ವಿಶ್ವಗುರು ಎಂದಿದ್ದ ಭಾರತ, ಈಗ ವಿಶ್ವದ ಭಿಕ್ಷುಕ ದೇಶವಾಗಿ ಬದಲಾಗಿದೆ: ಟಿಎಂಸಿ ನಾಯಕ ಯಶವಂತ್ ಸಿನ್ಹಾ

ವಿಶ್ವಗುರು ಎಂದು ಹೇಳಲಾಗುತ್ತಿದ್ದ ಭಾರತವು, ಈಗ ವಿಶ್ವಗುರುನಿಂದ ವಿಶ್ವದ ಭಿಕ್ಷುಕವಾಗಿ ಬದಲಾಗಿದೆ ಎಂದು ಮಾಜಿ ಕೇಂದ್ರ ಸಚಿವ, ಟಿಎಂಸಿ ನಾಯಕ ಯಶವಂತ್ ಸಿನ್ಹಾ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿನ್ಹಾ, ಇಡೀ ವಿಶ್ವಕ್ಕೆ ಲಸಿಕೆ ಪೂರೈಕೆ ಮಾಡುತ್ತಿದ್ದ ದೇಶ, ಇದೀಗ ಕೊರೊನಾ ಎದುರಿಸಲು, ಕೊರೊನಾ ಅಪಾಯದಿಂದ ಜೀವ ಉಳಿಸಿಕೊಳ್ಳಲು ಆಕ್ಸಿಜನ್‌ ಮತ್ತು ಇತರ ವೈದ್ಯಕೀಯ ಪರಿಕರಳಿಗಾಗಿ ಅನ್ಯ ದೇಶಗಳ ಎದುರು ಅಂಗಲಾಚಿ ಬೇಡುವಂತಹ ದಾರುಣ, ದಯನೀಯ ಪರಿಸ್ಥಿತಿಗೆ ಭಾರತ ತಲುಪಿದೆ ಎಂದು ಹೇಳಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗಿದ್ದರು ಆಡಳಿತ ನಡೆಸುವವರು ಇದರ ನಿಯಂತ್ರಣಕ್ಕೆ ಬೇಕಾದ ಕ್ರಮ ಕೈಗೊಳ್ಳಲುವ ಬದಲು ಭಾಷಣಗಳಿಂದ, ಮಾತಿನಿಂದ ಜನರ ಹೊಟ್ಟೆ ತುಂಬಿಸಲು ಹೊರಟಿದ್ದಾರೆ ಎಂದೂ ಅವರು ಲೇವಡಿ ಮಾಡಿದ್ದಾರೆ.

ಇಂದು ದೇಶದಲ್ಲಿ 3,23,144 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 1,76,36,307ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿತ ಚೇತರಿಕೆಯ ಪ್ರಮಾಣ ಶೇ.82.54 ರಷ್ಟಿದ್ದು, ಸಾವಿನ ಸಂಖ್ಯೆ 1,97,894ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Read Also: ಕ್ಯಾಲಿಫೋರ್ನಿಯಾದಿಂದ ಭಾರತಕ್ಕೆ ಆಕ್ಸಿಜನ್‌ ನೆರವು: ಮಂಗಳವಾರ ಆಕ್ಸಿಜನ್‌ ರವಾನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights