ಬಾಲಕಿಯನ್ನು ಕೊಂದು ಸೇತುವೆಗೆ ಎಸೆದ ಸಂಬಂಧಿಗಳು : ರಾತ್ರಿಯಿಡಿ ನೇತಾಡಿದ ಮೃತದೇಹ!

ಬಾಲಕಿಯನ್ನು ಕೊಲೆಗೈದ ಸಂಬಂಧಿಗಳು ಆಕೆಯ ದೇಹವನ್ನು ಸೇತುವೆಗೆ ಎಸೆದು ದೇಹ ನೇತಾಡಿದ ದಾರುಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯನ್ನು ಸೋಮವಾರ ಸಂಜೆ ಮತ್ತು ಮಂಗಳವಾರ ರಾತ್ರಿ ನಡುವೆ ಕೊಲೆಗೈದ ಸಂಬಂಧಿಗಳು ಸೇತುವೆಗೆ ದೇಹ ಎಸೆದು ಹೋಗಿದ್ದಾರೆ. ಆದರೆ ಕೆಲ ಗಂಟೆಗಳ ಕಾಲ ಸೇತುವೆಗೆ ದೇಹ ಸಿಕ್ಕಿಕೊಂಡು ನೇತಾಡಿದೆ. ಬಾಲಕಿಯನ್ನು ಅಜ್ಜ ಮತ್ತು ಇಬ್ಬರು ಚಿಕ್ಕಪ್ಪಂದಿರು ಕೊಲೆಗೈದಿದ್ದಾರೆಂದು ಆರೋಪಿಸಲಾಗಿದೆ.

ಕೊಲೆಯಾದ ಬಾಲಕಿಯ ಜೀವನಶೈಲಿಯಲ್ಲಿ ಸಮಸ್ಯೆ ಇತ್ತು ಎಂದು ಬಾಲಕಿ ಚಿಕ್ಕಮ್ಮ ಪೊಲೀಸ್ ವಿಚಾರಣೆಯಲ್ಲಿ ಹೇಳಿಕೊಂಡಿದ್ದಾರೆ.

ಮಂಗಳವಾರ ಬಾಲಕಿ ದೇಹ ಸೇತುವೆಗೆ ನೇತಾಡುವುದನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ಹೋಗಿದೆ. ಪೊಲೀಸರು ಸ್ಥಳೀಯರ ಸಹಾಯದಿಂದ ಶವವನ್ನು ಸೇತುವೆಯಿಂದ ತೆಗೆದು ಸ್ಥಳಪರಿಶೀಲನೆ ಮಾಡಿದ್ದಾರೆ.

ಬಾಲಕಿಯ ತಂದೆ ಪಂಜಾಬ್‌ನಲ್ಲಿ ವಲಸೆ ಕಾರ್ಮಿಕರಾಗಿದ್ದು ಬಾಲಕಿ ಮತ್ತು ತಾಯಿ ಇತ್ತೀಚೆಗೆ ಡಿಯೋರಿಯಾದಲ್ಲಿರುವ ತಮ್ಮ ಅಳಿಯಂದಿರ ಮನೆಯಲ್ಲಿ ವಾಸಿಸಲು ಬಂದಿದ್ದರು.

ಆರೋಪಿಗಳು ಯಾವಾಗಲೂ ಹುಡುಗಿ ಮತ್ತು ಅವಳ ಕುಟುಂಬದ ಜೀವನಶೈಲಿಯೊಂದಿಗೆ ಹೊಂದಿಕೊಳ್ಳುತ್ತಿರಲಿಲ್ಲ. ಬಾಲಕಿ ಕುಟುಂಬ ಏನೇ ತಿಂದರೂ, ಅವರು ಯಾವುದೇ ಬಟ್ಟೆ ಧರಿಸಿದ್ದರೂ ಅವರು ಅಸೂಯೆ ಪಡುತ್ತಿದ್ದರು. ಈ ಬಗ್ಗೆ ಹುಡುಗಿ ತನ್ನ ಅಜ್ಜನೊಂದಿಗೆ ವಾಗ್ವಾದ ನಡೆಸಿ ಅವನನ್ನು ನಿಂದಿಸಿದಳು. ಹೀಗಾಗಿ ಕೋಪಗೊಂಡ ಬಾಲಕಿ ಅಜ್ಜ ಮತ್ತು 2-3 ಚಿಕ್ಕಪ್ಪಂದಿರು ಬಾಲಕಿ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಅವಳು ಪ್ರಜ್ಞೆ ತಪ್ಪಿ ಗಂಭೀರವಾದಾಗ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಸೇತುವೆಯಿಂದ ಎಸೆದಿದ್ದಾರೆ ಎಂದು ಬಾಲಕಿಯ ಚಿಕ್ಕಮ್ಮ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆರೋಪಿ ಚಿಕ್ಕಪ್ಪ ಇನ್ನೂ ಪರಾರಿಯಾಗಿದ್ದು ಬಾಲಕಿಯ ಅಜ್ಜನನ್ನು ಬಂಧಿಸಲಾಗಿದೆ ಎಂದು ಡಿಯೋರಿಯಾ ಪೊಲೀಸ್ ಮುಖ್ಯಸ್ಥ ಶ್ರೀಪತಿ ಮಿಶ್ರಾ ಹೇಳಿದ್ದಾರೆ.

Spread the love

Leave a Reply

Your email address will not be published. Required fields are marked *