3 ಲಕ್ಷ ಕಾಪು ಮಹಿಳೆಯರಿಗೆ 490 ಕೋಟಿ ರೂ. ಬಿಡುಗಡೆ ಮಾಡಿದ ಆಂಧ್ರ ಸರ್ಕಾರ!

ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ವೈಎಸ್ಆರ್‌ ಕಾಪು ನೆಸ್ತಮ್‌ ಸ್ಕೀಮ್‌ನ ಅಡಿಯಲ್ಲಿ ಫಲಾನುಭವಿಗಳಿಗೆ ಗುರುವಾರ ಆರ್ಥಿಕ ಸಹಾಯವನ್ನು ಬಿಡುಗಡೆ ಮಾಡಲಿದೆ. ಕಾಪು ಸಮುದಾಯದ ಮಹಿಳೆಯರ ಜೀವನ ಮಟ್ಟವನ್ನು ಹೆಚ್ಚಿಸಲು ಸರ್ಕಾರ ಸತತ ಎರಡನೇ ವರ್ಷ ಆರ್ಥಿಕ ನೆರವು ನೀಡುತ್ತಿದೆ.

ಪ್ರಕಟಣೆಯ ಪ್ರಕಾರ, ಈ ಯೋಜನೆಯಡಿ ಕಾಪು, ಬಲಿಜಾ, ಒಂಟಾರಿ ಮತ್ತು ತೆಲಗಾ ಸಮುದಾಯಗಳಿಗೆ ಸೇರಿದ 45 ರಿಂದ 60 ವರ್ಷದೊಳಗಿನ ಅರ್ಹ ಮಹಿಳೆಯರಿಗೆ ರಾಜ್ಯ ಸರ್ಕಾರವು ಐದು ವರ್ಷಗಳಲ್ಲಿ ವಾರ್ಷಿಕ 15,000 ರೂ.ಗಳಂತೆ  75,000 ರೂ.ಗಳ ಆರ್ಥಿಕ ನೆರವು ನೀಡಲಿದೆ. ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಈ ಮೊತ್ತವನ್ನು ಜಮಾ ಮಾಡಲಾಗುತ್ತದೆ.

ಈ ಯೋಜನೆಯನ್ನು 2020ರ ಜೂನ್ 24 ರಂದು ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ 3,27,349 ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಒಟ್ಟು 491.02 ಕೋಟಿ ರೂ. ಜಮೆ ಮಾಡಲಾಗಿದೆ. ಗುರುವಾರ, ರಾಜ್ಯ ಸರ್ಕಾರವು 3,27,244 ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಲ್ಲಿ 490.86 ಕೋಟಿ ರೂ. ಸಾಲವನ್ನು ನೀಡಲಿದೆ, ಎರಡು ವರ್ಷಗಳಲ್ಲಿ ಒಟ್ಟು 981.88 ಕೋಟಿ ರೂ. ನೆರವು ನೀಡಲಾಗಿದೆ

ಹಿಂದಿನ ಸರ್ಕಾರ ಕಾಪು, ಬಲಿಜಾ, ಒಂಟಾರಿ ಮತ್ತು ತೆಲಗಾ ಸಮುದಾಯಗಳಿಗೆ ಸೇರಿದ ಮಹಿಳೆಯರ ಅಭಿವೃದ್ಧಿಗಾಗಿ ಸರಾಸರಿ 400 ಕೋಟಿ ರೂ. ನೀಡಿತ್ತು. ವೈಎಸ್ಆರ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕಾಪು ಸಮುದಾಯದ 59,63,308 ಮಹಿಳೆಯರಿಗೆ 12,126.78 ಕೋಟಿ ರೂ. ಖರ್ಚು ಮಾಡುವ ಮೂಲಕ ಪ್ರಯೋಜನಗಳನ್ನು ವಿಸ್ತರಿಸಿದೆ. ಇದು ಹಿಂದಿನ ಸರ್ಕಾರ ನೀಡಿದ ಸಹಾಯಕ್ಕಿಂತ 15 ಪಟ್ಟು ಹೆಚ್ಚಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ 50 ಲಕ್ಷ ಭಾರತೀಯರು ಸಾವು: ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights