ನವರಾತ್ರಿ, ರಾಮಲೀಲಾದಲ್ಲಿ ಭಯೋತ್ಪಾದಕ ದಾಳಿಯ ಸಂಚು : ಶಂಕಿತರು 14 ದಿನಗಳ ಕಸ್ಟಡಿಗೆ!

ನವರಾತ್ರಿ, ರಾಮಲೀಲಾದಲ್ಲಿ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ ನಾಲ್ವರು ಶಂಕಿತರನ್ನು ದೆಹಲಿ ಪೊಲೀಸರು 14 ದಿನಗಳ ಕಸ್ಟಡಿಗೆ ಪಡೆದಿದ್ದಾರೆ.

ನವರಾತ್ರಿ ಮತ್ತು ರಾಮಲೀಲಾ ಸಮಯದಲ್ಲಿ ಮಹಾರಾಷ್ಟ್ರ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಭಯೋತ್ಪಾದಕ ದಾಳಿಗಳನ್ನು ಯೋಜಿಸಿದ ನಾಲ್ವರು ಶಂಕಿತರನ್ನು ದೆಹಲಿ ಪೊಲೀಸರಿಗೆ ಹದಿನಾಲ್ಕು ದಿನಗಳ ಕಸ್ಟಡಿಗೆ ನೀಡಲಾಗಿದೆ.

ಮಂಗಳವಾರ ದೆಹಲಿ ಪೊಲೀಸರ ವಿಶೇಷ ವಿಭಾಗವು ಪಾಕಿಸ್ತಾನ ಸಂಘಟಿತ ಭಯೋತ್ಪಾದನಾ ಘಟಕವನ್ನು ಭೇದಿಸಿತು. ಈ ವೇಳೆ ಪಾಕಿಸ್ತಾನ ತರಬೇತಿ ಪಡೆದ ಇಬ್ಬರು ಶಂಕಿತ ಭಯೋತ್ಪಾದಕರು ಸೇರಿದಂತೆ ಆರು ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಹುರಾಜ್ಯ ಕಾರ್ಯಾಚರಣೆಯಲ್ಲಿ ಅವರಿಂದ ಆರ್‌ಡಿಎಕ್ಸ್ ಅಳವಡಿಸಿದ ಐಇಡಿಗಳನ್ನು (ಸುಧಾರಿತ ಸ್ಫೋಟಕ ಸಾಧನ) ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

“ಈ ಕಾರ್ಯಾಚರಣೆಯು ಗಡಿಯುದ್ದಕ್ಕೂ ನಿಕಟವಾಗಿ ಸಂಬಂಧ ಹೊಂದಿದ್ದಂತೆ ಕಾಣುತ್ತದೆ. ಈ ಎರಡು ತಂಡಗಳಲ್ಲಿ ಒಂದು ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂನಿಂದ ಸಂಯೋಜಿಸಲ್ಪಟ್ಟಿದೆ. ಮತ್ತೊಂದು ತಂಡ ಹವಾಲಾ ಮೂಲಕ ನಿಧಿಯನ್ನು ಸಂಘಟಿಸುವತ್ತ ಕೆಲಸ ಮಾಡುತ್ತಿದೆ” ಎಂದು ವಿಶೇಷ ಕೋಶದ ನೀರಜ್ ಠಾಕೂರ್ ಹೇಳಿದರು.

ಹದಿನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿರುವ ನಾಲ್ವರನ್ನು ಮಹಾರಾಷ್ಟ್ರದ ಜಾನ್ ಮೊಹಮ್ಮದ್ ಶೇಖ್, ದೆಹಲಿಯ ಒಸಾಮಾ ಸಾಮಿ, ಯುಪಿಯ ರಾಯಬರೇಲಿಯ ಲಾಲಾ ಅಲಿಯಾಸ್ ಮೂಲ್‌ಚಂದ್ ಮತ್ತು ಮೊಹಮ್ಮದ್ ಅಬು ಬಕರ್ ಎಂದು ಗುರುತಿಸಲಾಗಿದೆ.

ಉಳಿದ ಇಬ್ಬರನ್ನು ಯುಪಿಯ ಪ್ರಯಾಗರಾಜ್‌ನ ಜೀಶನ್ ಕಮಾರ್ ಮತ್ತು ಲಕ್ನೋನ ಮೊಹಮದ್ ಅಮೀರ್ ಜಾವೇದ್ ಎಂದು ಗುರುತಿಸಲಾಗಿದ್ದು, ಇವರನ್ನು ಬುಧವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಒಸಾಮಾ ಸಾಮಿ ಮತ್ತು ಲಾಲಾ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ ಮತ್ತು ಈ ಹಿಂದೆ ಭೂಗತ ಜಗತ್ತಿನಲ್ಲಿ ಕೆಲಸ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights