ಸದನದಲ್ಲಿ ಶರ್ಟ್ ಬಿಚ್ಚಿ ಭದ್ರಾವತಿ ಶಾಸಕ ಪ್ರತಿಭಟನೆ : ವಿಧಾನಸಭೆ ಕಲಾಪ ಮುಂದೂಡಿಕೆ..!

ಒನ್ ನೇಷನ್ ಒನ್ ಎಲೆಕ್ಷನ್ ಸ್ವೀಕಾರ್ಹವಲ್ಲ ಎಂದು ‘ಕೈ’ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಜೊತೆಗೆ ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದಾರೆ. ಹೀಗಾಗಿ ಕಲಾಪವನ್ನು 15 ನಿಮಿಷ ಮುಂದೂಡಿದ್ಧಾರೆ.

ಒಂದು ರಾಷ್ಟ್ರ ಒಂದು ಚುನಾವಣೆ ಕಿಚ್ಚು ಹೆಚ್ಚಾಗಿದ್ದು ಕಲಾಪದಲ್ಲಿ ಕೈ ನಾಯಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವೇಳೆ ಸದನದಲ್ಲಿ ಶರ್ಟ್ ಬಿಚ್ಚಿ ಭದ್ರಾವತಿ ಶಾಸಕ ಸಂಗಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನ ಕಂಡು ಕೋಪಗೊಂಡ ಸ್ಪೀಕರ್ ಕಾಗೇರಿ, ನಿಮ್ಮಈ ನಡುವಳಿಕೆ ಭದ್ರಾವತಿ ಜನತೆಗೆ ಅಗೌರವ ತಂದಿದೆ. ನಿಮ್ಮ ಕ್ಷೇತ್ರದ ಜನತೆಗೆ ಅಗೌರವವನ್ನು ತೋರುತ್ತೀದ್ದೀರೆಂದು ಕಿಡಿ ಕಾರಿದ್ದಾರೆ. ನಂತರ ಡಿಕೆ ಶಿವಕುಮಾರ್ ಅಂಗಿಯನ್ನು ತೊಡಿಸಿದ್ದಾರೆ.

ಧರಣಿ ಬಿಟ್ಟು ಬನ್ನಿ ಎಂದು ಸ್ವೀಕರ್ ಎಷ್ಟೇ ಮನವೊಲಿಸಿದರೂ ಕೈ ಸದಸ್ಯರು ಕೇಳಲಿಲ್ಲ.  ಇದು ಆರ್ಎಸ್ಎಸ್ ಅಜೆಂಡ ಎಂದು ಕೂಗಿದ ಸಿದ್ದರಾಮಯ್ಯ ಅವರ ಜೊತೆಗೆ ಸದನದ ಬಾವಿಗಿಳೀದು ಸದಸ್ಯರು ಗದ್ದಲ ಮಾಡುತ್ತಿದ್ದಾರೆ. ಹೀಗಾಗಿ ವಿಧಾನಸಭೆ ಕಲಾಪವನ್ನು ಮುಂದೂಡಲಾಗಿದೆ. 15 ನಿಮಿಷ ಬಳಿಕವೂ ಇದೇ ಗದ್ದಲ ಮಾಡುವ ಸಾಧ್ಯತೆ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights