ಆಲ್ಬಂ ಸಾಂಗ್ ನಲ್ಲಿ ತುಪ್ಪದ ಹುಡುಗಿ : ಭಾರೀ ನಿರೀಕ್ಷೆ ಹುಟ್ಟಿಸಿದ ಹಾಡು!

ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಸದ್ಯ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹು ದಿನಗಳ ಬಳಿಕ ನಟಿ ಕಾಣಿಸಿಕೊಳ್ಳಲಿದ್ದು ಅಭಿಮಾನಿಗಳು ಹಾಡಿನ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.

ಡ್ರಗ್ಸ್ ಕೇಸ್ ನಿಂದ ಜೈಲುಪಾಲಗಿ ಹೊರಬಂದ ರಾಗಿಣಿ ಮತ್ತೆ ಶೂಟಿಂಗ್ ನಲ್ಲಿ ತಮ್ಮನ್ನ ತೊಡಗಿಸಿಕೊಳ್ಳುತ್ತಿದ್ದಾರೆ. ಹಾಡಿನಲ್ಲಿ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಸಿಕೊಂಡಿದ್ದು, ಮೊದಲ ಲುಕ್ ಶೇರ್ ಮಾಡಿದ್ದಾರೆ. ಈ ಹಾಡು ಪ್ರೇಕ್ಷಕರಿಗೆ ಎನರ್ಜಿ ಬೂಸ್ಟ್ ಆಗಲಿದೆ ಎಂದಿದ್ದಾರೆ.

ಹಾಡಗೆ ಭಜರಂಗಿ ಖ್ಯಾತಿಯ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದು, ರುದ್ರಾಕ್ಷ್ ವಸ್ತ್ರವಿನ್ಯಾಸ ಮಾಡಿದ್ದಾರೆ.ವಿ ಮನೋಹರ್ ಸಂಗೀತ ಸಂಯೋಜಿಸಿದ್ದು, ಚೈತ್ರಾ ಅವರದ್ದು ಹಿನ್ನೆಲೆ ಗಾಯನವಿದೆ. ಇನ್ನೂ ಪ್ರೀತಮ್ ಛಾಯಾಗ್ರಹಣ ಮಾಡಿದ್ದರೆ,ಕನ್ನಡ ಆಲ್ಬಂ ಹಾಡನ್ನು ಟಿ ಆರ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.

ಹಾಡಿನದಲ್ಲಿ ರಾಗಿಣಿ ವಿವಿಧ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಸ್ಟಲ್ ಮ್ಯೂಸಿಕ್ ಚಾನೆಲ್ ನಲ್ಲಿ ರಿಲೀಸ್ ಆಗಲಿದ್ದು ನಂತರ ವಿವಿಧ ಭಾಷೆಗಳಲ್ಲಿ ಹಾಡು ರಿಲೀಸ್ ಆಗಲಿದೆ.

ಸದ್ಯ ರಾಗಿಣಿ ಕನ್ನಡದ ಕರ್ವ 3, ಜಾನಿ ವಾಕರ್ ಸಿನಿಮಾ ಶೂಟಿಂಗ್ ಗಾಗಿ ಕಾಯುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights