ಫ್ಯಾಕ್ಟ್‌ಚೆಕ್ : ಹಿಂದೂ ದೇವಾಲಯದ ವಿಗ್ರಹಗಳನ್ನು ವಿರೂಪಗೊಳಿಸಿದ್ದು ಮುಸ್ಲಿಮರಲ್ಲ?

ಜೂನ್‌ 1ರ ಬೆಳಗಿನ ಜಾವ ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಬರಾಲ್‌ ಗ್ರಾಮದ ಸ್ವಾತಂತ್ರ್ಯ ಪೂರ್ವದ ದೇವಾಲಯದ ಹಲವು ದೇವರ ವಿಗ್ರಹಗಳನ್ನು ಮುಸ್ಲಿಮರು ವಿರೂಪಗೊಳಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾ ಜೊತೆಗೆ ಸುದ್ದಿ ಮಾಧ್ಯಮಗಳೂ ಕೂಡ ಇದೇ ಮಾದರಿಯಲ್ಲಿ ವರದಿಯನ್ನು ಮಾಡಿದ್ದವು.

ಜೂನ್ 1 ರಂದು ವಿಡಿಯೊವೊಂದನ್ನು ಹಮ್‌ ಲೋಗ್‌ ಎನ್ನುವ ಟ್ವಿಟರ್‌ ಖಾತೆಯು ಬಳಕೆದಾರೊಬ್ಬರು ಕಳೆದ ರಾತ್ರಿ ಬುಲಂದ್‌ಶಹರ್‌ನಲ್ಲಿ ನಾಲ್ಕು ದೇವಾಲಯಗಳ ಮೇಲೆ ದಾಳಿ ನಡೆಸಿ, ವಿಗ್ರಹಗಳನ್ನು ಧ್ವಂಸಗೊಳಿಸಲಾಯಿತು. ಚರ್ಚ್/ಮಸೀದಿಗಳ ಮೇಲಿನ ದಾಳಿಯ ನಕಲಿ ವರದಿಗಳು ಅಂತಾರಾಷ್ಟ್ರೀಯ ಸುದ್ದಿಯಾಗುತ್ತವೆ. ಅವರು ಹಿಂದೂಗಳನ್ನು ಅಸಹಿಷ್ಣು ಎಂದು ಕರೆಯಲು ಪ್ರಾರಂಭಿಸುತ್ತಾರೆ. ನಮ್ಮ ದೇವಸ್ಥಾನಗಳ ಮೇಲಿನ ದಾಳಿಯ ಸುದ್ದಿ ಯಾವಾಗ ಬರುತ್ತೆ? ಎಂದು ಬರೆದಿದ್ದಾರೆ. ಎರಡನೇ ಟ್ವೀಟ್‌ನಲ್ಲಿ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿ ‘ಜಿಹಾದಿಗಳು’ ಇದನ್ನು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಜೂನ್‌ 2ರ ನಂತರ ರಾಷ್ಟ್ರ ಮಟ್ಟದ ಹಲವು ಸುದ್ದಿವಾಹಿನಿಗಳು ಪ್ರಸಾರ ಮಾಡಿದವು. ‘ಝೀ ಉತ್ತರ ಪ್ರದೇಶ್‌ ಉತ್ತರಾಖಂಡ್‌’ ವಾಹಿನಿಯು ‘ಬುಲಂದ್‌ಶಹರ್‌ದಲ್ಲಿ ಔರಂಗಜೇಬ್‌ ತರಹದ ಗುಂಪು?’ ಎನ್ನುವ ಚರ್ಚಾ ಕಾರ್ಯಕ್ರಮ ಪ್ರಸಾರ ಮಾಡಿತು. ‘ಆಜ್‌ ತಕ್‌’ನ ನಿರೂಪಕ, ಪತ್ರಕರ್ತ ಸುಧೀರ್‌ ಚೌಧರಿ ಅವರು ತಮ್ಮ ‘ಬ್ಲಾಕ್‌ ಆ್ಯಂಡ್‌ ವೈಟ್‌’ ಕಾರ್ಯಕ್ರಮದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದರು. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ಈ ಸುದ್ದಿಯನ್ನು ಪರಿಶೀಲಿಸಲು ಕೀವರ್ಡ್ ಸರ್ಚ್ ಮಾಡಿದಾಗ, ಜೂನ್ 8 ರಂದು ಪ್ರಕಟವಾದ ದೈನಿಕ್ ಭಾಸ್ಕರ್ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ ‘ದೇವರ ವಿಗ್ರಹಗಳನ್ನು ಧ್ವಂಸ ಮಾಡಿದವರು ನಾಲ್ವರು ಹಿಂದೂಗಳು. ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾರೆ’ ಎಂದು ಬುಲಂದ್‌ಶಹರ್‌ ಎಸ್‌ಎಸ್‌ಪಿ ಶ್ಲೋಕ ಕುಮಾರ್‌ ಖಚಿತಪಡಿಸಿದ್ದಾರೆ. ಈ ಬಳಿಕ, ‘ಹಿಂದೂಗಳೇ ಮೂರ್ತಿಗಳನ್ನು ಧ್ವಂಸ ಮಾಡಿದ್ದಾರೆ’ ಎಂದು ಪತ್ರಕರ್ತ ಸುಧೀರ್‌ ಚೌಧರಿ ಅವರು ಟ್ವೀಟ್‌ ಮಾಡಿದ್ದಾರೆ.

ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಎಸ್‌ಪಿ ಶ್ಲೋಕ್ ಕುಮಾರ್ ದೃಢಪಡಿಸಿದ ಬುಲಂದ್‌ಶಹರ್ ಪೊಲೀಸರ ಟ್ವೀಟ್ ಕೂಡಾ ಇದನ್ನೇ ಕೇಳುತ್ತದೆ. ಈ ಕೃತ್ಯಕ್ಕೆ ಹರೀಶ್ ಶರ್ಮಾ ನೇತೃತ್ವ ವಹಿಸಿದ್ದು, ಇತರ ಮೂವರಿಗೆ ಆಗಾಗ್ಗೆ ಆತಿಥ್ಯ ನೀಡುತ್ತಿದ್ದರು. ಅವರು ಒಟ್ಟಿಗೆ ಮದ್ಯ ಸೇವಿಸುತ್ತಿದ್ದರು ಎಂದು ಎಸ್‌ಎಸ್‌ಪಿ ಉಲ್ಲೇಖಿಸಿದ್ದಾರೆ. ಕೃತ್ಯ ನಡೆದ ದಿನವೂ ಅವರು ಕುಡಿದ ಮತ್ತಿನಲ್ಲಿದ್ದರು ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಬರಾಲ್‌ ಗ್ರಾಮದ ದೇವಾಲಯದ ಹಲವು ದೇವರ ವಿಗ್ರಹಗಳನ್ನು ಮುಸ್ಲಿಮರು ವಿರೂಪಗೊಳಿಸಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲ ಮಾಡಿದ ಪ್ರತಿಪಾಧನೆ ತಪ್ಪಾಗಿದೆ.

ಕೃಪೆ : ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: 1st PUC ಯಲ್ಲೇ ಫೇಲ್ ಆಗಿದ್ರಾ ಪ್ರಯಾಂಕ್ ಖರ್ಗೆ? ಇಲ್ಲಿದೆ ಫುಲ್ ಡೀಟೇಲ್ಸ್!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights