ಪ್ರಧಾನಿ ಮೋದಿ ಅವರ ಚಿಕ್ಕಮ್ಮ ಕೊರೊನಾದಿಂದ ಸಾವು!
ಕೊರೊನಾ ಸೋಂಕಿಗೆ ಒಳಗಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಚಿಕ್ಕಮ್ಮ ನರ್ಮದಾ ಬೆನ್ ಅವರು ಚಿಕಿತ್ಸೆ ಫಲಕಾರಿಯಾಗದೇ ಅಹಮದಾಬಾದ್ನಲ್ಲಿ ಮೃತಪಟ್ಟಿದ್ದಾರೆ.
80 ವರ್ಷದ ನರ್ಮದಾಬೆನ್ ಅವರು ಕೊರೊನಾಗೆ ಒಳಗಾದ ಬಳಿಕ ಗುಜರಾತ್ನ ಅಹಮದಾಬಾದ್ನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಆಸ್ಪತ್ರೆಯಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.
ನಮ್ಮ ಚಿಕ್ಕಮ್ಮನನ್ನು ಕಳೆದ 10 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪ್ರಹ್ಲಾದ ಮೋದಿ ತಿಳಿಸಿದ್ದಾರೆ.
ಅಹಮದಾಬಾದ್ನ ನ್ಯೂ ರ್ಯಾನಿಪ್ ಪ್ರದೇಶದಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ನರ್ಮದಾಬೆನ್ ಅವರ ಪತಿ ಜಗಜೀವನ್ದಾಸ್ ಅವರು ಪ್ರಧಾನಿ ನರೇಂದ್ರ ಮೋದಿಯವರ ತಂದೆಯ ಸಹೋದರರಾಗಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: BJP ಸರ್ಕಾರ ಜಿಂದಾಲ್ ಮುಂದೆ ಮಂಡಿಯೂರಲು ಕಾರಣವಿದೆ; ಅದನ್ನು BSY ಬರಿರಂಗಪಡಿಸಲಿ: ಹೆಚ್ಡಿಕೆ