‘ಸಿದ್ದರಾಮಯ್ಯ ಚಲೋ ಯಡಿಯೂರಪ್ಪ ಬಾಳ ಕರೆಪ್ಶನ್ ಮಾಡ್ಯಾರಾ’ – ರಮೇಶ್ ಜಾರಕಿಹೊಳಿ
ಮೊನ್ನೆಯಷ್ಟೇ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯಾಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ. ಸಿಡಿ ಕೇವಲ ರಮೇಶ್ ಜಾರಕಿಹೊಳಿ ರಾಸಲೀಲೆಯನ್ನು ಮಾತ್ರ ಬಯಲಿಗೆಳಿದಿಲ್ಲ ಬದಲಿಗೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆ ಆಡಿದ ಮಾತುಗಳಿಂದಲೂ ಹೈಲೆಟ್ ಆಗಿದೆ.
ಹೌದು.. ಹುಡುಗಿ ಜೊತೆ ಮಾತನಾಡುತ್ತಾ ರಮೇಶ್ ಜಾರಕಿಹೊಳಿ ಹೇಳಿದ ಆ ಒಂದು ಮಾತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹುಡುಗಿ ಜೊತೆ ಮಾತನಾಡುತ್ತಾ ರಮೇಶ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದಾರೆ. ” ಸಿದ್ದರಾಮಯ್ಯ ಚಲೋ ಯಡಿಯೂರಪ್ಪ ಬಾಳ್ ಕರೆಪ್ಶನ್ ಮಾಡ್ಯಾರಾ” ಎನ್ನುವ ಮಾತು ಸದ್ಯ ಭಾರೀ ವೈರಲ್ ಆಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ” ರಮೇಶ್ ಸರಿಯಾಗೇ ಹೇಳಿದ್ದಾರೆ” ಎಂದು ಟಾಂಗ್ ಕೊಟ್ಟಿದ್ದಾರೆ.
ಮೈತ್ರಿ ಸರ್ಕಾರ ಬಿಟ್ಟು ಶಾಸಕರನ್ನು ಒಗ್ಗೂಡಿಸಿ ಬಿಜೆಪಿ ಸರ್ಕಾರ ಬರಲು ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿಗೆ ಈ ಸಿಡಿ ವಿಚಾರ ಭಾರಿ ಅವಮಾನಕ್ಕೀಡು ಮಾಡಿದೆ. ಮಾತ್ರವಲ್ಲದೇ ಬಿಜೆಪಿ ಸೇರಿ ಪಕ್ಷದ ಹಿರಿಯ ನಾಯಕರ ಬಗ್ಗೆ ಈ ರೀತಿ ಮಾತನಾಡಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ರಮೇಶ್ ಅವರ ಈ ಹೇಳಿಕೆ ಯಾವ ಹಾದಿಗೆ ಅವರನ್ನು ತಂದು ನಿಲ್ಲಿಸುತ್ತೋ ಕಾದು ನೋಡಬೇಕಿದೆ.

