ಎರಡನೆ ಬಾರಿಗೂ ಗಂಡು ಮಗುವಿಗೆ ಜನ್ಮ ನೀಡಿದ ಕರೀನಾ ಕಪೂರ್..!

ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಗಂಡು ಮಗುವಿಗೆ ಪೋಷಕರಾಗಿದ್ದಾರೆ. ದಂಪತಿಗಳು ಇಂದು (ಫೆಬ್ರವರಿ 21)  ಇಂದು ಮುಂಜಾನೆ 4:45ಕ್ಕೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಗಂಡು ಮಗುವನ್ನು ಸ್ವಾಗತಿಸಿದ್ದಾರೆ.

ಕರೀನಾ ಮತ್ತು ಸೈಫ್ ಗೆ ನಾಲ್ಕು ವರ್ಷದ ತೈಮೂರ್ ಅಲಿ ಖಾನ್ ಎಂಬ ಮಗನಿದ್ದಾನೆ. ಕರೀನಾ ಮತ್ತು ಸೈಫ್ ಗೆ ಇದು ಎರಡನೇ ಗಂಡು ಮಗು. ತಮ್ಮ ಎರಡನೇ ಮಗುವಿನ ಜನನಕ್ಕೂ ಮುಂಚೆಯೇ ಸೈಫ್ ಮತ್ತು ಕರೀನಾ ದೊಡ್ಡ ಮನೆಗೆ ಪ್ರವೇಶ ಮಾಡಿದ್ದಾರೆ. ಅದು ಅವರ ಹಿಂದಿನ ಮನೆಯ ಎದುರು ಇದೆ.

ತನ್ನ ಮೊದಲ ಗರ್ಭಧಾರಣೆಯಂತೆಯೇ ಈ ಬಾರಿ ಕೂಡ ಕರೀನಾ ಕಪೂರ್ ಖಾನ್ ತನ್ನ ಕೆಲಸದಿಂದ ವಿರಾಮ ತೆಗೆದುಕೊಳ್ಳಲಿಲ್ಲ. ನಟಿ ಗರ್ಭಾವಸ್ಥೆಯಲ್ಲಿಯೂ ಸಹ ತನ್ನ ಬ್ಯಾಕ್-ಟು-ಬ್ಯಾಕ್ ಪ್ರಾಜೆಕ್ಟ್‌ಗಳ ಚಿತ್ರೀಕರಣದಲ್ಲಿದ್ದರು. ಫೋಟೋಶೂಟ್‌ಗಳಿಂದ ಹಿಡಿದು ವಾಟ್ ವುಮೆನ್ ವಾಂಟ್ ಎಂಬ ಕಾರ್ಯಕ್ರಮದ ಚಿತ್ರೀಕರಣದವರೆಗೆ ಕರೀನಾ ತನ್ನ ಗರ್ಭಾವಸ್ಥೆಯಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದರು. ಹೀಗಾಗಿ ನಟಿ ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದೆ.

ಕರೀನಾ ಕಪೂರ್ ಮುಂದಿನ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಹಾಲಿವುಡ್ ಬ್ಲಾಕ್ಬಸ್ಟರ್ ಫಾರೆಸ್ಟ್ ಗಂಪ್ನ ಹಿಂದಿ ರಿಮೇಕ್ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights