ಬಿಸಿ ಊಟ ಕಾರ್ಯಕರ್ತೆಯರಿಗೆ ಅನ್ನವಿಲ್ಲ; ಸರ್ಕಾರಕ್ಕೆ ಕಣ್ಣಿಲ್ಲ!

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಬಿಸಿ ಊಟ ನೀಡುವ ಯೋಜನೆ ಯಾರಿಯಲ್ಲಿದೆ. ಪ್ರತಿದಿನ ಶಾಲಾ ಮಕ್ಕಳಿಗೆ ಬಿಸಿ ಊಟ ತಯಾರಿಸಿಕೊಡುವ ಬಿಸಿ ಊಟ ಕಾರ್ಯಕರ್ತೆಯರು ಊಟಕ್ಕೇ ಈಗ ಸಂಚಕಾರ ಬಂದೊದಗಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಲಾಗಿದ್ದು, ಇನ್ನೂ ಶಾಲೆಗಳು ತೆರೆದಿಲ್ಲ.  ಶಾಲೆಗಳಲ್ಲಿ ಬಿಸಿ ಊಟವನ್ನೂ ನಿಲ್ಲಿಸಲಾಗಿದೆ.  ಆ ಕಾರಣಕ್ಕಾಗಿ ಅಡುಗೆ ಕಾರ್ಯಕರ್ತೆಯರು ಶಾಲೆಗಳಲ್ಲಿ ಕಾರ್ಯನಿರ್ವಹಿಸದ ಕಾರಣ ಅವರ ವೇತನವನ್ನೂ ನಿಲ್ಲಿಸಲಾಗಿದೆ.

ಲಾಕ್‌ಡೌನ್‌ ವೇಳೆಯಲ್ಲಿ ಖಾಸಗೀ ಕೈಗಾರಿಕೆಗಳೂ ಕೂಡ ತಮ್ಮ ಉದ್ಯೋಗಿಗಳಿಗೆ ವೇತನ ನೀಡಬೆಕೆಂದು ಆದೇಶಿಸಿದ್ದ ಸರ್ಕಾರ, ಈಗ ಸರ್ಕಾರಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಕಾರ್ಯಕರ್ತೆಯರ ವೇತನವನ್ನು ಕಸಿದುಕೊಂಡಿದೆ. ಇದರಿಂದಾಗಿ ಅಡುಗೆ ಕಾರ್ಯಕರ್ತೆಯರು ಜೀವನೋಪಾಯಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Non-profits get social media savvy

2003ರಲ್ಲಿ ಜಾರಿಗೆ ಬಂದ ಶಾಲೆಗಳಲ್ಲಿ ಬಿಸಿ ಊಟ ಯೋಜನೆಗೆ ಶಾಲೆಗಳಲ್ಲಿ ಅಡುಗೆ ತಯಾರಿಸಲು ಶಾಲಾ ಮಕ್ಕಳ ದಾಖಲಾತಿಯ ಆಧಾರದ ಮೇಲೆ ಅಡುಗೆ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ಆ ಕಾರ್ಯಕರ್ತರಿಗೆ ಅವರು ಕಾರ್ಯನಿರ್ವಹಿಸುವ ಅವಧಿಯಲ್ಲಿ ಮಾತ್ರ ವೇತನವನ್ನು ನೀಡಲಾಗುತ್ತದೆ.

ಅಂದರೆ, ಶೈಕ್ಷಣಿಕ ವರ್ಷವಾದ ಜೂನ್‌ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಮಾತ್ರ ಅಡುಗೆ ಕಾರ್ಯಕರ್ತರಿಗೆ ವೇತನ ನೀಡಲಾಗುತ್ತಿದ್ದು, ಏಪ್ರಿಲ್‌ ಮತ್ತು ಮೇ ತಿಂಗಳಾದ ಎರಡೂ ತಿಂಗಳು ಶಾಲೆಗಳ ಅಡುಗೆ ಕಾರ್ಯಕರ್ತೆಯರಿಗೆ ವೇತನವನ್ನು ನೀಡಲಾಗುವುದಿಲ್ಲ.

ಬಿಸಿ ಊಟ ಕಾರ್ಯಕರ್ತೆಯರಿಗೆ ತಿಂಗಳಿಗೆ ನೀಡಲಾಗುವ ವೇತನ ಕೇವಲ 2,600 ಅಥವಾ 2,700 ರೂ ಮಾತ್ರ. ಇಷ್ಟು ಕಡಿಮೆ ವೇತನಕ್ಕಾಗಿ ಬಿಸಿ ಊಟ ಕಾರ್ಯಕರ್ತೆಯರು ಹಲವು ಬಾರಿ ಬೆಂಗಳೂರಿನವರೆಗೂ ಬಂದು  ಪ್ರತಿಭಟನೆ ನಡೆಸಿದ್ದಾರೆ. ನಾನಾ ಬೇಡಿಕೆಗಳಲ್ಲಿ ಒಂದಾಗಿರುತ್ತಿ ವೇತನ ಹೆಚ್ಚಳಕ್ಕಾಗಿ ಬಿಸಿ ಊಟ ಕಾರ್ಯಕರ್ತೆಯರು ಮೂರ್ನಾಲ್ಕು ದಿನಗಳ ಕಾಲ ಧರಣಿ ನಡೆಸಿದ್ದಾರೆ.

ಕಡಿಮೆ ವೇತನದಲ್ಲಿ ಜೀವನ ಸಾಗಿಸುವುದೇ ಕಷ್ಟವಿರುವ ಸಂದರ್ಭದಲ್ಲಿ, ಆ ವೇತನವನ್ನೂ ವರ್ಷದಲ್ಲಿ ಎರಡು ತಿಂಗಳು ನೀಡುವುದಿಲ್ಲ.

ಇಂದು ಲಾಕ್‌ಡೌನ್‌ನಿಂದ ಎಲ್ಲಾ ದುಡಿಯುವ ವರ್ಗದ ಜನರು ಸಂಕಷ್ಟದಲ್ಲಿರುವಾಗ ಬಿಸಿ ಊಟ ಕಾರ್ಯಕರ್ತೆಯರು ವೇತನವನ್ನು ಸರ್ಕಾರ ನೀಡದೇ ಇರುವುದು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

“ತಿಂಗಳಿಗೆ ಸಿಗುತ್ತಿದ್ದ 2,600 ರೂ ವೇತನದಲ್ಲಿ ನಮ್ಮ ಕುಟುಂಬದ ಜೀವನವನ್ನು ಮುನ್ನಡೆಸುತ್ತಿದ್ದೇವೆ. ಮಗಳು ಕಾಲೇಜು ಓದುತ್ತಿದ್ದಾಳೆ. ಅವಳು ಕಾಲೇಜು ಖರ್ಚನ್ನೂ ಈ ವೇತನದಲ್ಲೇ ಭರಿಸಬೇಕು. ಅದಕ್ಕಾಗಿ ದಿನನಿತ್ಯದ ಅಗತ್ಯ ಖರ್ಚುಗಳನ್ನು ಕಡಿಮೆ ಮಾಡಿ ಹಣ ಉಳಿಸಬೆಕು. ಎಂದಾದರೂ ಆರೋಗ್ಯ ಕೆಟ್ಟರೆ ಅದಕ್ಕೂ ಸಾಲವೇ ಗತಿ ಎಂಬಂತಹ ಪರಿಸ್ಥಿತಿ ಇದೆ. ಹೀಗಿರುವಾಗ ಲಾಕ್‌ಡೌನ್‌ ಸಂದರ್ಭದಲ್ಲಿ ಸರ್ಕಾರ ವೇತನವನ್ನು ನೀಡದೇ ಇರುವುದು ಮತ್ತಷ್ಟು ಸಂಕಷ್ಟ ಎದುರಾಗಿದೆ. ಇಂದಿನ ಜೀವನ ನಿರ್ವಹಣೆಗಾಗಿ ಸಾಲ ಮಾಡಬೇಕಾದ ಅನಿವಾರ್ಯ ಎದುರಾಗಿದೆ.” – ನಾಗಮ್ಮ, ಬಿಸಿ ಊಟ ಕಾರ್ಯಕರ್ತೆ


ಇದನ್ನೂ ಓದಿ: ಲಾಕ್‌ಡೌನ್ ನಿರುದ್ಯೋಗ: ಉದ್ಯೋಗ ಸೃಷ್ಟಿಗೆ MNREGA ಒಂದೇ ಮಾರ್ಗವಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights