ಮಲಬಾರ್‌ ದಂಗೆಯ ನಾಯಕ ವರಿಯಮ್ಕುನ್ನಾಥ್ ಸಿನಿಮಾವನ್ನು ವಿರೋಧಿಸಿ ಮುಜುಗಕ್ಕೀಡಾದ ಬಿಜೆಪಿ

ಮಲಯಾಳಂ ನಿರ್ದೇಶಕ ಆಶಿಕ್ ಅಬು ಅವರು ಮಲಬಾರ್ ದಂಗೆಯ ನಾಯಕ, ಸ್ವಾತಂತ್ರ್ಯ ಸೇನಾನಿ ವರಿಯಮ್ಕುನ್ನಾಥ್ ಕುಂಜಹಮ್ಮದ್ ಹಾಜಿ ಅವರ ಜೀವನ ಚರಿತ್ರೆಯನ್ನಾಧಾರಿತ ಸಿನಿಮಾ ಮಾಡಲು ಹೊರಟಿದ್ದಾರೆ ಎಂಬ ಪ್ರಕಟಣೆ ಜುಲೈ ತಿಂಗಳಿನಲ್ಲಿ ಹೊರಬರುತ್ತಿದ್ದಂತೆ ಬಲಪಂಥೀಯರು ಆಶಿಕ್ ಅಬು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಮಲಬಾರ್ ದಂಗೆ ಹಿಂದೂ ವಿರೋಧಿ ಮತ್ತು ಮುಸ್ಲಿಮರಿಂದ ಹಿಂದೂಗಳ ಹತ್ಯಾಕಾಂಡಕ್ಕೆ ಕಾರಣವಾಗಿತ್ತು. ವರಿಯಮ್ಕುನ್ನಾಥ್ ಧರ್ಮಾಂಧ. ಆತನ ಬಗ್ಗೆ ಸಿನಿಮಾ ಮಾಡಬಾರದು ಎಂದು ಬಿಜೆಪಿ ಆರೋಪಿಸಿತ್ತು.

أنس Anaz on Twitter: "The legend of "Variyamkunnath Kunjahammed Haji" the  brave freedom fighter who stood up to the British in Kerala's Malabar  region in early 20th century and even established a

ಆದಾಗ್ಯೂ, ಕೇಂದ್ರದ ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ ಮತ್ತು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ಐಸಿಎಸ್‌ಆರ್) ಜಂಟಿಯಾಗಿ ಪ್ರಕಟಿಸಿದ ‘ಡಿಕ್ಷನರಿ ಆಫ್ ಮಾರ್ಟಿರ್ಸ್ ಆಫ್ ಇಂಡಿಯಾಸ್ ಫ್ರೀಡಂ ಸ್ಟ್ರಗಲ್’ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟದ ಹುತಾತ್ಮರ ಪಟ್ಟಿಯಲ್ಲಿ ವರಿಯಮ್ಕುನ್ನಾಥ್ ಅವರ ಹೆಸರು ಕಂಡುಬಂದಿದೆ. ಈ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 2019ರಲ್ಲಿ ಬಿಡುಗಡೆ ಮಾಡಿದ್ದರು. ಇದು ಈಗ ಬಿಜೆಪಿಗರೇ ಮುಜುಗರಕ್ಕೀಡಾಗುವಂತೆ ಮಾಡಿದೆ.

ಮಲಬಾರ್ ದಂಗೆ ಮತ್ತು ಬ್ರಿಟಿಷರಿಂದ ಮರಣದಂಡನೆ ಶಿಕ್ಷೆಗೆ ಒಳಗಾದ ಮಲಬಾರ್‌ ದಂಗೆಯ ಪ್ರಮುಖ ನಾಯಕರಲ್ಲಿ ಒಬ್ಬರಾದ ವರಿಯಮ್ಕುನ್ನಾಥ್ ಅವರ ಪಾತ್ರದ ಬಗ್ಗೆ ಸಿನಿಮಾ ಮಾಡುವುದಾಗಿ ಪ್ರಕಟಸಿದ ನಂತರ ಸಿನಿಮಾವು ಕೇರಳದಲ್ಲಿ ಚರ್ಚೆಯನ್ನು ಹುಟ್ಟುಹಾಕಿತ್ತು. ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ವರಿಯಮ್ಕುನ್ನಾಥ್ ಕಾರಣ ಮತ್ತು ಅವರನ್ನು ನಾಯಕನಂತೆ ಚಿತ್ರಿಸಬಾರದು ಎಂದು ಸಂಘ ಪರಿವಾರ ಸಿನಿಮಾ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು.

ಬಿಜೆಪಿಯ ರಾಜ್ಯ ನಾಯಕರ ಕೆಪಿ ಶಶಿಕಲಾ ಅವರು ಚಿತ್ರ ತಂಡವು ಇತಿಹಾಸವನ್ನು “ವೈಟ್ ವಾಶ್” ಮಾಡಲು ಮುಂದಾಗಿದೆ ಎಂದು ಆರೋಪಿಸಿದರು. ಆದರೆ, ಭಾರತ ಸರ್ಕಾರ ಪ್ರಕಟಿಸಿದ ಪುಸ್ತಕದಲ್ಲಿ ವರಿಯಮ್ಕುನ್ನಾಥ್ ಅವರನ್ನು ಹುತಾತ್ಮರನ್ನಾಗಿ ಸೇರಿಸುವುದರಿಂದ ಸಂಘ ಪರಿವಾರಕ್ಕೆ ಈಗ ಅವರ ಆರೋಪವೇ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

India releases Dictionary of Martyrs of its freedom struggle -  International - observerbd.com

ಪುಸ್ತಕದ 248 ನೇ ಪುಟದಲ್ಲಿ ನೀಡಿರುವ ವಿವರಣೆಯ ಪ್ರಕಾರ, ವರಿಯಮ್ಕುನ್ನಾಥ್ ಅವರು ಕೇರಳದ ದಕ್ಷಿಣ ಮಲಬಾರ್‌ನ ಎರಾನಾಡ್‌ನ ನೆಲ್ಲಿಕೊಟ್ಟು ಎಂಬಲ್ಲಿ ಮೊಯಿದೀನ್ ಹಾಜಿ ಮತ್ತು ಅಮಿನಕುಟ್ಟಿ ಹಜ್ಜುಮ್ಮ ದಂಪತಿಯ ಮಗನಾಗಿ ಜನಿಸಿದರು.

“ವರಿಯಮ್ಕುನ್ನಾಥ್ ಅವರು ಮಾಪ್ಪಿಲಾ ಬಂಡಾಯ ನಾಯಕ ಅಲಿ ಮುಸಲಿಯಾರ್ ಅವರ ನಿಕಟವರ್ತಿ ಮತ್ತು ಸಂಬಂಧಿ. ವರಿಯಮ್ಕುನ್ನಾಥ್ ಅವರು ಮತ್ತು ಅವರ ತಂದೆ ಬ್ರಿಟಿಷ್‌ ಸರ್ಕಾರದ ವಿರುದ್ದದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅಲ್ಪಾವಧಿಗೆ ಮೆಕ್ಕಾಗೆ ಗಡಿಪಾರು ಮಾಡಲ್ಪಟ್ಟರು. ನಂತರ, ಹಿಂದಿರುಗಿ ಬಂದ ಅವರು ಬ್ರಿಟಿಷ್‌ ವಿರೋಧಿ ಚಟುವಟಿಕೆಗಳನ್ನು ಮುಂದುವರೆಸಿದ್ದರು. ಮಜೇರಿ, ನಿಲಾಂಬೂರ್‌, ಕಲ್ಲಮಾಲ ಮತ್ತು ಗುಡಲೂರುನಲ್ಲಿ ಪೊಲೀಸ್ ತರಬೇತಿ ಶಿಬಿರದ ಬ್ರಿಟಿಷ್ ಸೈನ್ಯದ ಮೇಲೆ ದಾಳಿ ನಡೆಸಿದರು. ಈ ಪ್ರದೇಶದಲ್ಲಿ ಬ್ರಿಟಿಷ್‌ ಆಡಳತವಿಲ್ಲ, ನಾವೇ ಆಟಳಿತಗಾರರು ಎಂದು ಘೋಷಿಸಿಕೊಂಡಿದ್ದರು. ಆದರೆ, ಜನವರಿ 1922ರಲ್ಲಿ ವರಿಯಮ್ಕುನ್ನಾಥ್ ಹಾಜಿಯನ್ನು ಕಲ್ಲಮೂಲಾದಲ್ಲಿ ಸೆರೆಹಿಡಿಯಲಾಯಿತು. ಮಾರ್ಷಲ್ ಲಾ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ನಂತರ ಅವರನ್ನು ಜನವರಿ 20, 1922 ರಂದು ಗುಂಡಿಕ್ಕಿ ಕೊಲ್ಲಲಾಯಿತು” ಎಂದು ಪುಸ್ತಕ ಹೇಳುತ್ತದೆ.

ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ಐಸಿಎಸ್‌ಆರ್)ಯು ಭಾರತ ಸ್ವಾತಂತ್ರ್ಯ ಇತಿಹಾಸದ ಅಧ್ಯಯನದಲ್ಲಿ ಕಾಣಸಿಗದೇ ಇರುವ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ಮರು ಬರೆಯಲು ಮುಂದಾಗಿದೆ. ಅದು, ಸ್ವಾತಂತ್ರ್ಯಕ್ಕಾಗಿ ಮಡಿದ ಹುತಾತ್ಮರ ಬಗ್ಗೆ (ಹಿನ್ನೆಲೆಗಳು, ಉದ್ಯೋಗಗಳು, ಸಂಬಂಧಗಳು ಮತ್ತು ಸಾವಿನ ಸಂದರ್ಭಗಳು) ಬರೆಯಲು ಎಲ್ಲೆಡೆ ಪ್ರವಾಸ ಕೈಗೊಂಡಿದ್ದು, ರಾಜ್ಯಗಳಲ್ಲಿನ ವಿವಿಧ ದಾಖಲೆಗಳನ್ನು ಕಲೆಹಾಕಿದೆ ಎಂದು ಪುಸ್ತಕದ ಮುನ್ನುಡಿಯಲ್ಲಿ ಬರೆಯಲಾಗಿದೆ.

ವರಿಯಮ್ಕುನ್ನಾಥ್ ಅವರ ಚಲನಚಿತ್ರವನ್ನು ತೀವ್ರವಾಗಿ ವಿರೋಧಿಸಿದ್ದ ಬಿಜೆಪಿ ವಕ್ತಾರ ಸಂದೀಪ್ ವಾರಿಯರ್ ಅವರನ್ನು ಸಂಪರ್ಕಿಸಿದಾಗ, ಅವರು ಆ ಪುಸ್ತಕವನ್ನು ಅಧ್ಯಯನ ಮಾಡಿಲ್ಲ. ಹಾಗಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿರುವುದಾಗಿ ನ್ಯೂಸ್‌ ಮಿನಿಟ್ ವರದಿ ಮಾಡಿದೆ.


ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಕಾಂಗ್ರೆಸ್‌ ಬಲ 25ಕ್ಕೆ ಕುಸಿಯದಿರಲಿ: ಕಾಳಜಿಯಿಂದ ಪತ್ರ ಬರೆದಿದ್ದೇವೆ ಎಂಬ ಭಿನ್ನಮತೀಯರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights