ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇಂದು ಸ್ಮರಣೀಯ ದಿನ..!
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇಂದು ಸ್ಮರಣೀಯ ದಿನ. ಯಾಕೆಂದರೇ ಇಂದಿಗೆ ಸರಿಯಾಗಿ 27 ವರ್ಷಗಳ ಹಿಂದೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ತಮ್ಮ ಮೊದಲ ಶತಕ ಸಿಡಿಸಿದ್ದರು.
ಹೌದು..! ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಬರೋಬ್ಬರಿ 49 ಸೆಂಚೂರಿಗಳನ್ನು ಸಿಡಿಸಿದ್ದಾರೆ.
ಈ ಏಕದಿನ ಶತಕಗಳಿಗೆ ಮೊದಲು ಬುನಾದಿ ಹಾಕಿದ್ದು.. ಸೆಪ್ಟೆಂಬರ್ 9, 1994.. ಶ್ರೀಲಂಕಾದ ಕೊಲೊಂಬೋದಲ್ಲಿ..
ಲಂಕಾದ ಕೊಲೊಂಬೋದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ತೆಂಡೂಲ್ಕರ್ 130 ಎಸೆತಗಳನ್ನು ಎದುರಿಸಿ 110 ರನ್ ಗಳಿಸಿದ್ದರು.
ಸಚಿನ್ ರ ಈ ಶತಕದಲ್ಲಿ ಎರಡು ಸಿಕ್ಸರ್ ಮತ್ತು ಎಂಟು ಫೋರ್ ಗಳಿದ್ದವು. ಈ ಶತಕದ ನೆರವಿನಿಂದ ಆ ಪಂದ್ಯವನ್ನು ಭಾರತ 31 ರನ್ ಗಳ ಅಂತರದಿಂದ ಗೆಲುವು ಕಂಡಿತ್ತು.