ಕರುವಣ್ಣೂರು ಬ್ಯಾಂಕ್‌ನಲ್ಲಿ 300 ಕೋಟಿ ರೂ. ಲೂಟಿಗೆ ಅಧಿಕಾರಿಗಳ ಸಹಾಯ; ಪೇಪರ್‌ಗಳ ಫೋರ್ಜರಿ!

ಕೇರಳದ ಇರಿಂಜಲಕುಡ ಬಳಿಯ ಕರುವಣ್ಣೂರ್ ಸೇವಾ ಸಹಕಾರಿ ಬ್ಯಾಂಕಿನಲ್ಲಿ 2011ರಿಂದ ಅಕ್ರಮ ವ್ಯವಹಾರಗಳು ನಡೆದಿದ್ದು, ಕೆಲವು ಅಧಿಕಾರಿಗಳು ಮತ್ತು ಅವರ ಸಂಬಂಧಿಕರು ಸುಮಾರು 100 ಕೋಟಿ ರೂ.ಗಿಂತಲೂ ಹೆಚ್ಚಿನ ಸಾಲವನ್ನು ಪಡೆದುಕೊಂದಿದ್ದಾರೆ ಎಂದು ಸಹಕಾರ ಇಲಾಖೆಯ ಸಹಾಯಕ ರಿಜಿಸ್ಟ್ರಾರ್ ಒಮಾನಾ ಕೆಎಲ್ ನೇತೃತ್ವದ ತನಿಖಾ ತಂಡ ವರದಿಯಲ್ಲಿ ಹೇಳಿದೆ.

ಬ್ಯಾಂಕ್‌ನ ಕೆಲವು ಅಧಿಕಾರಿಗಳು ಅವರ ವೈಯಕ್ತಿಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಪರಸ್ಪರ ಸಹಾಯ ಮಾಡಿಕೊಂಡು ರಚಿಸಿದ ನೆಕ್ಸಸ್ ಸಾಕ್ಷ್ಯಾಧಾರಗಳನ್ನು ವರದಿಯು ಬಹಿರಂಗ ಪಡಿಸಿದೆ. ಮಿತಿಮೀರಿದ ಸಾಲಗಳ ಮೇಲೆ ಕೇಂದ್ರೀಕರಿಸಿದಂತೆ, ತನಿಖೆ ಪ್ರಾರಂಭವಾಗುವ ಮೊದಲು ಸಂಬಂಧಪಟ್ಟ ಗ್ರಾಹಕರು ಮೊದಲೇ ಫ್ಲೌಟಿಂಗ್ ನಾರ್ಮ್ಸ್‌ಗಳನ್ನು ನೀಡಿದ್ದರು ಮತ್ತು ಇತ್ಯರ್ಥಪಡಿಸಿದ ಹಲವಾರು ಸಾಲಗಳು ಅದರ ವ್ಯಾಪ್ತಿಗೆ ಬಂದಿಲ್ಲ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

003 ರಲ್ಲಿ ವಂಚನೆ ಪ್ರಾರಂಭವಾಯಿತು. ಎಲ್ಲಾ ಅಕ್ರಮ ವಹಿವಾಟುಗಳನ್ನು ಲೆಕ್ಕ ಹಾಕಿದರೆ ಒಟ್ಟು ವಂಚನೆ 300 ಕೋಟಿ ರೂ. ಗಳಷ್ಟಿದ್ದು, 2005 ರಲ್ಲಿ ಹಿರಿಯ ಸಿಪಿಎಂ ಮುಖಂಡರಿಗೆ ಅವರು ಅವ್ಯವಹಾರಗಳ ಬಗ್ಗೆ ದೂರು ನೀಡಿದ್ದೇನೆ. ಆದರೆ, ಅವರು ದೂರನ್ನು ನಿರ್ಲಕ್ಷಿಸಿದರು ಎಂದು ಬ್ಯಾಂಕ್‌ ಸಿಬ್ಬಂದಿ ಸುರೇಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ: ಜಲ ಸಂಪನ್ಮೂಲ ಇಲಾಖೆಯಲ್ಲಿ 20 ಸಾವಿರ ಕೋಟಿ ರೂ ಭ್ರಷ್ಟಾಚಾರ!?

ಬ್ಯಾಂಕಿಗೆ ಹೊಸ ಸದಸ್ಯರನ್ನು ನೇಮಿಸುವ ಹಂತದಿಂದಲೇ ಬ್ಯಾಂಕಿನಲ್ಲಿನ ಅವ್ಯವಹಾರಗಳು ಪ್ರಾರಂಭವಾದವು ಎಂದು ತನಿಖಾ ವರದಿ ಹೇಳುತ್ತದೆ.

“ಸಹಕಾರ ಕಾನೂನು ಮತ್ತು ಸಂಬಂಧಿತ ನಿಯಮಗಳು ಮತ್ತು ಸಹಕಾರಿ ಬ್ಯಾಂಕಿನ ಬೈಲಾಗಳಲ್ಲಿ ಸದಸ್ಯತ್ವಗಳಿಗೆ ನಿಯಮಗಳನ್ನು ನೀಡಲಾಗಿದೆ. ಬ್ಯಾಂಕಿನ ವ್ಯಾಪ್ತಿಯಲ್ಲಿ ವಾಸಿಸುವವರು ಅಥವಾ ಆ ಪ್ರದೇಶದಲ್ಲಿ ಸ್ವಂತ ಜಮೀನು (ಪೊರತಿಸ್ಸೆರಿ, ಮಡೈಕೋಣಂ ಮತ್ತು ಇರಿಂಜಲಕುಡ ಗ್ರಾಮಗಳು) ಹೊಂದಿರುವವರು ಮಾತ್ರ ಸದಸ್ಯತ್ವಕ್ಕೆ ಅರ್ಹರು ಎಂದು ನಿರ್ದಿಷ್ಟವಾಗಿ ಹೇಳಲಾಗಿದೆ. ಆದರೆ, ಸದಸ್ಯರನ್ನು ತ್ರಿಶೂರ್ ಜಿಲ್ಲೆಯ ಹೊರಗಿನಿಂದಲೂ ಸೇರಿಸಲಾಗಿದ್ದು, ನಿಯಮಗಳನ್ನು ಉಲ್ಲಂಘಿಸಿದೆ ಎಂದು ಗೊತ್ತಾಗಿದೆ. ಅವರ ಗುರುತಿನ ದಾಖಲೆಗಳು ಮತ್ತು ವಿಳಾಸ ಪುರಾವೆಗಳನ್ನು ಫೈಲ್‌ನಲ್ಲಿ ಇರಿಸಲಾಗಿದ್ದರೂ, ಅರ್ಜಿಗೆ ಸಂಬಂಧಿಸಿದ ವಿಳಾಸವನ್ನು ಮಾನದಂಡಕ್ಕೆ ತಕ್ಕಂತೆ ತಿರುಚಲಾಗಿದೆ” ಎಂದು ವರದಿ ಹೇಳುತ್ತದೆ.

ಕಾನೂನುಬಾಹಿರ ಸದಸ್ಯರಿಗೆ ಬ್ಯಾಂಕ್ 50 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಸಾಲವನ್ನು ನೀಡಿದೆ. ಅಕ್ರಮವಾಗಿ ಸೇರ್ಪಡೆಯಾದ ಅಂತಹ ಸದಸ್ಯರಿಗೆ 50 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ನೂರಾರು ಸಾಲಗಳನ್ನು ನೀಡಲಾಗಿದೆ. ಅವರಲ್ಲಿ ಅನೇಕರು ತರುವಾಯ ಡೀಫಾಲ್ಟರ್‌ಗಳಾಗಿ ಮಾರ್ಪಟ್ಟಿದ್ದಾರೆ. ಪರಿಶೀಲನೆಗಾಗಿ ಬ್ಯಾಂಕ್ ಸಿಬ್ಬಂದಿಗಳು ಸದಸ್ಯರ ಸಂಪೂರ್ಣ ವಿವರಗಳನ್ನುತಮಗೆ ನೀಡಿಲ್ಲ ಎಂದು ಅಧಿಕಾರಿಗಳು ವರದಿಯಲ್ಲಿ ದಾಖಲಿಸಿದ್ದಾರೆ.

ಇದನ್ನೂ ಓದಿ: ಕೆಆರ್‌ ಪೇಟೆ: ನಾಲೆ ಆಧುನೀಕರಣ ಹೆಸರಲ್ಲಿ 500 ಕೋಟಿ ಲೂಟಿ?; ಲೋಕಯುಕ್ತದಿಂದ ಪರಿಶೀಲನೆ!

“ಅಕ್ರಮ ಸದಸ್ಯರ ದಾಖಲಾತಿಗೆ ಅನುಕೂಲವಾಗುವಂತೆ, ನಿರ್ದೇಶಕರ ಮಂಡಳಿಯ ನಿಯಮಾವಳಿಗಳ ಪುಸ್ತಕವನ್ನು ತಿದ್ದಲಾಗಿದೆ. ಬ್ಯಾಂಕ್ ಅಧ್ಯಕ್ಷರ ಸಹಿಯನ್ನು ಸಹ ನಕಲಿ ಮಾಡಲಾಗಿದೆ. ಅಂತಹ 54 ಸದಸ್ಯರ ಪಟ್ಟಿಯನ್ನು ವರದಿಯಲ್ಲಿ ಸೇರಿಸಲಾಗಿದೆ” ಎಂದು ತನಿಖೆ ಕಂಡುಹಿಡಿದಿದೆ.

ಸದಸ್ಯರಿಗೆ ವೈಯಕ್ತಿಕ ಗರಿಷ್ಠ ಸಾಲ ಪಡೆಯುವ ಶಕ್ತಿ (ಐಎಂಬಿಪಿ)ಯನ್ನು ಮೀರಿದ ಸಾಲಗಳನ್ನು ನೀಡಲಾಗಿದೆ. ಐಎಂಬಿಪಿ ಸ್ಕೋರ್ ಅರ್ಹತಾ ಮಾನದಂಡಗಳಿಗೆ ಸರಿಹೊಂದದ ಸದಸ್ಯರಿಗೆ ದೊಡ್ಡ ಮೊತ್ತದ ಸಾಲವನ್ನು ನೀಡಲಾಗಿದೆ. ಐಎಂಬಿಪಿಯ ಯಾವುದೇ ಮಾನ್ಯ ಪರೀಕ್ಷೆಗಳೂ ಇಲ್ಲದೆ, ಬ್ಯಾಂಕ್ ಮಂಜೂರು ಮಾಡಿದ 34 ಲಕ್ಷ ರೂ.ಗಳಿಂದ 85 ಲಕ್ಷ ರೂ.ವರೆಗಿನ 28 ಸಾಲಗಳನ್ನು ವರದಿಯಲ್ಲಿ ಪಟ್ಟಿ ಮಾಡಲಾಗಿದೆ. ಇವರೆಲ್ಲರನ್ನೂ ನಂತರ ಡೀಫಾಲ್ಟರ್‌ಗಳಾಗಿ ಮಾರ್ಪಡಿಸಲಾಗಿದೆ.

ಬೈಲಾವು ಸಾಲವಾಗಿ ಬ್ಯಾಂಕ್ ನೀಡಬಹುದಾದ ಗರಿಷ್ಠ ಮೊತ್ತವನ್ನು 50 ಲಕ್ಷ ರೂ.ಗೆ ನಿರ್ಬಂಧಿಸಿದ್ದರೂ, ತನಿಖೆಯಲ್ಲಿ ಕಳೆದ 10 ವರ್ಷಗಳಲ್ಲಿ ಬ್ಯಾಂಕ್ ವಿತರಿಸಿದ 50 ಲಕ್ಷ ರೂ.ಗಿಂತ ಹೆಚ್ಚಿನ 279 ಸಾಲಗಳು ಕಂಡುಬಂದಿವೆ. ವಾಡಿಕೆಯ ಲೆಕ್ಕಪರಿಶೋಧನೆಯನ್ನು ಸಹಕಾರ ಇಲಾಖೆಯಿಂದ ಮಾಡಲಾಗಿದ್ದರೂ, ಅಂತಹ ದೋಷಗಳನ್ನು ಎಂದಿಗೂ ವರದಿ ಮಾಡಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ: ಶ್ರೀರಾಮನ ಹೆಸರಲ್ಲಿ ಭ್ರಷ್ಟಾಚಾರ; ಟ್ರಸ್ಟ್‌ ವಿರುದ್ದ 16 ಕೋಟಿ ರೂ ಅವ್ಯವಹಾರ ಆರೋಪ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights