ಸನ್ಯಾಸಿಗಳನ್ನು ಗುಂಪುಹತ್ಯೆ ಮಾಡಿದ್ದ 11 ಆರೋಪಿಗಳಿಗೆ ಕೊರೊನಾ ಸೋಂಕು!

ಮಹಾರಾಷ್ಟ್ರದ ಪಾಲ್ಘರ್‌ನ ಲಿಂಚಿಂಗ್ ಪ್ರಕರಣದ ಆರೋಪಿಗಳಲ್ಲಿ 11 ಮಂದಿಗೆ ಕೊರೊನಾ ವೈರಸ್‌ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್‌ 16ರಂದು ಮುಂಬೈನಿಂದ ಸೂರತ್‌ಗೆ ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ಸನ್ಯಾಸಿಗಳನ್ನು ಪಾಲ್ವರ್‌ ಜಿಲ್ಲೆಯ ಗಡ್ಚಿಂಚಲೆ ಗ್ರಾಮದಲ್ಲಿ ಜನರ ಗುಂಪೊಂದು ಹೊಡೆದು ಕೊಂದಿದ್ದರು. ಘಟನೆಯ  ನಂತರ ಒಟ್ಟು 156 ಜನರನ್ನು ಬಂಧಿಸಲಾಗಿದೆ.

ಪಾಲ್ಗರ್ ಜೈಲಿನಲ್ಲಿ ಕೆಲಸ ನಡೆಯುತ್ತಿರುವುದರಿಂದ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಆದರೆ, ಅವರನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿದೆ ಎಂದು ಪಾಲ್ಘರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಡಾದಲ್ಲಿನ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿರುವ ಹದಿನೇಳು ಆರೋಪಿಗಳನ್ನು ಇತ್ತೀಚೆಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ 11 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇತರ ಆರು ಜನರ ಫಲಿತಾಂಶಗಳು ಇನ್ನೂ ದೊರೆತಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸೋಂಕು ದೃಢಪಟ್ಟಿರುವವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಅವರ ದ್ವಿತೀಯ ಹಂತದ ಸಂಪರ್ಕಗಳನ್ನು ಕಂಡುಹಿಡಿಯಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights