ಫ್ಯಾಕ್ಟ್‌ಚೆಕ್ : ಬೀಚ್‌ನಲ್ಲಿ ಹೀಗೆ ನೃತ್ಯ ಮಾಡುತ್ತಿರುವ ವ್ಯಕ್ತಿ ನ್ಯಾಯಾಧೀಶ ಸೌರಭ್ ಕಿರ್ಪಾಲ್ ಅಲ್ಲ

ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಎನ್. ಕಿರ್ಪಾಲ್ ಅವರ ಪುತ್ರ ಸೌರಭ್ ಕಿರ್ಪಾಲ್ ಅವರ ಹೊಸ ಡ್ಯಾನ್ಸ್ ವಿಡಿಯೋ ಎಂದು ಹೇಳುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಸಲಿಂಗ ವಿವಾಹವನ್ನು ಪ್ರಮುಖ ಪ್ರಕರಣವೆಂದು ಒತ್ತಿ ಹೇಳಿರುವ ಪೋಸ್ಟ್‌ನೊಂದಿಗೆ, ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿರದಿದ್ದರೆ, ಹಿಜ್ರಾಗಳು ಈಗಾಗಲೇ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗುತ್ತಿದ್ದರು ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ನೃತ್ಯ ಮಾಡುತ್ತಿರುವ ವ್ಯಕ್ತಿ ನ್ಯಾಯಾಧೀಶರಾದ ಸೌರಭ್ ಕಿರ್ಪಾಲ್ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸೌರಭ್ ಕಿರ್ಪಾಲ್ ಅವರ ಹೊಸ ಡ್ಯಾನ್ಸ್ ವಿಡಿಯೋ ಎಂದು ಪ್ರತಿಪಾದಿಸಿ ಹಂಚಿಕೊಂಡ ವಿಡಿಯೋದ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, 03 ಜೂನ್ 2023 ರಂದು ದಮನ್‌ದೀಪ್ ಸಿಂಗ್ ಚೌಧರಿ ಅವರ ಇನ್‌ಸ್ಟಾಗ್ರಾಮ್ ಫೇಜ್‌ನಲ್ಲಿ ಅದೇ ವಿಡಿಯೊವನ್ನು ಪ್ರಕಟಿಸಿರುವುದು ಕಂಡುಬಂದಿದೆ. ಇನ್‌ಸ್ಟಾಗ್ರಾಮ್ ಪೇಜ್‌ನ ಬಯೋ ವಿಭಾಗದಲ್ಲಿ, ವ್ಯಕ್ತಿ ತನ್ನ ಹೆಸರನ್ನು ದಮನ್‌ದೀಪ್ ಸಿಂಗ್ ಚೌಧರಿ ಎಂದು ನಮೂದಿಸಿದ್ದಾರೆ ಮತ್ತು ತಾನೊಬ್ಬ ಡಿಜಿಟಲ್ ಕ್ರಿಯೇಟರ್ ಮತ್ತು ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಕಂಪನಿಯಾದ ‘ರನ್‌ವೇ ಲೈಫ್‌ಸ್ಟೈಲ್’ ನ ಸಹ-ಸ್ಥಾಪಕ ಎಂದು ಹೇಳಿದ್ದಾರೆ.

ಸೌರಭ್ ಕಿರ್ಪಾಲ್ ಅವರು ವೈರಲ್ ವಿಡಿಯೊಗೆ ಸಂಬಂಧಿಸಿದಂತೆ ಟ್ವೀಟ್ ಅನ್ನು ಪ್ರಕಟಿಸಿದ್ದಾರೆ ಮತ್ತು “ವ್ಯಕ್ತಿಯೊಬ್ಬರು ನೃತ್ಯ ಮಾಡುವ ವಿಡಿಯೋವನ್ನು ನಾನು ಗಮನಿಸಿದ್ದೇನೆ. ಇದಕ್ಕೆ ನನ್ನ ಪ್ರತಿತಿಕ್ರಿಯೆ ಹೀಗಿದೆ. ವಿಇಯೋದಲ್ಲಿರುವ ವ್ಯಕ್ತಿ ನಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎ) ಇದು ನಾನಲ್ಲ, ಬಿ) ಯಾರನ್ನಾದರೂ ಈ ರೀತಿ ಅಪಹಾಸ್ಯ ಮಾಡುವುದು ಅಸಹ್ಯಕರ ಹೋಮೋಫೋಬಿಯಾ. ಧರ್ಮಾಂಧರು ತಮ್ಮ ದ್ವೇಷವನ್ನು ಸಮರ್ಥನೆಗಳ ಮೂಲಕ ಮುಚ್ಚಿಕೊಳ್ಳಬಹುದು, ಆದರೆ ಅದು ಅವರಿಗೆ ಮಾಡಿಕೊಳ್ಳುವ ಅವಮಾನ ಅಂತವರಿಗೆ ನಾಚಿಕೆಯಾಗಬೇಕು”. ಎಂದು ಟ್ವೀಟ್ ಮಾಡಿದ್ದಾರೆ.

ಹಾಗಾಗಿ ಈ ವೈರಲ್ ವಿಡಿಯೋದಲ್ಲಿ ನೃತ್ಯ ಮಾಡುತ್ತಿರುವ ವ್ಯಕ್ತಿ ಸೌರಭ್ ಕಿರ್ಪಾಲ್ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಸೌರಭ್ ಕಿರ್ಪಾಲ್ ಯಾರು ಗೊತ್ತೆ?

2002 ರಲ್ಲಿ ಭಾರತದ 31 ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಭೂಪಿಂದರ್ ನಾಥ್ ಕಿರ್ಪಾಲ್ ಮತ್ತು ಅರುಣಾ ಕಿರ್ಪಾಲ್ ಅವರ ಪುತ್ರ ಸೌರಭ್ ಕಿರ್ಪಾಲ್

ಅಕ್ಟೋಬರ್ 2017ರಲ್ಲಿ ಮೊದಲ ಬಾರಿಗೆ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ದೆಹಲಿ ಹೈಕೋರ್ಟ್ ಕೊಲಿಜಿಯಂ ಕಿರ್ಪಾಲ್ ಅವರನ್ನು ಶಿಫಾರಸು ಮಾಡಿತು. ಸೆಪ್ಟೆಂಬರ್ 2018ರಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ಇದನ್ನು “ಕೆಲವು ಸಮಯದ ನಂತರ” ಪರಿಗಣನೆಗೆ ತೆಗೆದುಕೊಳ್ಳಲು ನಿರ್ಧರಿಸಿತು. ಜನವರಿ 2019ರಲ್ಲಿ ಮತ್ತು ನಂತರ ಏಪ್ರಿಲ್ 2019ರಲ್ಲಿ ಮತ್ತೆ ಹೆಸರು ಮುನ್ನೆಲೆಗೆ ಬಂದಾಗ ಕೊಲಿಜಿಯಂ ತನ್ನ ನಿರ್ಧಾರವನ್ನು ಮುಂದೂಡಿತು.

ಸೌರಭ್ ಕಿರ್ಪಾಲ್
ಸೌರಭ್ ಕಿರ್ಪಾಲ್

ದೆಹಲಿ ಹೈಕೋರ್ಟ್ ಕೊಲಿಜಿಯಂ 2017 ರಲ್ಲಿ ಕಿರ್ಪಾಲ್ ಅವರನ್ನು ನ್ಯಾಯಾಧೀಶರನ್ನಾಗಿ ನೇಮಿಸುವಂತೆ ಶಿಫಾರಸು ಮಾಡಿತ್ತು. ತರುವಾಯ, ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರ ಹೆಸರನ್ನು ನಾಲ್ಕು ಬಾರಿ ಶಿಫಾರಸು ಮಾಡಿದೆ. ಆದರೆ ಎಲ್ಲಾ ಸಂದರ್ಭಗಳಲ್ಲಿ ಅವರ ನೇಮಕಾತಿಯನ್ನು ಮುಂದೂಡಲಾಗಿದೆ.

ಸಲಿಂಗಾಸಕ್ತ ವ್ಯಕ್ತಿಯಾಗಿರುವ ಹಿರಿಯ ವಕೀಲ ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸುವ ತನ್ನ ಶಿಫಾರಸನ್ನು ಪುನರುಚ್ಚರಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಅನ್ನು LGBTQ ಸಮುದಾಯದ ಸದಸ್ಯರು ಶ್ಲಾಘಿಸಿದ್ದರು. ಲೈಂಗಿಕ ದೃಷ್ಟಿಕೋನವು ಯಾರೊಬ್ಬರ ಸಾಮರ್ಥ್ಯವನ್ನು ನಿರ್ಣಯಿಸುವ ಸಾಧನವಾಗಿರಬಾರದು ಎಂದು LGBTQ ಸಮುದಾಯ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ವೀಡಿಯೊದಲ್ಲಿ ನೃತ್ಯ ಮಾಡುತ್ತಿರುವ ವ್ಯಕ್ತಿ ದಮನ್‌ದೀಪ್ ಸಿಂಗ್ ಚೌಧರಿ, ಡಿಜಿಟಲ್ ಕ್ರಿಯೇಟರ್ ಮತ್ತು ‘ರನ್‌ವೇ ಲೈಫ್‌ಸ್ಟೈಲ್’ ಕಂಪನಿಯ ಸಹ-ಸಂಸ್ಥಾಪಕ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸೌರಭ್ ಕಿರ್ಪಾಲ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ವರದಕ್ಷಿಣೆ ಕಿರುಕುಳದ ಘಟನೆಯನ್ನು ಲವ್ ಜಿಹಾದ್ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights