ಹಬ್ಬಕ್ಕೆಂದು ಕೊತ್ತಂಬರಿ ಬೇಕಾ..? : ಖರೀದಿಗೂ ಮುನ್ನ ಬೆಲೆ ತಿಳ್ಕೊಂಡು ಬಿಡಿ..

ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ರಾಜ್ಯದಲ್ಲಿ ಪ್ರತೀ ಭಾನುವಾರ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹೀಗಾಗಿ ಸೋಮವಾರ ನಡೆಯುವ ರಂಜಾನ್ ಹಬ್ಬಕ್ಕೂ ಕೊಂಚ ಅಡೆತಡೆ ಉಂಟಾಗಿದ್ದು, ತರಕಾರಿ ಖರೀದಿ ಮಾಡುವ ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟಿದೆ ಕೊತ್ತಂಬರಿ.

ಹೌದು… ಇಂದು ಕೊತ್ತಂಬರಿ ಸೊಪ್ಪಿನ ಬೆಲೆ ಈರುಳ್ಳಿ, ಟಮೋಟೋ, ಆಲುಗಡ್ಡೆಗಿಂತಲೂ ಹೆಚ್ಚಾಗಿದ್ದು, ಗ್ರಾಹಕರು ಖರೀದಿಗೆ ಬೇಸರದಿಂದ ಹಿಂದೇಟು ಹಾಕುತ್ತಿರುವ ದೃಶ್ಯಗಳು ಕಂಡು ಬಂದಿವೆ. ಒಂದು ಕಟ್ ಕೊತ್ತಂಬರಿ ಸೊಪ್ಪಿಗೆ ಹತ್ತಲ್ಲಾ ಐವತ್ತಲ್ಲಾ ನೂರಲ್ಲಾ 120 ರೂಪಾಯಿ ಬೆಲೆ ನಿಗಧಿಯಾಗಿದೆ. ಇಂದು ಬೆಳಿಗ್ಗೆ 7 ಗಂಟೆಯಿಂದ ಕರ್ಫ್ಯೂ ಜಾರಿಯಲ್ಲಿದ್ದು ಹಬ್ಬದ ತಯಾರಿಗೆ ದೊಡ್ಡ ಹೊಡೆತ ಬಿದ್ದಿದೆ. ಅದಕ್ಕೂ ಮುನ್ನ ಕೊಂಚ ತರಕಾರಿ ಖರೀದಿಗೆ ಮುಂದಾದ ಮಂದಿಗೆ ಕೊತ್ತಂಬರಿ ಸೊಪ್ಪಿನ ಬೆಲೆ ಕೇಳಿ ಶಾಕ್ ಆಗಿದೆ.

ಹಬ್ಬದ ಪ್ರಯುಕ್ತ ಕೊತ್ತಂಬರಿ ಸೊಪ್ಪಿನ ಬೆಲೆ ಗಗನಕ್ಕೇರಿದ್ದು, ಈ ಹಿಂದಿನ ಬೆಲೆಗಿಂತ ಐದು ಪಟ್ಟು ಹೆಚ್ಚಾಗಿದೆ. 20ರೂಪಾಯಿಗೆ ಒಂದು ಕಟ್ ಮಾರಾಟವಾಗುತ್ತಿದ್ದ ಕೊತ್ತಂಬರಿ ಬೆಲೆ ಕಳೆದೆರೆಡು ದಿನಗಳಿಮದ 60 ರಿಂದ 80ರವೆರೆಗೆ ಹೆಚ್ಚಾಗಿತ್ತು. ಆದರಿಂದ ದಿಢೀರನೇ 120 ರೂಪಾಯಿಯಷ್ಟು ಬೆಲೆ ದುಪ್ಪಟ್ಟಾಗಿದೆ. ರಂಜಾನ್ ಹಬ್ಬ ಆಚರಿಸುತ್ತಿರುವ ಮುಸ್ಲಿಂ ಬಾಂಧವರಿಗೆ ಇದು ನುಂಗಲಾರದ ತುತ್ತಾಗಿದೆ. ಮೊದಲೇ ಸಂಕಷ್ಟದಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಿಸುತ್ತಿದ್ದಾರೆ.

ಪುದೀನ ದರ ಮಾತ್ರ ಹೆಚ್ಚಾಗಿಲ್ಲ. ಕಳೆದ ವಾರ 20 ರೂಪಾಯಿ ಇದ್ದ ಪುದೀನ, ಅದೇ ದರದಲ್ಲಿ ಮಾರಾಟವಾಗುತ್ತಿದೆ. ತರಕಾರಿ ದರ ಒಂದಷ್ಟು ಹೆಚ್ಚಾದ್ರೂ ಪ್ರತಿ ಅಡುಗೆ ಘಮ ಘಮಿಸಲು ಬೇಕಾಗುವ ಅದರಲ್ಲಿ ಮಾಂಸ ಅಡುಗೆಗೆ ಕೊತ್ತಂಬರಿ ಬೇಕೇ ಬೇಕು. ಇದರಿಂದಾಗಿ ದುಬಾರಿ ಬೆಲೆಯಿದ್ದರೂ ಅನಿವಾರ್ಯವಾಗಿ ಮುಸ್ಲಿಂ ಬಾಂಧವರು ಕೊತ್ತಂಬರಿ ಖರೀದಿಸುತ್ತಿದ್ದ ದೃಶ್ಯ ಬೆಂಗಳೂರು ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಕಂಡು ಬಂದಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights