ್ಲಿ ಹೇಳಲಾಗಿದೆ.
ಆದರೆ ಈ ಆಡಿಯೋ ಬರಾದರ್ ದ್ದೇನಾ ಅಥವಾ ಬರಾದರ್ ಹೆಸರಿನಲ್ಲಿ ಬೇರೆ ಯಾರಾದ್ರು ಇದನ್ನು ರೆಕಾರ್ಡ್ ಮಾಡಿ ಹರಿ ಬಿಟ್ರಾ ಎನ್ನುವ ಅನುಮಾನ ಮೂಡಿದೆ. ಯಾಕೆಂದ್ರೆ ಒಂದು ವೇಳೆ ಬರಾದರ್ ಜೀವಂತವಾಗಿರುವುದು ನಿಜವೇ ಆಗಿದ್ದರೆ ಒಂದು ವಿಡಿಯೋ ಮಾಡಿ ಹರಿಬಿಡಬಹುದಿತ್ತು. ಅಥವಾ ನೇರವಾಗಿ ಕಾಣಿಸಿಕೊಳ್ಳಬಹುದಿತ್ತು. ಇದನ್ನು ಬಿಟ್ಟು ಆಡಿಯೋ ಬಿಡುಗಡೆ ಮಾಡಿರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೀಗಾಗಿ ನಿಜವಾಗಲೂ ಬರಾದರ್ ಸಾವನ್ನಪ್ಪಿದ್ದಾರಾ? ಅಥವಾ ಇಲ್ವಾ? ಅನ್ನೋದು ಇನ್ನು ಸ್ಪಷ್ಟವಾಗಬೇಕಿದೆ. ಈ ಎಲ್ಲಾ ಅನುಮಾನಗಳಿಗೆ ತೆರೆ ಎಳೆಯಲು ಬರದಾರ್ ಕಾಬೂಲ್‌ಗೆ ಹಿಂತಿರುಗುವ ನಿರೀಕ್ಷೆಯಿದ್ದು ಕ್ಯಾಮೆರಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.