ಶ್ರಮಿಕ್ ವಿಶೇಷ ರೈಲು: ಉದ್ಧವ್ ಠಾಕ್ರೆ ಮತ್ತು ಕೇಂದ್ರ ರೈಲ್ವೇ ಸಚಿವ ಪಿಯುಶ್ ಗೋಯಲ್ ವಾಕ್ ಸಮರ
ಮಹಾರಾಷ್ಟ್ರದಿಂದ ಇತರ ರಾಜ್ಯಗಳಿಗೆ ವಲಸೆ ಕಾರ್ಮಿಕರನ್ನು ಕಳುಹಿಸಲು ಶ್ರಮಿಕ್ ವಿಶೇಷ ರೈಲುಗಳನ್ನು ಒದಗಿಸುವ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಕೇಂದ್ರ ರೈಲ್ವೇ ಸಚಿವ ಪಿಯುಶ್ ಗೋಯಲ್ ನಡುವೆ ವಾಕ್ ಸಮರ ನಡೆದಿದೆ.
ರಾಜ್ಯದಿಂದ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲು ಅಗತ್ಯವಾದ ಸಂಖ್ಯೆಯಲ್ಲಿ ರೈಲುಗಳನ್ನು ರೈಲ್ವೇ ಇಲಾಖೆ ಒದಗಿಸುತ್ತಿಲ್ಲ ಎಂದು ಉದ್ಧವ್ ಠಾಕ್ರೆ ಆರೋಪಿಸಿದ ಬೆನ್ನಲ್ಲೇ ಭಾನುವಾರ ರಾತ್ರಿ ಪಿಯುಶ್ ಗೋಯಲ್ ಇದಕ್ಕೆ ಟ್ವೀಟ್ ನಲ್ಲಿ ಉತ್ತರಿಸಿ ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಪ್ರಯಾಣಿಕರ ಹೆಸರುಗಳುಳ್ಳ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಪಿಯುಶ್ ಆಗ್ರಹಿಸಿದ್ದಾರೆ. ರೈಲ್ವೇ ನಿಯಮಗಳ ಪ್ರಕಾರ, ವಲಸೆ ಕಾರ್ಮಿಕರನ್ನು ಕಳುಹಿಸುವ ರಾಜ್ಯಗಳು ಹೆಸರುಗಳುಳ್ಳ ಪಟ್ಟಿಯನ್ನು ರೈಲ್ವೇ ಇಲಾಖೆಗೆ ಕಳುಹಿಸಿ, ಆ ಕಾರ್ಮಿಕರನ್ನು ನಿಲ್ದಾಣಕ್ಕೆ ಕರೆತರಬೇಕು.
“ಮಹಾರಾಷ್ಟ್ರದಿಂದ ಹೊರಡಬೇಕಿರುವ 125 ರೈಲುಗಳ ಪಟ್ಟಿ ಎಲ್ಲಿ? ನಡುರಾತ್ರಿ 2 ಘಂಟೆ ಸಮಯಕ್ಕೆ 46 ರೈಲುಗಳ ಪಟ್ಟಿಯಷ್ಟೇ ದೊರಕಿದ. ಅವುಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಮತ್ತು ಒರಿಸ್ಸಾಗೆ ಹೋಗಬೇಕಿದ್ದ 5 ರೈಲುಗಳು ಆಂಫಾನ್ ಸೈಕ್ಲೋನ್ ಕಾರಣಕ್ಕೆ ಕಾರ್ಯ ನಿರ್ವಹಿಸುತ್ತಿಲ್ಲ. 125 ರೈಲುಗಳಿಗೆ ಸಿದ್ಧವಿದ್ದರೂ 41 ರೈಲುಗಳನ್ನು ಇಂದು ನೋಟಿಫೈ ಮಾಡುತ್ತಿದ್ದೇವೆ!!!” ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.
Where is the list for 125 trains from Maharashtra? As of 2am, received list of only 46 trains of which 5 are to West Bengal and Odisha which cannot operate due to cyclone Amphan.
We are notifying only 41 trains for today despite being prepared for 125 !!!
— Piyush Goyal (@PiyushGoyal) May 24, 2020
ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಗೋಯಲ್, “ನಾವು ಇಡೀ ರಾತ್ರಿ ಕೆಲಸ ಮಾಡಿ ಕಾಯ್ದು ನಾಳೆಯ ರೈಲುಗಳ ವೇಳಾಪಟ್ಟಿ ಸಿದ್ಧಪಡಿಸಲು ಶ್ರಮಿಸುತ್ತಿದ್ದೇವೆ. ಮುಂದಿನ ಒಂದು ಘಂಟೆಯಲ್ಲಿ ಪ್ರಯಾಣಿಕರು ಪಟ್ಟಿಯನ್ನು ಕಳುಹಿಸಿ” ಎಂದು ಟ್ವೀಟ್ ಮಾಡಿದ್ದರು.
ಮಹಾರಾಷ್ಟ್ರ ಕೇಳಿದಷ್ಟೂ ರೈಲುಗಳನ್ನು ಓಡಿಸಲು ಕೇಂದ್ರ ರೈಲ್ವೇ ಒಪ್ಪಿರುವ ಪತ್ರಿಕಾ ಹೇಳಿಕೆಯನ್ನು ಕೂಡ ಗೋಯಲ್ ಹಂಚಿಕೊಂಡಿದ್ದಾರೆ. ಸೈಕ್ಲೋನ್ ಕಾರಣದಿಂದ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳಕ್ಕೆ ತೆರಳಬೇಕಿದ್ದ ಕೆಲವು ರೈಲುಗಳು ರದ್ದಾಗಿವೆ ಎಂದು ಕೇಂದ್ರ ರೈಲ್ವೇ ಹೇಳಿದೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನಾ ರಾಜ್ಯ ಸಭಾ ಸದಸ್ಯ ಮತ್ತು ಹಿರಿಯ ಮುಖಂಡ ಸಂಜಯ್ ರಾವುತ್ “ಅಗತ್ಯವಾದ ರೈಲಿನ ಪಟ್ಟಿಯನ್ನು ರೈಲ್ವೇ ಸಚಿವಾಲಯಕ್ಕೆ ಮಹಾರಾಷ್ಟ್ರ ಸರ್ಕಾರ ಕೊಟ್ಟಿದೆ. ಪಿಯುಶ್ ಅವರಿಗೆ ಒಂದೇ ಮನವಿ ಅಂದರೆ, ರೈಲುಗಳು ಯಾವ ನಿಲ್ದಾಣ ತಲುಪಬೇಕಿತ್ತೋ ಆ ನಿಲ್ದಾಣವನ್ನೇ ತಲುಪುವಂತೆ ನೋಡಿಕೊಳ್ಳಬೇಕು. ಗೋರಕ್ ಪುರಕ್ಕೆ ಹೊರಟ ರೈಲು ಒರಿಸ್ಸಾಗೆ ಹೋಗಬಾರದು” ಎಂದು ಟ್ವೀಟ್ ಮಾಡಿದ್ದಾರೆ.
महाराष्ट्र सरकार ने रेलवे मंत्रालय को अपेक्षित गाड़ियों की सूची दी है। पीयूष जी @PiyushGoyal से सिर्फ विनती यही है कि ट्रेन जिस स्टेशन पर पहुंचनी चाहिए उसी स्टेशन पर पहुंचे। गोरखपुर के लिए जाने वाली ट्रेन उड़ीसा न पहुंच जाए।
@AUThakeray@CMOMaharashtra@PawarSpeaks— Sanjay Raut (@rautsanjay61) May 24, 2020
ಕಳೆದ ಶುಕ್ರವಾರ ಮುಂಬೈನಿಂದ ಗೋರಕ್ ಪುರಕ್ಕೆ ಹೊರಟಿದ್ದ ಒಂದು ಶ್ರಮಿಕ್ ವಿಶೇಷ ರೈಲು ಚಾಲನಕ ಗೊಂದಲದಂದಾಗಿ ಬೇರೆ ಮಾರ್ಗದಲ್ಲಿ ಚಲಿಸಿ ಒರಿಸ್ಸಾದ ರೂರ್ಕೆಲಾ ತಳುಪಿತ್ತು.

