ಲಂಕೇಶ್‌ ಜನ್ಮದಿನ: ಮಾರ್ಚ್‌ 08 ರಂದು ‘ದೊರೆ ಈಡಿಪಸ್‌’ ನಾಟಕ ಪದರ್ಶನ!

ಹಿರಿಯ ಪತ್ರಕರ್ತ ಪಿ. ಲಂಕೇಶ್ ಅವರ‌ 85ನೇ ಜನ್ಮದಿನದ ನೆನಪಿನಲ್ಲಿ ಮಾರ್ಚ್‌ 8ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ದೊರೆ ಈಡಿಪಸ್‌’ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಲಂಕೇಶ್ ಬರೆದಿರುವ ಹಲವು ನಾಟಕಗಳಲ್ಲಿ ಒಂದಾಗಿರುವ ದೊರೆ ಈಡಿಪಸ್‌ ಎಂಬ ನಾಯಕವನ್ನು ವೇದಿಕೆ ಪ್ರದರ್ಶನಕ್ಕಾಗಿ ಶಶಿಧರ್ ಭಾರಿಘಾಟ್‌ ನಿರ್ದೇಶಿಸಿದ್ದಾರೆ.

ರಾಜ ಈಡಿಪಸ್‌ ಎಂಬಾತ ಗೊತ್ತಿದ್ದೂ ತನ್ನ ತಂದೆಯನ್ನು ಹತ್ಯೆ ಮಾಡಿದವನೇ? ಅರಿವಿದ್ದೂ ತಾಯಿಯನ್ನು ವಿವಾಹವಾದವನೇ? ಅಥವಾ ತಿಳಿದಿದ್ದು ತಾಯಿಯಿ೦ದಲೇ ತನ್ನ ಮಕ್ಕಳನ್ನು ಪಡೆದವನೇ? ಅರಿವಿಲ್ಲದೆ ವ್ಯವಸ್ಥೆಯನ್ನು ಅಳಿಸಿ ಹಾಕಿದನೇ? ಎಂಬುದು ಹಾಗೂ ಗೊತ್ತಿಲ್ಲದೆ ಮಾಡಿದ ತಪ್ಪು ಅವನ ಬದುಕನ್ನು ದುರ೦ತಗೊಳಿಸಿದ ಕ್ಷಣಗಳು ಈ ನಾಟಕದ ಜೀವಾಳವಾಗಿವೆ.

ಸಂಜೆ 6ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಭಾರತ ಯಾತ್ರಾ ಕೇಂದ್ರ, ಪ್ರಯೋಗ ರಂಗ ಸಂಸ್ಥೆಗಳು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಮ್‌ ಅವರಿಗೆ ಲಂಕೇಶ್‌ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಎನ್.ಆರ್. ವಿಶುಕುಮಾರ್‌, ಎಂ.ಕೆ. ಭಾಸ್ಕರ್ ರಾವ್, ಕವಿತಾ ಲಂಕೇಶ್ ಹಾಗೂ ಇಂದಿರಾ ಲಂಕೇಶ್‌ ಅವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಒದಿ: ನಟಿ ತಾಪ್ಸಿ ಪನ್ನು, ನಿರ್ಮಾಪಕ ಕಶ್ಯಪ್‌ ವಿರುದ್ಧ ತೆರಿಗೆ ವಂಚನೆ ಆರೋಪ; ಅಧಿಕಾರಿಗಳಿಂದ ಶೋಧ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights