ದೇಶದಲ್ಲಿ ಕೊರೊನಾ ಸ್ಪೋಟ : 3.60 ಲಕ್ಷ ಹೊಸ ಕೇಸ್ – 3,293 ಜನ ಬಲಿ!

ದೇಶದಲ್ಲಿ ಕೊರೊನಾ ಅಬ್ಬರ ಕೈಮೀರಿ ಹೋಗುತ್ತಿದೆ. ದಿನ ಕಳೆದಂತೆ ಸೋಂಕಿತರ ಸಂಖ್ಯೆ ಮಾತ್ರವಲ್ಲದೇ ಸಾವಿನ ಸಂಖ್ಯೆಯಲ್ಲೂ ಅಧಿಕವಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಭಾರತ 3.60 ಲಕ್ಷ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದ್ದು 3,293 ಜನ ಸೋಂಕಿಗೆ ಬಲಿಯಾಗಿದ್ದಾರೆ.

ಹೌದು… ಭಾರತದಲ್ಲಿ 3.60 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳನ್ನು ಕಳೆದ 24 ಗಂಟೆಯಲ್ಲಿ ದಾಖಲಾಗಿವೆ. ಈವರೆಗೆ ದೆಶದಲ್ಲಿ 1,79,97,267 ಪ್ರಕರಣಗಳು ದಾಖಲಾಗಿವೆ.  3,293 ಸಾವುಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈವರೆಗೆ ಸಾವಿನ ಸಂಖ್ಯೆ 2 ಲಕ್ಷ ದಾಟಿದೆ.

ಒಟ್ಟು ಪ್ರಕರಣಗಳ ಪೈಕಿ 1,48,17,371 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, ಸಾವಿನ ಸಂಖ್ಯೆ 2,01,187ಕ್ಕೆ ಏರಿಕೆಯಾಗಿದೆ.
29,78,709 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಈವರೆಗೆ 14,78,27,367 ಜನರಿಗೆ ವ್ಯಾಕ್ಸಿನೇಷನ್ ನೀಡಲಾಗಿದೆ.

India Sees 3.6 Lakh Covid Cases, 3,293 Deaths In Worst Daily Spike

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights