ಹಾಸ್ಯ ನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರಿಂದ ಅಟ್ಯಾಕ್..!

ಹಾಸ್ಯ ನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಕೆಲ ಮಂಗಳಮುಖಿಯರಿಂದ ಅಟ್ಯಾಕ್ ಮಾಡಿದ ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ಹೆಬ್ಬಾಳ ಬಳಿ‌ ಈ ಘಟನೆ ನಡೆದಿದ್ದು ನಟಿ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಹಲ್ಲೆಗೊಳಗಾಗಿದ್ದಾನೆ.  ನಿನ್ನೆ ರಾತ್ರಿ 9 ಗಂಟೆಗೆ ಜಿಮ್ ಮುಗಿಸಿ ಮನೆಗೆ ವಾಪಸ್ ಆಗ್ತಿದ್ದ ರಕ್ಷಕ್ ಮೇಲೆ ಕೆಲ ಮಂಗಳಮುಖಿಯರಿಂದ ಅಟ್ಯಾಕ್ ಮಾಡಿದ್ದಾರೆ.

ಹೆಬ್ಬಾಳ ಪ್ಲೈ ಓವರ್ ಬಳಿ ಮಂಗಳಮುಖಿಯರು ರಕ್ಷಕ್ ಬ್ಯಾಗ್ ಹಿಡಿದು ಎಳೆದಾಡಿದ್ದು ಆಗ ಬೈಕ್ ನಿಂದ ರಕ್ಷಕ್ ಕೆಳಗೆ ಬಿದ್ದಿದ್ದಾನೆ. ರಕ್ಷಕ್ ಕಾಲಿಗೆ ತರಚಿದ ಗಾಯಗಳಿದ್ದು, ಗಾಡಿಯೂ ಡ್ಯಾಮೇಜ್ ಆಗಿದೆ.

ಮಂಗಳ ಮುಖಿಯರ ದಾಳಿಯಿಂದ ತಪ್ಪಿಸಿಕೊಳ್ಳಲು ರಕ್ಷಕ್ ಫ್ಲೈ ಓವರ್ ಮೇಲೆ ಗಾಡಿ ಬಿಟ್ಟು ಓಡಿಹೋಗಿದ್ದಾನೆ. ಬಳಿಕ ಹೆಬ್ಬಾಳ ಪೊಲೀಸರ ಸಹಾಯದಿಂದ ಬೈಕ್ ತೆಗೆದುಕೊಂಡು ಹೋಗಿದ್ದಾನೆ.

ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights