ಡಿಸೆಂಬರ್‌ 15 ರಂದು ಮತ್ತೇ ವಿಧಾನ ಪರಿಷತ್‌ ಅಧಿವೇಶನ: ’ಗೋಹತ್ಯೆ’ ಮಸೂದೆ ಅಂಗೀಕಾರಕ್ಕೆ ತಯಾರಿ?

ಡಿಸೆಂಬರ್‌ 10 ರಂದು ಅನಿರ್ಧಿಷ್ಟಾವಧಿ ಕಾಲದವರೆಗೆ ಮುಂದೂಡಲಾಗಿದ್ದ ವಿಧಾನ ಪರಿಷತ್ತಿನ ಕಲಾಪವನ್ನು ಕರ್ನಾಟಕ ಸರ್ಕಾರವು ಮತ್ತೇ ಡಿಸೆಂಬರ್‌ 15 ರಂದು ಕರೆದಿದೆ. ಈ ಬಗ್ಗೆ ವಿಧಾನ ಪರಿಷತ್ತಿನ ಕಾರ್ಯದರ್ಶಿ ಪರಿಷತ್ತಿನ ಎಲ್ಲಾ ಸದಸ್ಯರಿಗೆ ಪತ್ರ ಬರೆದಿದ್ದಾರೆ.

ಅನಿರ್ಧಿಷ್ಟಾವಧಿ ಸಮಯದವರೆಗೂ ಮುಂದೂಡಿದ್ದ ಅಧಿವೇಶನವನ್ನು ಹೀಗೆ ತುರಾತುರಿಯಲ್ಲಿ ಕರೆಯಲು ಕಾರಣ ಗ್ರಾಮ ಪಂಚಾಯತ್ ಚುನಾವಣೆ ಎನ್ನಲಾಗಿದ್ದು, ಅಧಿವೇಶನದಲ್ಲಿ ವಿವಾದಿತ “ಗೋಹತ್ಯೆ ಮಸೂದೆ” ಅಂಗೀಕರಿಸಲು ತಯಾರಿ ನಡೆಸಲಾಗುತ್ತಿದೆ ಎನ್ನಲಾಗಿದೆ.

ವಿಧಾನ ಸಭೆಯಲ್ಲಿ ಬಿಜೆಪಿಗೆ ಬಹುಮತವಿದ್ದರೂ ವಿಧಾನ ಪರಿಷತ್ತಿನಲ್ಲಿ ಅದಕ್ಕೆ ಬಹುಮತವಿಲ್ಲ. ಆದರೆ ಭೂಸುಧಾರಣೆ ಕಾಯ್ದೆಗೆ ಜೆಡಿಎಸ್ ಬೆಂಬಲ ನೀಡಿ ಮಸೂದೆಯು ಅಂಗೀಕಾರವಾಗುವಂತೆ ಮಾಡಿರುವ ಹಿನ್ನಲೆಯಲ್ಲಿ ಪ್ರಸ್ತುತ ಅಧಿವೇಶನವು ಭಾರಿ ಕುತೂಹಲವನ್ನು ಹುಟ್ಟಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights