ಶಕ್ತಿಸೌಧಕ್ಕೆ ಮುತ್ತಿಗೆ ಹಾಕಲು ಕಾರ್ಮಿಕರ ಹೆಜ್ಜೆ : ಮೆಜೆಸ್ಟಿಕ್ ಸುತ್ತಲು ಟ್ರಾಫಿಕ್ ಜಾಮ್!
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಬೆಂಗಳೂರಿನಲ್ಲಿ ಸಾವಿರಾರು ಕಾರ್ಮಿಕರು ರ್ಯಾಲಿ ಹಮ್ಮಿಕೊಂಡಿದ್ದಾರೆ. ಇದರಿಂದಾಗಿ ಮೆಜೆಸ್ಟಿಕ್ ಸುತ್ತಲು ಟ್ರಾಫಿಕ್ ಜಾಮ್ ಉಂಟಾಗಿದೆ.
ರ್ಯಾಲಿಯಲ್ಲಿ 25 ಸಾವಿರ ಕಾರ್ಮಿಕರು ಭಾಗಿಯಾಗಿದ್ದು ಶಕ್ತಿ ಸೌಧದತ್ತ ದಾಪುಗಾಲು ಹಾಕುತ್ತಿದ್ದಾರೆ. ಕಟ್ಟಡ ನೌಕರರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಸಾರಿಗೆ ನೌಕರರಿಂದ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ. ಮೆಜೆಸ್ಟಿಕ್ ನಿಂದ ರ್ಯಾಲಿ ಮೂಲಕ ಶಕ್ತಿ ಸೌಧಕ್ಕೆ ಪ್ರತಿಭಟನಾಕಾರರು ಹೆಜ್ಜೆ ಇಟ್ಟಿದ್ದಾರೆ. ಇದರಿಂದಾಗಿ ಶಕ್ತಿಸೌಧದ ಸುತ್ತಲೂ ಪೋಲೀಸ್ ಬಿಗಿಭದ್ರತೆ ಒದಗಿಸಲಾಗಿದೆ.
ಕಾರ್ಮಿಕ ಸಂಘಟನೆಗಳ ಪ್ರಮುಖ ಬೇಡಿಕೆಗಳು
1.ಖಾಯಂ ನೌಕರಿ.
2.ಮಾಸಿಕ ರೂ.24 ಸಾವಿರ ಸಮಾನ ಕನಿಷ್ಠ ವೇತನ.3. ಲಾಕ್ಡೌನ್, ಸೀಲ್ಡೌನ್ , ಕ್ವಾರಂಟೈನ್ ವೇಳೆಯಲ್ಲಿ ವೇತನ ನೀಡಬೇಕು.
4. ಲೇ- ಆಫ್, ರಿಟ್ರೆಂಚ್ಮೆಂಟ್ ಮುಚ್ಚುವಿಕೆಗೆ ಅನುಮತಿ ನಿರಾಕರಣೆ.
5. ರಾಜ್ಯ ಕಾರ್ಮಿಕ ಸಮ್ಮೇಳನಕ್ಕಾಗಿ ಕರ್ನಾಟಕ ಕಾರ್ಮಿಕ ಅಧ್ಯಯನ ಸಂಸ್ಥೆ ಬಲಪಡಿಸುವುದು.

