ಫ್ಯಾಕ್ಟ್‌ಚೆಕ್ : ಗ್ಯಾರೆಂಟಿ ಯೋಜನೆಗಳು ಬಂದ್ ಆಗಲಿವೆ ಎಂದು ಸುಳ್ಳು ಸುದ್ದಿ ಹಂಚಿಕೆ

BJP ಮತ್ತು ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಕಾಂಗ್ರೆಸ್‌ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ವಿಡಿಯೋ ಮತ್ತು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದು ಕಾಂಗ್ರೆಸ್‌ನ 5 ಗ್ಯಾರೆಂಟಿ ಯೋಜನೆಗಳಾದ ಗೃಹ ಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ,ಯುವನಿಧಿ ಮತ್ತು ಶಕ್ತಿ ಯೋಜನೆಗಳು ಬಂದ್ ಆಗಲಿವೆ ಎಂದು ಹೇಳಲಾಗುತ್ತಿದೆ.

ಬಲಪಂಥೀಯ ಪ್ರೊಪಗಂಡಾ ಮಾಧ್ಯಮ ಟಿವಿ ವಿಕ್ರಮ ವಿಡಿಯೋ ವರದಿಯೊಂದನ್ನು ಪ್ರಕಟಿಸಿದ್ದು, ಬಿಟ್ಟಿ ಭಾಗ್ಯ ಬಂದ್.. ಗೃಹಲಕ್ಷ್ಮಿಯರ  ರಿಯಾಕ್ಷನ್ ಎಂಬ ಶೀರ್ಷಿಕೆಯೊಂದಿಗೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದೆ.

ಬಿಟ್ಟಿ ಭಾಗ್ಯ ಬಂದ್.. ಸದ್ಯದಲ್ಲೇ ಘೋಷಣೆ.. ಗೃಹಲಕ್ಷ್ಮಿಯರ ರಿಯಾಕ್ಷನ್..|Mirchi  Mandakki|Shwetha|Siddaramaiah - YouTube

ನಮಗೆ ಬಿಟ್ಟಿ ಭಾಗ್ಯ ಬೇಡ ಎಂದು ಎಷ್ಟು ಹೇಳಿದರೂ ಕೇಳದ ಸಿದ್ದರಾಮಯ್ಯನವರು ಭಾಗ್ಯಗಳನ್ನು ಕೊಟ್ಟು ಬಿಟ್ಟರು. ಈಗ ಅವರದೇ ಪಕ್ಷದ ಶಾಸಕರಾದ ಬಸವರಾಜ ರಾಯರೆಡ್ಡಿಯವರು “ನಾವು ಗ್ಯಾರಂಟಿ ಯೋಜನೆಗಳಿಗಾಗಿ 58000 ಕೋಟಿ ರೂ ನಿರ್ದೇಶಿಸಿರುವುದರಿಂದ ಅದು ದೊಡ್ಡ ಅರ್ಥಿಕ ಹೊರೆಯಾಗಿ ಪರಿಣಮಿಸಿದೆ” ಎಂದು ಬಿಟ್ಟಿದ್ದಾರೆ. ಹಾಗಾಗಿ ಬಿಟ್ಟಿ ಭಾಗ್ಯಗಳು ಬಂದ್ ಆಗುತ್ತವೆ ಎನ್ನುವಂತೆ  ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಣೆ ಮಾಡಿದ್ದಾರೆ. ಇದೇ ಪ್ರತಿಪಾದನೆಯೊಂದಿಗೆ ಒಪ್ ಇಂಡಿಯಾಎಂಬ ಪ್ರೋಪಗಾಂಡ ಮಾಧ್ಯಮ ಕೂಡ ಸುದ್ದಿ ಮಾಡಿದೆ.

ಹಾಗಿದ್ದರೆ ಈ ಮಾಧ್ಯಮಗಳು ಪ್ರಕಟಿಸಿರುವಂತೆ ಕಾಂಗ್ರೆಸ್ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಗ್ಯಾರೆಂಟಿಯೋಜನೆಗಳು ನಿಜವಾಗಿಯೂ ಬಂದ್ ಆಗಲಿವೆಯೇ ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಕಾಂಗ್ರೆಸ್‌ ಜಾರಿಗೆ ತಂದಿರುವ ಗ್ಯಾರೆಮಟಿ ಯೋಜನೆಗಳನ್ನು ಆರ್ಥಿಕ ಹೊರೆಯ ಕಾರಣಕ್ಕೆ ನಿಲ್ಲಿಸಲಾಗುತ್ತಿದೆಯೇ ಎಂದು ಪರಿಶೀಲಿಸಿದಾಗ, ವಾಸ್ತವದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಕರ್ನಾಟಕ ಸರ್ಕಾರದ ಸಿಎಂ, ಡಿಸಿಎಂ, ಸಚಿವರು, ಶಾಸಕರು ಸೇರಿದಂತೆ ಯಾರೂ ಹೇಳಿಕೆ ನೀಡಿಲ್ಲ. ಈ ಕುರಿತು ಯಾವ ಮಾಧ್ಯಮಗಳು ಸಹ ವರದಿ ಮಾಡಿಲ್ಲ.

ಈ ವಿವಾದದ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯನವರು, “ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸದ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ ಅಂತಷ್ಟೇ ರಾಯರೆಡ್ಡಿ ಹೇಳಿರುವುದು” ಅದರರ್ಥ ಬಿಜೆಪಿಯವರು ಹೇಳುವ ಹಾಗೆ, ಸರ್ಕಾರದಲ್ಲಿ ಹಣವಿಲ್ಲ ಅಂತಲ್ಲ, ಬೊಕ್ಕಸವೇನೂ ಖಾಲಿಯಾಗಿಲ್ಲ, ಸರ್ಕಾರದ ಎಂದಿನ ಕಾರ್ಯಕ್ರಮಗಳು ಮೊದಲಿನ ಹಾಗೆಯೇ ಜಾರಿಯಲ್ಲಿರುತ್ತವೆ ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಗ್ಯಾರಂಟಿ ಯೋಜನೆಗಳಿಂದ ಖಜಾನೆ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ ಅಂತ ರಾಯರೆಡ್ಡಿ ಹೇಳಿದ್ದಾರೆ. ಬಜೆಟ್ ಮಂಡಿಸಿರುವ ತನಗೆ ಎಲ್ಲ ಯೋಜನೆಗಳ ಖರ್ಚುವೆಚ್ಚದ ಸಂಪೂರ್ಣ ಜ್ಞಾನವಿದೆ, ಗ್ಯಾರಂಟಿ ಯೋಜನೆಗಳಿಂದಾಗಿ ಬೇರೆ ಯಾವುದೇ ಕಾರ್ಯಕ್ರಮ ನಿಂತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು ಕನ್ನಡದ ಟಿವಿ9 ವರದಿಯನ್ನು ಕೂಡ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಲಪಂಥೀಯ ಮಾಧ್ಯಮಗಳಾದ ಟಿವಿ ವಿಕ್ರಮ ಮತ್ತು ಓಪ್ ಇಂಡಿಯಾ ಮಾಡಿದ ವರದಿಯಂತೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಬಂದ್ ಮಾಡುತ್ತೇವೆ ಎಂದು ಹೇಳಿಲ್ಲ. ಗ್ಯಾರೆಂಟಿ ಯೋಜನೆಗಳಿಂದ ನಿಜವಾಗಿಯೂ ಜನರು ಅನುಕೂಲ ಪಡೆದುಕೊಳ್ಳುತ್ತಿದ್ದಾರೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ. ಹಾಗಾಗಿ ಈ ಮಾಧ್ಯಮಗಳ ವರದಿ ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬೆಂಗಳೂರಿನಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬ ಪಾಪ್ ಕಾರ್ನ್ ತಯಾರಿಸಲು ಉಪ್ಪಿನ ಬದಲು ಮೂತ್ರ ಬೆರಸಿದ ಎಂದು ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights