‘ಕೊರೊನಾ ಹತೋಟಿಗೆ ಬಂದರೆ ಲಾಕ್ಡೌನ್ ಸಡಿಲಿಕೆ’ ಡಾ.ಕೆ ಸುಧಾಕರ್!
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಬಂದರೆ ಹಂತ ಹಂತವಾಗಿ ಲಾಕ್ ಡೌನ್ ಸಡಿಲಗೊಳಿಸುವುದಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ. ಈ ಬಗ್ಗೆ ತಜ್ಞರು ವರದಿ ನೀಡಿದ್ದು, ವರದಿಯ ಬಗ್ಗೆ ಸಿಎಂ ಅವರಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, “ ಸಿಎಂಗೆ ತಜ್ಷರು ನೀಡಿದ ವರದಿಯನ್ನು ನೀಡಿದ್ದೇನೆ. ತಜ್ಞರ ಪ್ರಕಾರ ಪ್ರತಿದಿನ ಸೋಂಕಿತರ ಸಂಖ್ಯೆ 5 ಸಾವಿರಕ್ಕಿಂತ ಕಡಿಮೆ ಕಂಡು ಬಂದರೆ ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಲು ಸಲಹೆ ನೀಡಿದ್ದಾರೆ. ಜೂನ್ 7ರವರೆಗೂ ಸಮಯವಿದೆ. ನಮ್ಮ ನಾಯಕರು ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿರುವುದರಿಂದ ನಮ್ಮ ನಾಯಕರು ಮುಂದಿನ ತೀರ್ಮಾನ ಕೈಗೊಳ್ಳುತ್ತಾರೆ. ಜೊತೆಗೆ ಜನಹಿತ ಅಭಿಪ್ರಾಯವನ್ನು ತಿಳಿಸುತ್ತೇವೆ ಎಂದಿದ್ದಾರೆ.
ಇನ್ನೂ ರಾಜ್ಯದಲ್ಲಿ ವೇಹವಾಗಿ ಹರಡುತ್ತಿರುವ ಬ್ಲಾಕ್ ಫಂಗಸ್ ಬಗ್ಗೆ ಮಾತನಾಡಿದ ಅವರು, “ಬ್ಲಾಕ್ ಫಂಗಸ್ ಕಣ್ಣಿಗೆ ತಗುಲಿದರೆ ಕಣ್ಣೇ ಕಳೆದುಕೊಳ್ಳಬೇಕಾಗುತ್ತದೆ. ಇನ್ನೂ ಮೆದುಳಿಗೆ ತಗುಲಿದರೆ ಅಪಾಯ ಅಧಿಕ. ಹೀಗಾಗಿ ಇದು ಮೆದುಳಿಗೆ ಹರಡದಂತೆ ನೋಡಿಕೊಳ್ಳಬೇಕು. ಈಗಾಗಲೇ ಬ್ಲಾಕ್ ಫಂಗಸ್ ಔಷಧ 1300 ವಯಲ್ಸ್ ಬಂದಿದ್ದಾಗಿದೆ. ಆದರೆ ಇದು ಚಿಕಿತ್ಸೆಗೆ ಸಾಕಾಗುವುದಿಲ್ಲ. ನಾನು ಕೇಮದ್ರ ಸಚಿವ ಡಿ.ವಿ ಸದಾನಂದ ಗೌಡರ ಜೊತೆ ಪ್ರತಿದಿನ ಮಾತನಾಡುತ್ತಿದ್ದೇನೆ. ಬ್ಲಾಕ್ ಫಂಗಸ್ ಗೆ ಚಿಕಿತ್ಸೆ ಗೆ ಔಷಧಿ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ. ಪ್ರತಿನಿತ್ಯ ೀ ಬಗ್ಗೆ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಮಾತನಾಡುತ್ತಿದ್ದೇನೆ. ಜೂನ್ ಮೊದಲ ವಾರದಲ್ಲೇ ಔಷಧಿ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

