ಮುಂದೊಂದು ದಿನ ಕರಾಚಿ ಅಖಂಡ ಭಾರತದ ಭಾಗವಾಗುತ್ತದೆ: ದೇವೇಂದ್ರ ಫಡ್ನವೀಸ್
ಅಖಂಡ ಭಾರತ ನಿರ್ಮಾಣವಾಗುವುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಮುಂದೊಂದು ದಿನ ಪಾಕಿಸ್ಥಾನದಲ್ಲಿರುವ ಕರಾಚಿ ನಗರವು ಭಾರತದ ಭಾಗವಾಗಲಿದೆ ಎಂದು ಮಹಾರಾಷ್ಟ್ರದ ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಶಿವಸೇನಾ ಪಕ್ಷದ ಕಾರ್ಯಕರ್ತನೊಬ್ಬ ಸಿಹಿ ತಿಂಡಿ ಮಾರಾಟದ ಅಂಗಡಿ ಮಾನೀಕನಿಗೆ ಅಂಗಡಿಗೆ ಇಡಲಾಗಿದ್ದ ‘ಕರಾಚಿ’ ಹೆಸರನ್ನು ತೆಗೆಯುವಂತೆ ಧಮ್ಕಿ ಹಾಕಿದ್ದರು. ಈ ಘಟನೆ ಮಹಾರಾಷ್ಟ್ರದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಅಂಗಡಿ ಮಾಲೀಕನಿಗೆ ಶಿವಸೇನಾ ಕಾರ್ಯಕರ್ತನ ಬೆದರಿಕೆ ಹಾಕಿದ್ದರ ಬಗ್ಗೆ ಮಾತನಾಡಿರುವ ಫಡ್ನವೀಸ್, ಕರಾಚಿಯು ಪಾಕಿಸ್ತಾನದಲ್ಲಿರುವ ಕಾರಣ ಅಂಗಡಿ ಮಾಲೀಕನಿಗೆ ತನ್ನ ಅಂಗಡಿಗಿಟ್ಟಿದ್ದ ‘ಕರಾಚಿ’ ಎಂಬ ಹೆಸರನ್ನು ತೆಗೆಯುವಂತೆ ಹೇಳಿದ್ದಾರೆ. ಆದರೆ, ನಾವು ಅಖಂಡ ಭಾರತದ ಕನಸು ಕಂಡಿದ್ದೇವೆ. ಅದರಲ್ಲಿ ನಂಬಿಕೆಯನ್ನು ಇಟ್ಟಿದ್ದೇವೆ. ಹಾಗಾಗಿ ಮುಂದೊಂದು ದಿನ ಕರಾಚಿ ನಗರ ಭಾರತದ ಭಾಗವಾಗಲಿದೆ. ಭಾರತವು ಅಖಂಡ ಭಾರತವಾಗಲಿದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ: ಸಚಿವ ಆರ್ ಅಶೋಕ್

