FACT CHECK | ಶುಭ್‌ಮನ್ ಗಿಲ್ ಎದೆಯ ಮೇಲೆ ಅಂಬೇಡ್ಕರ್ ಟ್ಯಾಟೂ ಇರುವ ಫೋಟೊ ವೈರಲ್ ಅಸಲೀಯತ್ತೇನು?
ಟೀಂ ಇಂಡಿಯಾದ ಸ್ಟಾರ್ ಆಟಗಾರ ಶುಭ್‌ಮನ್ ಗಿಲ್, ತಮ್ಮ ಎದೆಯ ಮೇಲೆ ಅಂಬೇಡ್ಕರ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ವೈರಲ್ ಆಗಿದೆ.
ये जस हिसाब से खेल रहा था तभी समझ आगया था की कौन है ये…जिसमें होगा दम वही कहेगा चमार वंश से है हम ।। जय चमार कौम जय चमार समाज…
क्रांतिकारी जय भीम pic.twitter.com/4IQb5JtHzn— Sonu Singh Shudr (@SonuSinghShudr) February 25, 2025
‘ಸೋನು ಸಿಂಗ್ ಶೂದ್ರ್‘ ಹೆಸರಿನ ಎಕ್ಸ್ ಬಳಕೆದಾರರು ಶುಭ್‌ಮನ್ ಗಿಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಗಿಲ್ ಬಲಗೈಯಲ್ಲಿ ಬ್ಯಾಟ್ ಹಿಡಿದುಕೊಂಡಿದ್ದು, ಬಲ ಎದೆಯ ಮೇಲೆ ಅಂಬೇಡ್ಕರ್ ಚಿತ್ರವಿದೆ. ಈ ಚಿತ್ರದ ಜೊತೆ, ‘ಅವನು ತನ್ನ ಇಚ್ಛೆಯಂತೆ ಆಡುತ್ತಿದ್ದ, ಆಗ ಮಾತ್ರ ಅವನು ಯಾರೆಂದು ನನಗೆ ಅರ್ಥವಾಯಿತು. ಧೈರ್ಯವಿರುವವನು ತಾನು ಚಾಮರ್ ಕುಲದವನು ಎಂದು ಹೇಳುತ್ತಾನೆ. ಜೈ ಚಾಮರ್ ಸಮುದಾಯ, ಜೈ ಚಾಮರ್ ಸಮಾಜ, ಕ್ರಾಂತಿಕಾರಿ ಜೈ ಭೀಮ್’ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ये जस हिसाब से खेल रहा था तभी समझ आगया था की कौन है ये…जिसमें होगा दम वही कहेगा चमार वंश से है हम ।। जय चमार कौम जय चमार समाज…
क्रांतिकारी जय भीम pic.twitter.com/dVxVCdioB7— Seema Singh Shudr (@SeemaSinghShudr) February 25, 2025
ಇದೇ ಚಿತ್ರವನ್ನು ‘ಸೀಮಾ ಸಿಂಗ್ ಶೂದ್ರ್’, ‘ಮೈನಸ್ ವೈ’ ಹೆಸರಿನ ಇನ್ನಿಬ್ಬರು ಎಕ್ಸ್ ಬಳಕೆದಾರರೂ ಹಂಚಿಕೊಂಡಿದ್ದಾರೆ. ಅಲ್ಲದೆ ಹಲವು ಇನ್‌ಸ್ಟಾಗ್ರಾಮ್ ಖಾತೆಯಲ್ಲೂ ಶುಭ್‌ಮನ್ ಗಿಲ್ ಅವರ ಈ ಚಿತ್ರವನ್ನು ಹಂಚಿಕೊಳ್ಳಲಾಗಿದ್ದು ವೈರಲ್ ಆಗಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.
View this post on Instagram
ಇದೇ ರೀತಿಯ ಫೋಟೊಗಳನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯೂ ಲಭ್ಯವಾಗಿಲ್ಲ.
ಮತ್ತಷ್ಟು ಗೂಗಲ್ ಸರ್ಚ್ ಮಾಡಿದಾಗ, ಶುಭ್‌ಮನ್ ಗಿಲ್ ಅವರೇ ಪೋಸ್ಟ್ ಮಾಡಿರುವ ಚಿತ್ರಗಳು ಲಭ್ಯವಾಗಿವೆ. ಆದರೆ ಈ ಚಿತ್ರದಲ್ಲಿ ಅವರ ಎದೆ ಮೇಲೆ ಯಾವುದೇ ಟ್ಯಾಟೂ ಇಲ್ಲ. ಹೀಗಾಗಿ ಇದು ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಿದ ಚಿತ್ರವಾಗಿರಬಹುದು ಎಂಬ ಅನುಮಾನ ಮೂಡಿತು. ಹೀಗಾಗಿ ಇದನ್ನು ಎಐ ಚಿತ್ರಗಳನ್ನು ಪತ್ತೆ ಹಚ್ಚುವ ಟೂಲ್‌ಗಳ ಮೊರೆ ಹೋದೆವು.
![]()
ಶುಭ್‌ಮನ್ ಗಿಲ್ ಚಿತ್ರದ ಬಗ್ಗೆ ಹೈವ್ ಮಾಡರೇಷನ್ ನೀಡಿರುವ ಫಲಿತಾಂಶ ಇದನ್ನು ಮತ್ತಷ್ಟು ಖಚಿತಪಡಿಸಲು ಎಐ ಚಿತ್ರಗಳನ್ನು ಪತ್ತೆ ಹಚ್ಚುವ ‘ಡಿಕಾಪಿ ಎಐ’ ಎಂಬ ಇನ್ನೊಂದು ಟೂಲ್‌ನಲ್ಲಿ ಪರಿಶೀಲನೆಗೆ ಒಳಪಡಿಸಿದೆವು. ಆಗ ಇದೂ ಶೇ. 92.43 ಎಐ ಬಳಸಿ ರಚಿಸಿದ ಚಿತ್ರ ಎಂಬ ಫಲಿತಾಂಶ ನೀಡಿತು.
![]()
ಮೊದಲಿಗೆ ಎಐ ಚಿತ್ರಗಳನ್ನು ಪತ್ತೆ ಹಚ್ಚುವ ‘ಹೈವ್ ಮಾಡರೇಷನ್’ನಲ್ಲಿ ಈ ಚಿತ್ರವನ್ನು ಪರಿಶೀಲನೆಗೆ ಒಳಪಡಿಸಿದೆವು. ಆಗ ಇದು ಶೇ. 99.3ರಷ್ಟು ಎಐ ಚಿತ್ರ ಎಂಬ ಫಲಿತಾಂಶವನ್ನು ನೀಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಶುಭ್‌ಮನ್ ಗಿಲ್ ತಮ್ಮ ಎದೆಯ ಮೇಲೆ ಅಂಬೇಡ್ಕರ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂದು AI ನಿಂದ ರಚಿಸಿದ ಫೋಟೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸುನೀತಾ ವಿಲಿಯಮ್ಸ್ ಭೂಮಿಗೆ ಹಿಂದಿರುಗಿದ ವಿಡಿಯೋ ಎಂದು 2024ರ ಹಳೆಯ ವಿಡಿಯೋವನ್ನು

