ಫ್ಯಾಕ್ಟ್‌ಚೆಕ್ : ಈ ಫೋಟೊ ಅಲ್ಲಾ-ಹು-ಅಕ್ಬರ್ ಎಂದು ಘೋಷಣೆ ಕೂಗಿದ್ದ ಬೇಬಿ ಮುಸ್ಕಾನ್‌ಳದಲ್ಲ! ಮತ್ತ್ಯಾರದ್ದು

ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗ ಅದಕ್ಕೆ ಪ್ರತಿಯಾಗಿ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಧೈರ್ಯವಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದು ಎಲ್ಲೆಡೆ ಸುದ್ದಿಯಾಗಿತ್ತು. ಈಗ ಮುಸ್ಕಾನ್ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ವೈರಲ್ ಆಗುತ್ತಿದೆ.

“ಹಿಜಾಬ್ ನಮ್ಮ ಹಕ್ಕು ಎಂದು ಕಾಲೇಜು ಅವರಣದಲ್ಲಿ ಅಲ್ಲಾ ಹೋ ಅಕ್ಬರ್ ಎಂದು ಕೂಗಿ ತಾಲೀಬಾನ್ ಭಯೋತ್ಪದಕರು, ಪಾಪಿ ಪಾಕಿಸ್ತಾನದ ಭಯೋತ್ಪದಕರಿಂದ ಹೊಗಳಿಸಿಕೊಂಡ ಮಂಡ್ಯ ಜಿಲ್ಲೆಯ ಮುಸ್ಕನ್ ಇನ್ ಲಂಡನ್” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಹಲವು ಬಲಪಂಥೀಯ ಪ್ರತಿಪಾದಕ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

4 ಜನರು ಮತ್ತು ಪಠ್ಯ 'ಅಂದು ಇಂದು LDI9RCV ಹಿಜಾಬ್ ನಮ್ಮ ಹಕ್ಕು ಎಂದು ಕಾಲೇಜು ಅವರಣದಲ್ಲಿ ಅಲಲಾ ಹೋ ಅಕ್ಬರ್ ಎಂದು ಕೂಗಿ ತಾಲೀಬಾನ್ ಭಯೋತ್ಸದಕರು ಪಾಪಿ ಪಾಕಿಸ್ತಾನದ ಭಯೋತ್ಪದಕರಿಂದ ಹೋಗಳಿಸಿಕೊಂಡ ಮಂಡ್ಯ ಜಿಲ್ಲೆಯ ಮುಸ್ಕನ್ ಇನ್ ಲಂಡನ್..' ಹೇಳುತ್ತಿದೆ ನ ಚಿತ್ರವಾಗಿರಬಹುದು

 

ಫೇಸ್‌ಬುಕ್, ಟ್ವಿಟರ್ ಮತ್ತು ವಾಟ್ಸಾಪ್‌ಗಳಲ್ಲಿ ಈ ಎರಡೂ ಪೋಟೊಗಳನ್ನು ಕೊಲಾಜ್‌ ಮಾಡಿ ಇದು ಮಂಡ್ಯದಲ್ಲಿ ಹಿಜಾಬ್ ನಮ್ಮ ಹಕ್ಕು, ಅಲ್ಲಾ-ಹು-ಅಕ್ಬರ್ ಎಂದು ಘೋಷಣೆ ಕೂಗಿ, ಈಗ ಲಂಡನ್‌ನಲ್ಲಿ ಹಿಜಾಬ್ ಇಲ್ಲದೆ ಹೇಗೆ ಫೋಸ್ ನೀಡಿದ್ದಾಳೆ, ಈಗ ಈ ಹುಡುಗಿಗೆ ಹಿಜಾಬ್ ಪ್ರೇಮ ಎಲ್ಲಿ ಹೋಯಿತ? ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಈ ಪೋಸ್ಟ್‌ ಸಾಮಾಜಿಕ ಮಾಧ್ಯಮಗಲಲ್ಲಿ ವೈರಲ್ ಆಗುತ್ತಿದಂತೆ, ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಿರುವುದನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂ ಅನ್ನು ವಿನಂತಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಚಿತ್ರವು ಮಂಡ್ಯದ ಪಿಇಎಸ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗ ಅದಕ್ಕೆ ಪ್ರತಿಯಾಗಿ ದ್ವಿತೀಯ ಬಿ ಕಾಂ ವಿದ್ಯಾರ್ಥಿನಿ ಮುಸ್ಕಾನ್ ಧೈರ್ಯವಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಸಂದರ್ಭದ್ದು. ಆಗ ಈ ಘಟನೆ ಎಲ್ಲೆಡೆ ಸುದ್ದಿಯಾಗಿತ್ತು.

ಈಗ ಅದೇ ಚಿತ್ರವನ್ನು ಮತ್ತೊಂದು ಚಿತ್ರದೊಂದಿಗೆ ಕೊಲಾಜ್ ಮಾಡಿ ಲಂಡನ್‌ನಲ್ಲಿ ಹಿಜಾಬ್ ರಹಿತ ಬೇಬಿ ಮುಸ್ಕಾನ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂದ್ದಾರೆ. ಆದರೆ ಈ ಚಿತ್ರದಲ್ಲಿ ಜೀನ್ಸ್‌ ಮತ್ತು ಟೀಶರ್ಟ್ ಧರಿಸಿ ಪೋಸ್‌ ನೀಡುತ್ತಿರುವ ಹುಡುಗಿ ಮುಸ್ಕಾನ್ ಅಲ್ಲ ಎಂದು ಪತ್ತೆಹಚ್ಚಲಾಗಿದೆ.

ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, RJ ಸಯೆಮಾ ಎಂಬ ಟ್ವಿಟರ್ ಅಕೌಂಟ್ ಲಭ್ಯವಾಗಿದ್ದು, ಸುಮಾರು ಒಂದು ಮಿಲಿಯನ್ ಫಾಲೊಯರ್ಸ್‌ಅನ್ನು ಹೊಂದಿರುವುದು ಕಾಣಬಹುದು.

ಈ ಟ್ವಿಟರ್ ಅಕೌಂಟ್‌ಅನ್ನು ಮತ್ತಷ್ಟು ಪರಿಶೀಲಿಸಿದಾಗ ಸಯೆಮಾ ಅವರು ಅಂಡನ್ ಪ್ರವಾಸದಲ್ಲಿರುವ ತಮ್ಮ ಚಿತ್ರಗಳನ್ನು ಜೂನ್ 6ರಂದು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಯೆಮಾ ಎಂಬ RJ ಅವರ ಫೋಟೊವನ್ನು ಬೇಬಿ ಮುಸ್ಕಾನ್ ಜೀನ್ಸ್‌ ಧರಿಸಿ ಲಂಡನ್‌ನಲ್ಲಿ ಎಂದು ತಪ್ಪಾಗಿ ಹಂಚಿಕೊಂಡಿರುವುದು ಸ್ಪಷ್ಟವಾಗಿದೆ. ವಾಸ್ತವವಾಗಿ ಈ ಚಿತ್ರದಲ್ಲಿರುವುದು ಅಲ್ಲಾ-ಹು-ಅಕ್ಬರ್ ಘೋಷಣೆ ಕೂಗಿದ ಬೇಬಿ ಮುಸ್ಕಾನ್ ಅಲ್ಲ.

ಇತ್ತೀಚೆಗೆ ಸಯೆಮಾ ಅವರು ಹಾಡೊಂದನ್ನು ಹಾಡಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್‌ಲೊಡ್ ಮಾಡಿ ಪೋಸ್ಟ್‌ ಮಾಡಿದ್ದಾರೆ. ರೇಡಿಯೋ ಮಿರ್ಚಿಯಲ್ಲಿ RJ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಯೆಮಾ ಅವರ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಗಳನ್ನು ಪರಿಶೀಲಿಸದಾಗ ಬೇಬಿ ಮುಸ್ಕಾನ್ ಮತ್ತು ಸಯೆಮಾ ಬೇರೆ ಬೇರೆ ಎಂಬುದು ಸ್ಪಷ್ಟವಾಗಿದೆ.

ಆರ್‌ಜೆ ಸಯೆಮಾ ಅವರು ಲಂಡನ್ ಪ್ರವಾಸದ ಚಿತ್ರವನ್ನು ಬೇಬಿ ಮುಸ್ಕಾನ್ ಲಂಡನ್‌ನಲ್ಲಿ ಹಿಜಾಬ್ ಧರಿಸದೆ, ಜೀನ್ಸ್‌ ತೊಟ್ಟಿದ್ದಾರೆ ಎಂಬಂತೆ ಬಿಂಬಿಸಲು, ಸಂಬಂಧವಿಲ್ಲದ ಫೋಟೊವನ್ನು ಹಂಚಿಕೊಂಡಿದ್ದಾರೆ.

ಮುಖ್ಯವಾದ ಪ್ರಶ್ನೆಯೆಂದರೆ ಬೇಬಿ ಮುಸ್ಕಾನ್ ಹಿಜಾಬ್ ಧರಿಸುವುದು ಬಿಡುವುದು, ಜೀನ್ಸ್‌ ಪ್ಯಾಂಟ್, ಟೀ ಶರ್ಟ್ ಧರಿಸುವುದು ಆಕೆಯ ವಿವೇಚನೆಗೆ ಬಿಟ್ಟಿದ್ದು. ಆಕೆಗೆ ಅದು ಕಂಫರ್ಟ್ ಅನ್ನಿಸಿದರೆ ಅದನ್ನು ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇರುವುದಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬೀಚ್‌ನಲ್ಲಿ ಹೀಗೆ ನೃತ್ಯ ಮಾಡುತ್ತಿರುವ ವ್ಯಕ್ತಿ ನ್ಯಾಯಾಧೀಶ ಸೌರಭ್ ಕಿರ್ಪಾಲ್ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights