ಲಖಿಂಪುರ್ ಖೇರಿ ಹಿಂಸಾಚಾರ : ಬಂಧನವಾಗದ ಆರೋಪಿ – ತೀವ್ರ ಆಕ್ರೋಶ..!

ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಎಂಟು ಸಾವುಗಳ ಕೊಲೆ ಆರೋಪಿಯಾಗಿದ್ದಾನೆ. ಈ ಪ್ರಕರಣದ ಕುರಿತು ದೇಶಾದ್ಯಂತ ಆಕ್ರೋಶದ ನಡುವೆಯೂ ಆಶಿಶ್ ಹಿರಿಯ ಪೋಲಿಸ್ ವಿಚಾರಣೆಯನ್ನು ತಪ್ಪಿಸಿಕೊಂಡಿದ್ದರಿಂದ ಇಂದು ಬೆಳಿಗ್ಗೆ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಆಶಿಶ್ ಮಿಶ್ರಾ ಅವರನ್ನು ವಿರೋಧ ಪಕ್ಷದ ನಾಯಕರು ಬಂಧಿಸುವಂತೆ ಕರೆ ನೀಡಿದ್ದರಿಂದ ಇದೇ ಮೊದಲ ಬಾರಿಗೆ ವಿಚಾರಣೆಗೆ ಕರೆಸಲಾಗಿದೆ. ಲಖಿಂಪುರದಲ್ಲಿ ಭುಗಿಲೆದ್ದ ಹಿಂಸಾಚಾರವು ಒಂದು ಪ್ರಮುಖ ರಾಜಕೀಯ ವಿಷಯವಾಗಿ ಬದಲಾಗಿದೆ.

ಕಿರಿಯ ಗೃಹ ಸಚಿವ ಅಜಯ್ ಮಿಶ್ರಾ ಮತ್ತು ಯುಪಿಯ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿ ವಿರೋಧಿಸಿ ಪ್ರತಿಭಟನಾಕಾರರ ಗುಂಪಿನ ಮೇಲೆ ಕಾರು ನುಗ್ಗಿದ ಪರಿಣಾಮ ಯುಪಿ ಜಿಲ್ಲೆಯಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ.

ಗುರುವಾರ ಕೇಂದ್ರ ಸಚಿವರ ಮನೆಯ ಹೊರಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿದ್ದಾರೆ.  ಹೀಗಾಗಿ ಅಜಯ್ ಮಿಶ್ರಾ ಅವರನ್ನು ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಕೇಳಲಾಗಿದೆ. ಆದರೆ ಎಂಟು ಸದಸ್ಯರ ತನಿಖಾ ತಂಡದ ಮುಖ್ಯಸ್ಥರಾಗಿರುವ ಉನ್ನತ ಪೊಲೀಸ್ ಉಪೇಂದ್ರ ಅಗರ್ವಾಲ್ ಆಶಿಶ್ ಮಿಶ್ರಾ ಅವರಿಗಾಗಿ ಕಾಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಸೇರಿದಂತೆ ಇತರರು ಆರೋಪಿಗಳನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಆಶಿಶ್ ಮಿಶ್ರಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ರೈತರು ಸಲ್ಲಿಸಿದ ಎಫ್‌ಐಆರ್‌ನಲ್ಲಿ , “ನಾವು ಶಾಂತಿಯುತ ಕಪ್ಪು ಬಾವುಟದ ಪ್ರತಿಭಟನೆಯಲ್ಲಿ ನಿರತರಾಗಿದ್ದೆವು. ಮಧ್ಯಾಹ್ನ 3 ರ ಸುಮಾರಿಗೆ ಆಶಿಶ್ ಮಿಶ್ರಾ ತನ್ನ ಮೂರು ವಾಹನಗಳಲ್ಲಿ 15-20 ಜನದಿಂದ ಕಾರಿನಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಬನ್ವಾರಿಪುರದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಆಶಿಶ್ ಅವರ ಜೊತೆ  ಕುಳಿತಿದ್ದ ಮಹೀಂದ್ರಾ ಜನರ ಮೇಲೆ ಗುಂಡು ಹಾರಿಸಿದನು. ಈ ಗುಂಡಿನ ದಾಳಿಯಿಂದಾಗಿ ರೈತ ಸುಖವಿಂದರ್ ಸಿಂಗ್ ಅವರ 22 ವರ್ಷದ ಮಗ ಗುರ್ವಿಂದರ್ ನಿಧನರಾದರು” ಎಂದು ಉಲ್ಲೇಖಿಸಲಾಗಿದೆ.

“ಆಶಿಶ್ ಮಿಶ್ರಾ ಅವರಿಗೆ ಸಮನ್ಸ್ ನೀಡಲಾಗಿದೆ ಮತ್ತು ಆದಷ್ಟು ಬೇಗ ವಿಚಾರಣೆಗೆ ಬರುವಂತೆ ಕೇಳಲಾಗಿದೆ. ಅವರ ವಿರುದ್ಧ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು” ಎಂದು ಲಕ್ನೋ ವಲಯದ ಇನ್ಸ್‌ಪೆಕ್ಟರ್ ಜನರಲ್ ಲಕ್ಷ್ಮಿ ಸಿಂಗ್ ಗುರುವಾರ ಎನ್‌ಡಿಟಿವಿಗೆ ತಿಳಿಸಿದ್ದರು.

ಜೊತೆಗೆ “ನಾವು ಯಾರನ್ನೂ ರಕ್ಷಿಸುತ್ತಿಲ್ಲ. ದೇಶದ ಕಾನೂನು ಎಲ್ಲರಿಗೂ ಸಮಾನವಾಗಿದೆ. ಕಠಿಣ ಕ್ರಮ ಕೈಗೊಳ್ಳುವುದನ್ನು ನಾವು ಖಚಿತಪಡಿಸುತ್ತೇವೆ” ಎಂದು ಲಕ್ಷ್ಮಿ ಸಿಂಗ್ ಹೇಳಿದರು.

ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಗುರುವಾರ “ಎಷ್ಟು ಜನರನ್ನು ಬಂಧಿಸಲಾಗಿದೆ” ಎಂದು ಪ್ರಶ್ನಿಸಿದೆ ಮತ್ತು ಶುಕ್ರವಾರದೊಳಗೆ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ.

ಅಜಯ್ ಮಿಶ್ರಾ ಮತ್ತು ಅವರ ಪುತ್ರ ತಾವು ಸ್ಥಳದಲ್ಲಿದ್ದರು ಎನ್ನುವುದನ್ನು ನಿರಾಕರಿಸಿದ್ದರೂ, ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು ಎಂಬ ಬೇಡಿಕೆಗಳು ಬಂದಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights