ಜಾರ್ಖಂಡ್‌: ಬಸ್‌-ಕಾರು ನಡುವೆ ಭೀಕರ ಅಪಘಾತ; ಐವರು ಸಜೀವ ದಹನ

ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಬಸ್‌ಗೆ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರು ಬೆಂಕಿಗಾಹುತಿಯಾಗಿ ಕಾರಿನಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜರಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಮುರಬಂಧದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕ ಕೂಡ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಮಗಢ-ಗೋಲಾ ಮುಖ್ಯ ರಸ್ತೆಯಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ವ್ಯಾಗನಾರ್ ಕಾರು ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್ ಕುಮಾರ್ ತಿಳಿಸಿದ್ದಾರೆ. ಡಿಕ್ಕಿಯ ನಂತರ, ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಐದು ಜನರು ಸಜೀವ ದಹನವಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Fact Check: ಉಜ್ಜಯಿನಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮನೆಗಳ ನೆಲಸಮಗೊಳಿಸಿದ್ದು ಸತ್ಯವೇ? 

ಮೃತಪಟ್ಟವರಲ್ಲಿ ನಾಲ್ಕು ಮಂದಿ ವಯಸ್ಕರು ಮತ್ತು ಓರ್ವ ಬಾಲಕ ಸೇರಿದ್ದಾರೆ. ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಜೊತೆಗೆ ಬಾಲಕ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೃತರು ಪಾಟ್ನಾದವರಾಗಿದ್ದು, ಪೊಲೀಸರು ಅವರ ವಿಳಾಸಗಳು ಮತ್ತು ಇತರ ವಿವರಗಳನ್ನು ಕಂಡು ಕೊಳ್ಳಲಿದ್ದಾರೆ. ಅಪಘಾತದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತಿಚೆಗೆ ಚಿಕ್ಕಬಳ್ಳಾಪುರದ ಚಿಂತಾಮಣಿ ಬಳಿಯ ಮರಿನಾಯಕನಹಳ್ಳಿ ಗೇಟ್ ಬಳಿ ಲಾರಿ ಮತ್ತು ಜೀಪ್ ನಡುವೆ ಭೀಕರ ಅಪಘಾತ ನಡೆದು, 8 ಮಂದಿ ಮೃತಪಟ್ಟಿದ್ದರು.

ಇದನ್ನೂ ಓದಿ: ಬಾಕಿ ಉಳಿದಿದೆ ಗಣಿ ಗುತ್ತಿಗೆದಾರರು ನೀಡಬೇಕಿದ್ದ 2,855 ಕೋಟಿ ರೂ ರಾಜಧನ; ವಸೂಲಿಗೆ ಸರ್ಕಾರಕ್ಕೆ ಹಿಂದೇಟು!

Spread the love

Leave a Reply

Your email address will not be published. Required fields are marked *