ಕೊರೊನಾಗೆ ಚಿಕಿತ್ಸೆ ಯಶಸ್ವಿ – ಭಾರತದಲ್ಲಿ 7 ರೋಗಿಗಳು ಗುಣಮುಖ

ಭಾರತದಲ್ಲಿ ಶನಿವಾರ ಬೆಳಿಗ್ಗೆ ಕೊರೊನಾ ವೈರಸ್ (ಕೋವಿಡ್ -19)ನ ಒಂದು ಹೊಸ ಪ್ರಕರಣ ವರದಿಯಾಗಿದ್ದರೂ ಸಹ, ವೈರಲ್ ಕಾಯಿಲೆಯಿಂದ ಸೋಂಕಿತರಾದ ಒಟ್ಟು 83ರೋಗಿಗಳ ಪೈಕಿ ಏಳು ಜನರನ್ನು ರೋಗದಿಂದ ಗುಣಪಡಿಸಲಾಗಿದೆ ಮತ್ತು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಅಲ್ಲಿಗೆ ಸೋಂಕು ತಗುಲಿದ ನಂತರವೂ ಭಾರತದಲ್ಲಿ ಗುಣಮುಖರಾದ ಒಟ್ಟು ರೋಗಿಗಳ ಸಂಖ್ಯೆ ಈಗ 10 ಆಗಿದೆ.

ಕೋವಿಡ್ -19 ಪ್ರಕರಣದಲ್ಲಿ ಇತ್ತೀಚೆಗೆ ಗುಣಮುಖವಾದ ಏಳು ಪ್ರಕರಣಗಳಲ್ಲಿ ಐದು ಪ್ರಕರಣಗಳು ಉತ್ತರ ಪ್ರದೇಶದವರಾದರೆ, ಮತ್ತು ರಾಜಸ್ಥಾನ ಮತ್ತು ದೆಹಲಿಯಲ್ಲಿ ತಲಾ ಒಬ್ಬರು ಗುಣಮುಖರಾಗಿದ್ದಾರೆ. ಈ ಮೊದಲು ಕೇರಳದಲ್ಲಿ ಮೂವರು ಗುಣಮುಖರಾಗಿದ್ದರು. ಅವರಿಗೆ ಮತ್ತೆ ಸೋಂಕು ಮರಕಳಿಸುವಿಕೆಯ ವರಿದಯಾಗಿಲ್ಲ.

“ಈ ರೋಗಿಗಳನ್ನು ಡಿಸ್ಚಾರ್ಜ್ ಮಾಡಲಾಗಿರುವುದರಿಂದ ಅವರ ಎಲ್ಲಾ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ ಎಂದರ್ಥ, ಮತ್ತು ಅವರನ್ನು ರೋಗ ಮುಕ್ತ ಎಂದು ಕರೆಯಬಹುದು” ಎಂದು ಅಧಿಕಾರಿ ಹೇಳಿದರು.

 

ಕೊರೊನಾ ವೈರಸ್‌ ಅಂತಹ ಮಾರಣಾಂತಿಕ ಖಾಯಿಲೆಯಲ್ಲ. ಕೆಮ್ಮು ನೆಗಡಿ ರೀತಿ ಸಾಂಕ್ರಾಮಿಕ ರೋಗ ಅಷ್ಟೇ. ಇದರಿಂದಾಗಿಯೇ ಸಾವು ಸಂಭವಿಸುವುದಿಲ್ಲ. ಈಗಾಗಲೇ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ವೃದ್ಧರಿಗೆ ಮತ್ತು ಹಲವು ರೋಗಗಳಿಂದ ಬಳಲುತ್ತಿರುವವರಿಗೆ ಕೊರೊನಾ ಸೋಂಕು ತಲುಲಿದರೆ ಮಾತ್ರ ಸಾವಿನ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಮಕ್ಕಳು ಮತ್ತು ವಯಸ್ಕರು ಸೋಂಕು ತಗುಲಿದರೂ ಸಹ ಗುಣಮುಖರಾಗುವ ಸಾಧ್ಯತೆ ಹೆಚ್ಚಿದೆ.

 

ಭಾರತದಲ್ಲಿ ಈವರೆಗೆ ಇಬ್ಬರು ಜನರು ಸಾವನ್ನಪ್ಪಿದ್ದಾರೆ. ಆರೋಗ್ಯ ಸಚಿವಾಲಯದ ಪ್ರಕಾರ ಎರಡೂ ಪ್ರಕರಣಗಳು ಅಧಿಕ ರಕ್ತದೊತ್ತಡ, ಮಧುಮೇಹ, ಆಸ್ತಮಾ ಮುಂತಾದ ರೋಗಗಳು ಮೊದಲೇ ಇದ್ದು ಕೊರೊನಾ ಅವರ ದೇಹ ಸ್ಥಿತಿಯನ್ನು ಉಲ್ಬಣಗೊಳಿಸಿದ ಕಾರಣ ಮರಣ ಸಂಭವಿಸಿದೆ.

ಆದರೆ ಮಾಧ್ಯಮಗಳು ಕೊರೊನಾ ಬಗ್ಗೆ ಜನರನ್ನು ಭಯಭೀತಗೊಳಿಸುತ್ತಿವೆ. ಸರ್ಕಾರಗಳು ಮುಂಜಾಗ್ರತ ಕ್ರಮವಾಗಿ ತೆಗೆದುಕೊಂಡ ಕ್ರಮಗಳು, ತುರ್ತುಪರಿಸ್ಥಿತಿಯು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಸದ್ಯಕ್ಕೆ 7 ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿರುವುದರಿಂದ ರೋಗ ಗುಣಪಡಿಸುವ ಹೋರಾಟಕ್ಕೆ ಮತ್ತಷ್ಟು ಶಕ್ತಿ ಬಂದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights