ಫ್ಯಾಕ್ಟ್‌ಚೆಕ್ : ಮೀಟರ್ ಅಳವಡಿಕೆಗೆ ಮುಂದಾದ ಅಧಿಕಾರಿಯನ್ನು ಕೊಲ್ಲತ್ತೇನೆ ಎಂದ ಮುಸ್ಲಿಮರು! ಈ ಘಟನೆ ಎಲ್ಲಿಯದು ಗೊತ್ತೆ?

ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮನೆ ಬಳಕೆ ವಿದ್ಯುತ್‌ಅನ್ನು ಕಳ್ಳತನ ಮಾಡುತ್ತಿದ್ದ ಹಿನ್ನಲೆಯಲ್ಲಿ, ಮನೆಗೆ ಮೀಟರ್‌ ಅಳವಡಿಸಲು ಬಂದ ಎಲೆಕ್ಟ್ರೀಷಿಯನ್‌ನೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ‘ಮನೆಗೆ ಮೀಟರ್‌ ಅಳವಡಿಸಿದರೆ, ಒಂದೋ ನಿನ್ನನ್ನು ಸಾಯಿಸುತ್ತೇನೆ. ಇಲ್ಲ ನೀನೇ ನನ್ನನ್ನು ಕೊಂದುಬಿಡು’ ಎಂದು ಮುಸ್ಲಿಂ ವ್ಯಕ್ತಿಯೊಬ್ಬರು ಎಲೆಕ್ಟ್ರೀಷಿಯನ್‌ ಒಬ್ಬರಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಈ ಘಟನೆ ಕರ್ನಾಟಕದಲ್ಲಿ ನಡೆದಿದ್ದು. ‘ಕಾಂಗ್ರೆಸ್‌ ನೀಡಿದ ಭರವಸೆಯನ್ನು ಪೂರ್ಣಗೊಳಿಸಲು ಕರ್ನಾಟಕ ವಿದ್ಯುತ್‌ ಇಲಾಖೆ ಕಷ್ಟ ಅನುಭವಿಸುತ್ತಿದೆ’ ಎಂದು ವಿಡಿಯೊ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಕೀ ಫ್ರೇಮ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಎಆರ್‌ವೈ ಎನ್ನುವ ಪಾಕಿಸ್ತಾನದ ಸುದ್ದಿ ಸಂಸ್ಥೆ ಮಾಡಿದ ವರದಿಯೊಂದು ಲಭ್ಯವಾಗಿದೆ. ಈ ಘಟನೆಯು 2020ರಲ್ಲಿ ಕರಾಚಿಯಲ್ಲಿ ನಡೆದಿದೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಪಾಕಿಸ್ತಾನದ ವಿಡಿಯೊ ಎಂಬುದು ಸ್ಪಚ್ಟವಾಗಿದೆ.

ಅತೌರ್ ರೆಹಮಾನ್ ಎಂಬ ವ್ಯಕ್ತಿಯು ತನ್ನ ಮನೆಗೆ ವಿದ್ಯುತ್ ಮೀಟರ್ ಅಳವಡಿಸುವುದನ್ನು ವಿರೋಧಿಸಿ ವಿದ್ಯುತ್ ಅಧಿಕಾರಿಗೆ ಬೆದರಿಕೆ ಹಾಕಿರುವುದು ಖಚಿತವಾಗಿದೆ.

ಕೆ–ಎಲೆಕ್ಟ್ರಿಕ್‌ ಎನ್ನುವ ಪಾಕಿಸ್ತಾನದ ಇಂಧನ ಸಂಸ್ಥೆವೊಂದು ಈ ವಿಡಿಯೊವನ್ನು ಮೊದಲು ಹಂಚಿಕೊಂಡಿದೆ. ‘ವಿದ್ಯುತ್‌ ಕದಿಯುವ ವೇಳೆಯಲ್ಲೇ ವ್ಯಕ್ತಿಯೊಬ್ಬರನ್ನು ಹಿಡಿಯಲಾಗಿದೆ’ ಎಂದು ಬರೆದುಕೊಳ್ಳಲಾಗಿದೆ. ಎಆರ್‌ವೈ ಎನ್ನುವ ಪಾಕಿಸ್ತಾನದ ಸುದ್ದಿ ಸಂಸ್ಥೆಯೊಂದು ಈ ಬಗ್ಗೆ ವರದಿಯನ್ನೂ ಮಾಡಿದೆ. ಆದ್ದರಿಂದ ಈ ವಿಡಿಯೊ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ ಎಂದು ಬೂಮ್ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2020ರಲ್ಲಿ ಪಾಕಿಸ್ತಾನದ ಕರಾಚಿತಲ್ಲಿ ಅತೌರ್ ರೆಹಮಾನ್ ಎಂಬ ವ್ಯಕ್ತಿಯು ತನ್ನ ಮನೆಗೆ ವಿದ್ಯುತ್ ಮೀಟರ್ ಅಳವಡಿಸಲು ಬಂದ ಅಧಿಕಾರಿಗೆ ಬೆದರಿಕೆ ಹಾಕಿರುವ ಹಳೆಯ ವಿಡಿಯೋವನ್ನು, ಕರ್ನಾಟಕದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರೆಂಟಿ ಭರವಸೆಗಳನ್ನು ಈಡೇರಿಸಲು ಕರ್ನಾಟಕದ ವಿದ್ಯುತ್ ಇಲಾಕೆಯ ಅಧಿಕಾರಿಗಳು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ ; ಬೂಮ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಹಿಂದೂ ದೇವಾಲಯದ ವಿಗ್ರಹಗಳನ್ನು ವಿರೂಪಗೊಳಿಸಿದ್ದು ಮುಸ್ಲಿಮರಲ್ಲ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights